Bagalkote

ಬಾಗಲಕೋಟೆಯಲ್ಲಿ ಕಾಂಗ್ರೆಸ್ ‘ಕೈ’ ಮೇಲು: ಬಿಜೆಪಿ ಭದ್ರಕೋಟೆಯಲ್ಲಿ ಉಮೇಶ್ ಮೇಟಿ ಐತಿಹಾಸಿಕ ದಾಖಲೆ; ಸೋಲೊಪ್ಪಿಕೊಂಡ ವೀರಣ್ಣ ಚರಂತಿಮಠ

Share

• ಬಾಗಲಕೋಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಭರ್ಜರಿ ಜಯ
• 21,866 ಮತಗಳ ಅಂತರದಿಂದ ಉಮೇಶ್ ಮೇಟಿ ಗೆಲುವು
• ವೀರಣ್ಣ ಚರಂತಿಮಠ ಅವರ ದಾಖಲೆ ಮುರಿದ ಮೇಟಿ
• ಕುಂದಾನಗರಿ ಬಾಗಲಕೋಟೆಯಲ್ಲಿ ಕೈ ಕಾರ್ಯಕರ್ತರ ಸಂಭ್ರಮ

ಬಾಗಲಕೋಟೆ ಉಪಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಅಭೂತಪೂರ್ವ ಜಯ ಸಾಧಿಸಿದ್ದಾರೆ. ಬಿಜೆಪಿಯ ವೀರಣ್ಣ ಚರಂತಿಮಠ ಅವರನ್ನು ಬೃಹತ್ ಮತಗಳ ಅಂತರದಿಂದ ಸೋಲಿಸುವ ಮೂಲಕ ಉಮೇಶ್ ಮೇಟಿ ಹೊಸ ದಾಖಲೆ ಬರೆದಿದ್ದಾರೆ. ಈ ಗೆಲುವಿನ ಬಳಿಕ ಬಾಗಲಕೋಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ವಿಜಯೋತ್ಸವ ಮನೆ ಮಾಡಿದೆ.

ಬಾಗಲಕೋಟೆ ಉಪಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಭರ್ಜರಿ ಜಯ ಸಾಧಿಸಿದ್ದಾರೆ. 21,866 ಮತಗಳ ಅಂತರದಲ್ಲಿ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರನ್ನು ಸೋಲಿಸಿ ಉಮೇಶ್ ಮೇಟಿ ಗೆಲುವಿನ ನಗೆ ಬೀರಿದ್ದಾರೆ. ಉಮೇಶ್ ಮೇಟಿ 97,941 ಮತಗಳನ್ನು ಪಡೆದರೆ, ವೀರಣ್ಣ ಚರಂತಿಮಠ 76,075 ಮತಗಳನ್ನು ಗಳಿಸಿದ್ದಾರೆ. ಇನ್ನು ಗೆಲುವಿನ ಅಂತರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಹೊಸ ದಾಖಲೆ ಬರೆದಿದ್ದಾರೆ. ಹಿಂದಿನ ಚುನಾವಣೆಗಳಲ್ಲಿ ಬಾಗಲಕೋಟೆ ಕ್ಷೇತದಲ್ಲಿ ಆಭ್ಯರ್ಥಿಗಳು ಪಡೆದಿದ್ದ ಲೀಡ್ ದಾಖಲೆಯನ್ನು ಉಮೇಶ್ ಮೇಟಿ ಮುರಿದಿದ್ದು, 2018ರಲ್ಲಿ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರ 15,934 ಮತಗಳ ಅಂತರದ ಗೆಲುವೇ ಕ್ಷೇತ್ರದಲ್ಲಿ ಈವರೆಗಿನ ಅತಿದೊಡ್ಡ ಮತಗಳ ಅಂತರವಾಗಿತ್ತು.

ಈ ವೇಳೆ ಮಾತನಾಡಿದ ಕಾಂಗ್ರೆಸ್ ವಿಜಯಿ ಅಭ್ಯರ್ಥಿ ಉಮೇಶ್ ಮೇಟಿ ಅವರು ಇದು ನಮ್ಮ ಗೆಲುವಲ್ಲ. ಕಾರ್ಯಕರ್ತರ ಗೆಲುವು ಎಂದರು. ಸಿಎಂ ಸಿದ್ಧರಾಮಯ್ಯವರು ನಮ್ಮ ತಂದೆ ಸ್ಥಾನಕ್ಕೆ ನಿಂತು ಚುನಾವಣೆಯನ್ನು ನಡೆಸಿಕೊಟ್ಟಿದ್ದಾರೆ. ತಂದೆಯ ಸ್ಥಾನವನ್ನು ಸಿದ್ಧರಾಮಯ್ಯವರು ನಿಂತು ನಮ್ಮ ವಿಜಯಕ್ಕೆ ಶ್ರಮಿಸಿದ್ದಾರೆ ಎನ್ನುತ್ತ ತಂದೆ ಎಚ್.ವೈ. ಮೇಟಿ ಅವರನ್ನು ನೆನೆದರು. ಬೈಟ್

ಇನ್ನು ಉಮೇಶ್ ಮೇಟಿ ವಿಜಯೋತ್ಸವದ ಹಿನ್ನೆಲೆ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಉತ್ಸಾಹ ಮನೆಮಾಡಿದ್ದು, ಗುಲಾಲು ಎರಚಿ ಸಂಭ್ರಮಾಚರಣೆ ಮಾಡಿದರು.

Tags:

error: Content is protected !!