Chikkodi

ಶಾಲಾ ಶಿಕ್ಷಕರ ಸಂಘದ ಚುನಾವಣೆ,ಗುರು ಪ್ರೇರಣಾ ಪೆನಲಗೆ ಭರ್ಜರಿ ಗೆಲವು

Share

 

ಗುರು ಪ್ರೇರಣಾ ಪ್ಯಾನಲ್‌ಗೆ ಭರ್ಜರಿ ಅಧಿಕಾರ

14 ಸ್ಥಾನಗಳ ಪೈಕಿ 10ರಲ್ಲಿ ಜಯಭೇರಿ

ಐದು ವರ್ಷಗಳ ಕಾಲ ಶಿಕ್ಷಕರ ಸಾರಥ್ಯ

ಚಿಕ್ಕೋಡಿ ಶಿಕ್ಷಕ ಮತದಾರರ ಭರ್ಜರಿ ತೀರ್ಪು

ಚಿಕ್ಕೋಡಿ:ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚಿಕ್ಕೋಡಿ ಘಟಕದ ಚುನಾವಣೆಯಲ್ಲಿ ಗುರು ಪ್ರೇರಣಾ ಪ್ಯಾನೆಲ ಭರ್ಜರಿ ಗೆಲುವು ಸಾಧಿಸಿ ಅಧಿಕಾರದ ಚುಕ್ಕಾಣಿ ಹಿಡಿದಿದೆ.

ಚಿಕ್ಕೋಡಿ ನಗರದ ಇಂದಿರಾನಗರದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮತದಾನ ಮತ್ತು ಎಣಿಕೆ ಪ್ರಕ್ರಿಯೆ ನಡೆಯಿತು . ಒಟ್ಟು 14 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಇದರಲ್ಲಿ ಒಂಬತ್ತು ಪುರುಷ ಅಭ್ಯರ್ಥಿಗಳು ಮತ್ತು ಐದು ಮಹಿಳಾ ಅಭ್ಯರ್ಥಿಗಳ ಸ್ಥಾನಕ್ಕಾಗಿ ಚುನಾವಣೆ ನಡೆಯಿತು. ಚಿಕ್ಕೋಡಿ ತಾಲೂಕಿನ ಒಟ್ಟು 685 ಶಿಕ್ಷಕ ಮತದಾರರಲ್ಲಿ 636 ಮತದಾರರು ಈ ಚುನಾವಣೆಯಲ್ಲಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದರು.

೨೦೨೬ ರಿಂದ ೨೦೩೧ ರವರೆಗಿನ ಮುಂದಿನ ಐದು ವರ್ಷಗಳ ಅವಧಿಗೆ ನಡೆದ ಈ ಚುನಾವಣೆಯಲ್ಲಿ ಗುರು ಪ್ರೇರಣಾ ಪ್ಯಾನೆಲದ ಒಟ್ಟು ಹತ್ತು ಅಭ್ಯರ್ಥಿಗಳು ಗೆದ್ದಿದ್ದಾರೆ. ಇದರಲ್ಲಿ ಎನ್ ಜಿ ಪಾಟೀಲ್, ಎಸ್ ಎಸ್ ಖಡ್ಡ, ಪಿ.ಡಿ.ಮಜಲಟಿ ಮಹಾವೀರ ಕಾಂಬಳೆ, ಡಿ ಎಚ್ ಕಾಂಬಳೆ,ವಿಶ್ವನಾಥ್ ಧುಮಾಳ, ಡಿ. ಆರ್. ಚಲವಾದಿ ಮತ್ತು ಮಹಿಳಾ ಅಭ್ಯರ್ಥಿಗಳಾದ ಸಂಗೀತಾ ಗಿರಿಮಲ್ಲನವರ್, ಶೈಲಶ್ರೀ ಜೋಶಿ, ಸಿದವ್ವ ಬಡ್ಲಿ ವಿಜಯಶಾಲಿಯಾಗಿದ್ದಾರೆ.

ಗುರು ಪ್ರೇರಣಾ ಪ್ಯಾನಲಿನ ನೇತೃತ್ವ ವಹಿಸಿದ ನಿವೃತ್ತ ಶಿಕ್ಷಕರಾದ ಎನ್.ಎಸ್.ಕಾಂಬಳೆ, ಚಂದ್ರಶೇಖರ ಅರಭಾವಿ, ಆರ್.ಕೆ.ಕಾಂಬಳೆ, ಸದಾಶಿವ ಕುಂಬಾರ, ಎ.ಬಿ.ಶಹಾಪುರೆ, ಎಲ್.ಎಸ್.ಘೋಡಗೇರಿ, ಶೌಕತ್ ಅಲಿ ನದಾಫ, ಚಿದಾನಂದ ಯಾದಗುಡೆ, ನಾಗರಾಜ ಬಳೋಬಾಳ್, ಜ್ಯೋತಿ ಕಮತೆ, ಕಲ್ಮೇಶ ಖಡಕಭಾವಿ, ಸಂತೋಷ್ ಹೊಸಕೋಟಿ, ಪ್ರಕಾಶ ಕಲ್ಲೋಳಿ, ಎಂ ಆರ್ ಕುಂದರಗಿ, ಅಜೀತ ಹುಣಶ್ಯಾಳೆ, ರಾಜು ಕಾಮತ ಉಪಸ್ಥಿರಿದ್ದರು.

ಚುನಾವಣಾಧಿಕಾರಿಗಳಾದ ಮೋಹನ್‌ ಜಿರಗಿಹಾಳ್, ಎಸ್‌.ಎಸ್‌.ಶಿವಯ್ಯಗೋಳ ಕರ್ತವ್ಯ ನಿರ್ವಹಿಸಿದ್ದರು.

Tags:

error: Content is protected !!