ಸಿವಿಲ್ ಇಂಜಿನಿಯರ್‌ಗಳು ಕೇವಲ ಕಟ್ಟಡ ಕಟ್ಟುವವರಲ್ಲ, ಅವರು ದೇಶದ ಭವಿಷ್ಯವನ್ನು ರೂಪಿಸುವ ಶಿಲ್ಪಿಗಳು ಎಂದು ಬೆಳಗಾವಿ CCEA ನೂತನ ಅಧ್ಯಕ್ಷರಾದ ಇಂಜಿನಿಯರ್ ಅಜಯ್ ಪಾಟೀಲ್ ಹೇಳಿದ್ದಾರೆ. ಇಂದಿನ ಒತ್ತಡದ ಬದುಕಿನಲ್ಲಿ ಪರಿಸರ ಸ್ನೇಹಿ ಮತ್ತು ಗುಣಮಟ್ಟದ ನಿರ್ಮಾಣಗಳಿಗೆ ಒತ್ತು ನೀಡುವ ಅಗತ್ಯತೆಯನ್ನು ಅವರು ಹೇಳಿದರು.


ಬೆಳಗಾವಿಯ ಕಾಕತಿಯ ಹೋಟೆಲ್ ವುಡ್‌ರೋಸ್‌ನಲ್ಲಿ ಬುಧವಾರ ಸಂಜೆ ನಡೆದ ಅದ್ಧೂರಿ ಸಮಾರಂಭದಲ್ಲಿ ‘ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಷನ್ ನೂತನ ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಿದರು. 2026-28ನೇ ಸಾಲಿನ ಅಧ್ಯಕ್ಷರಾಗಿ ಇಂಜಿನಿಯರ್ ಅಜಯ್ ಪಾಟೀಲ್, ಕಾರ್ಯದರ್ಶಿಯಾಗಿ ಇಂಜಿನಿಯರ್ ಆದರ್ಶ್ ಮುಚ್ಚಂಡಿ ಹಾಗೂ ಖಜಾಂಚಿಯಾಗಿ ಇಂಜಿನಿಯರ್ ಜಗದೀಶ್ ಪಾವಟೆ ಅವರು ಅಧಿಕೃತವಾಗಿ ಪದಗ್ರಹಣ ಮಾಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸರ್ವೋಕಂಟ್ರೋಲ್ಸ್ ಏರೋಸ್ಪೇಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಶ್ರೀ ದೀಪಕ್ ಧಡೋತಿ ಅವರು ಜ್ಯೋತಿ ಬೆಳಗುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ, ಇಂಜಿನಿಯರ್‌ಗಳು ತಾಂತ್ರಿಕ ನೈಪುಣ್ಯತೆಯೊಂದಿಗೆ ಸಮಾಜದ ಏಳಿಗೆಗೆ ಶ್ರಮಿಸಲಿ ಎಂದು ಶುಭ ಹಾರೈಸಿದರು. ಗೌರವ ಅತಿಥಿಗಳಾಗಿ ಕರ್ಹಡ್ಕರ್ ಸ್ಟೀಲ್ಸ್‌ನ ಮಾಲೀಕ ಅಮೋಘ್ ಕರ್ಹಾಡಕರ ಉಪಸ್ಥಿತರಿದ್ದರು.


ಇದೇ ಸಂದರ್ಭದಲ್ಲಿ ನೂತನ ತಂಡದ ಪದಾಧಿಕಾರಿಗಳಾಗಿ ಸಿ.ಆರ್. ಪಾಟೀಲ್ (ನಿಯೋಜಿತ ಅಧ್ಯಕ್ಷ), ವೀರಣ್ಣ ಶಟ್ಟೆಣ್ಣವರ (ಉಪಾಧ್ಯಕ್ಷ), ಭೀಮಸೇನ್ ಜಿರಳಿ (ಜಂಟಿ ಕಾರ್ಯದರ್ಶಿ) ಹಾಗೂ ನಿರ್ದೇಶಕರುಗಳಾದ ವಿನಯ್ ಬೆಹರೆ, ಮಹೇಶ್ ಹೆಬ್ಬಾಳೆ,. ಚಂದ್ರಕಾಂತ್ ಮನಗುತ್ತಿ, ಸಂತೋಷ್ ಜವಳಕರ್, ಸಾಧಿಕ್ ಇನಾಮದಾರ್, ಕಿರಣ್ ಶಿರಲ್ಕರ್, ಬಸವರಾಜ್ ಹಮ್ಮಣ್ಣವರ್,. ವೈಜನಾಥ್ ಚೌಗುಲೆ ಅಧಿಕಾರ ಸ್ವೀಕರಿಸಿದರು.

ನೂತನ ಅಧ್ಯಕ್ಷ ಅಜಯ್ ಪಾಟೀಲ್ ಅವರು, ದೇಶ ಕಟ್ಟುವಲ್ಲಿ ಸಿವ್ಹಿಲ್ ಇಂಜಿನಿಯರ್ಸ್ ಕಾರ್ಯ ಮಹತ್ತರವಾಗಿದೆ. ಭಾವಿ ಪೀಳಿಗೆಗೆ ಗುಣಮಟ್ಟದ ಐತಿಹಾಸಿಕ ಕಟ್ಟಡಗಳನ್ನು ನಿರ್ಮಿಸುವುದು ಸಿವ್ಹಿಲ್ ಇಂಜಿನಿಯರ್ಸ್’ಗಳ ಕಾರ್ಯವಾಗಿದೆ. ಬೆಳೆಯುತ್ತಿರುವ ರಾಷ್ಟ್ರ ಮತ್ತು ಸಮಾಜದ ಬೆನ್ನೆಲುಬಾಗಿ ಸಿವ್ಹಿಲ್ ಇಂಜಿನಿಯರ್ಸ್ ಕಾರ್ಯನಿರ್ವಹಿಸುತ್ತಾರೆ. ಪರಿಸರ ಸಂರಕ್ಷಣೆಯೊಂದಿಗೆ ಇಂಧನವನ್ನು ಉಳಿಸುವಂತಹ ಕಟ್ಟಡಗಳನ್ನು ನಿರ್ಮಿಸಬೇಕಿದೆ. ಒತ್ತಡದಲ್ಲಿಯೇ ಕೆಲಸ ನಿರ್ವಹಿಸಿದರೂ ಕಟ್ಟಡ ಮಾಲೀಕರಿಗೆ ನೀಡು ಸಂತುಷ್ಟಿ ಸಿವ್ಹಿಲ್ ಇಂಜಿನಿಯರ್ಸ್’ಗಳಿಗೆ ಸಿಗುವ ದೊಡ್ಡ ಬಹುಮಾನವಾಗಿದೆ ಎಂದರು.

ನಿರ್ಗಮಿತ ಅಧ್ಯಕ್ಷ ರಮೇಶ್ ಜಿ.ಟಿ. ಹಾಗೂ ಕಾರ್ಯಕ್ರಮದ ಅಧ್ಯಕ್ಷ ಸಂತೋಷ್ ಜವಳಕರ್ ತಂಡದ ಸಾಧನೆಗಳನ್ನು ಸ್ಮರಿಸಿದರು. ಹಿರಿಯ ಸಲಹೆಗಾರರಾದ ಉಮೇಶ್ ಸರ್ನೋಬತ್, ಆನಂದ್ ಕುಲಕರ್ಣಿ, ಪಿ.ಎಸ್. ಹಿರೇಮಠ್ ಮತ್ತು ಮಲ್ಲಿಕಾರ್ಜುನ್ ಮುದ್ನೂರ್ ಅವರ ಮಾರ್ಗದರ್ಶನದಲ್ಲಿ ಈ ಸಮಾರಂಭವು ಯಶಸ್ವಿಯಾಗಿ ನೆರವೇರಿತು.
