BELAGAVI

ಕೊಂಡೂಸಕೊಪ್ಪನಲ್ಲಿ ಸಾಮಾಜಿಕ ಬಹಿಷ್ಕರದ ಆರೋಪ.

Share

ಬೆಳಗಾವಿ ತಾಲೂಕಿನ ಕೊಂಡೂಸಕೊಪ್ಪ ಗ್ರಾಮದಲ್ಲಿ ಕುರುಬ ಸಮಾಜದ ಒಂದು ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹೇರಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಇನ್ನೊಂದೆಡೆ ಮುಖಂಡರು ಇದು ಸತ್ಯಕ್ಕೆ ದೂರಾದ ಮಾತು ಎಂದಿದ್ದಾರೆ.

ಕೊಂಡೂಸಕೊಪ್ಪ ಗ್ರಾಮದ ಕೆಲ ಪಂಚರು ದೇವಸ್ಥಾನ ಪೂಜೆ ಹಾಗೂ ಪ್ರೀತಿ ವಿಚಾರಕ್ಕೆ ಸಂಬಂಧಿಸಿದಂತೆ ಈ ಕ್ರಮ ಕೈಗೊಂಡಿದ್ದಾರೆ. ಕುಟುಂಬದವರೊಂದಿಗೆ ಮಾತನಾಡಿದರೆ 5000 ರೂ. ದಂಡ ವಿಧಿಸುವುದಾಗಿ ಹಾಗೂ ಮಾಹಿತಿ ನೀಡಿದವರಿಗೆ 1000 ರೂ. ಬಹುಮಾನ ಘೋಷಿಸಿದ್ದಾರೆ ಎನ್ನುವ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಬಹಿಷ್ಕಾರದ ಪರಿಣಾಮವಾಗಿ ಕುಟುಂಬ ಸಂಪೂರ್ಣ ಒಂಟಿಯಾಗಿದ್ದು, ಮದುವೆ ಹಾಗೂ ಇತರೆ ಸಾಮಾಜಿಕ ಕಾರ್ಯಕ್ರಮಗಳಿಗೆ ಆಹ್ವಾನ ನೀಡದೇ ದೂರವಿರಲಾಗುತ್ತಿದೆ. ಐದು ವರ್ಷದ ಮಗುವಿನೊಂದಿಗೆ ಗ್ರಾಮಸ್ಥರು ಮಾತನಾಡದ ಪರಿಸ್ಥಿತಿ ನಿರ್ಮಾಣವಾಗಿದೆ ಎನ್ನಲಾಗಿದೆ. ಕೆಲ‌ ದಿನಗಳ ಹಿಂದೆ ತಡರಾತ್ರಿ ದುಷ್ಕರ್ಮಿಗಳು ಮನೆಯ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆ ನಡೆದಿದೆ. ಮನೆಯೊಳಗೆ ಗಾಜಿನ ಚೂರುಗಳು ಚೆಲ್ಲಾಪಿಲ್ಲಿಯಾಗಿದ್ದು, ಕುಟುಂಬ ಜೀವ ಭಯದಲ್ಲಿ ದಿನ ಕಳೆಯುತ್ತಿದೆ. ರಕ್ಷಣೆಗೆ ಆಗ್ರಹಿಸಿ ಕುಟುಂಬವು ಪೊಲೀಸರಿಗೆ ಮನವಿ ಮಾಡಿದೆ.
ಈ ಕುರಿತು ಹಿರೇಬಾಗೇವಾಡಿ ಪೊಲೀಸ್ ಠಾಣೆಗೆ ದೂರು ನೀಡಿದರೂ ಹದಿನೈದು ದಿನಗಳಾದರೂ ಸೂಕ್ತ ಕ್ರಮ ಕೈಗೊಳ್ಳಲಾಗಿಲ್ಲ ಎಂಬ ಆರೋಪ ಕೇಳಿಬಂದಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಹಿಂತಿರುಗಿರುವುದರಿಂದ ಸ್ಥಳೀಯರಲ್ಲಿ ಅಸಮಾಧಾನ ವ್ಯಕ್ತವಾಗಿದೆ. ನಮಗೂ ಬದುಕಲು ಅವಕಾಶ ನೀಡಬೇಕು” ಎಂದು ಪೀಡಿತ ಕುಟುಂಬ ಮನವಿ ಮಾಡಿದ್ದು, ಊರು ಬಿಡುವಂತೆ ಬೆದರಿಕೆ ಹಾಕಲಾಗಿದೆ ಎಂದು ಆರೋಪಿಸಿದೆ.

ಇನ್ನು ಕೊಂಡೂಸ್ಕೊಪ್ಪದ ಸಮಾಜ ಮುಖಂಡ ವಿಠ್ಠಲ ಸಾಂಬ್ರೇಕರ್ ಅವರು ವಿಠ್ಠಲ ಕರೆಪ್ಪ ಸಾಂಬ್ರೇಕರ್ ಅವರ ಕುಟುಂಬದವರು ನೀಡಿದ ದೂರು ಸತ್ಯಕ್ಕೆ ದೂರಾಗಿದೆ. ಭಂಡಾರ ಹಾಲುಮತ ಸುಳ್ಳಾಗಿದೆ. ಮಾಣಿಕ್ಯ ಸುಳ್ಳಾಗಿದೆ ಎಂದು ಹೇಳಿದಾಗ ಬಾರದಿರಿ ಎಂದು ಹೇಳಿದ್ದು ನಿಜ. ಆದರೇ ಬಹಿಷ್ಕಾರ ಹಾಕಿದ್ದೇವೆಂಬುದು ಸುಳ್ಳು ಎಂದರು.

ಮಾಜಿ ಮಹಾಪೌರ ಯಲ್ಲಪ್ಪ ಕುರಬರ ಅವರು ವಿಠ್ಠಲ ಕರೆಪ್ಪ ಸಾಂಬ್ರೇಕರ ಅವರನ್ನು ಊರಿನಿಂದ ಹೊರ ಹಾಕಿದ್ದೇವೆಂಬುದು ಸತ್ಯಕ್ಕೆ ದೂರ. ಸುಮಾರು ಗಂಟೆಗಳ ಕಾಲ ಸಭೆ ನಡೆಸಿ ಎಲ್ಲವರನ್ನು ಬಗೆಹರಿಸಲು ಪ್ರಯತ್ನಿಸಿದರೂ ಒಪ್ಪದೇ, ಕಾನೂನು ಹೋರಾಟಕ್ಕೆ ಹೋಗುವುದಾಗಿ ಹೇಳಿದ್ದಾರೆ. ದೇವರ ಕಾರ್ಣಿಕ ನಂಬುವುದಿಲ್ಲ ಎಂದ ಬಳಿಕ ಅಲ್ಲಿ ಹೋಗಬೇಡ ಎಂದಿದ್ದು, ನಿಜ.ಆದರೇ ಸಮಾಜದಿಂದ ದೂರವಾಗಿಸಿ ದಂಡ ಹಾಕಿರುವ ಮಾತು ಸುಳ್ಳು ಎಂದು ಸ್ಪಷ್ಟಪಡಿಸಿದರು.

Tags:

error: Content is protected !!