Vijaypura

ಡೋಣಿ ನದಿ ಹೂಳೆತ್ತುವಂತೆ ಮನವಿ ಸಲ್ಲಿಸಿದ ರೈತ ಸಂಘ

Share

ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಸಾರವಾಡ ಗ್ರಾಮದ ಡೊಣಿ ನದಿಯಲ್ಲಿ ಸರ್ಕಾರ ಹತ್ತು ಕೋಟಿ ರೂಪಾಯಿ ವೆಚ್ಚದಲ್ಲಿ ಕೈಗೊಂಡಿರುವ ಹುಳು ತೆಗೆಯುವ ಕಾಮಗಾರಿ ಕಳಪೆಯಾಗಿದೆ ಮತ್ತು ಇದು ಶಾಶ್ವತ ಯೋಜನೆಯಲ್ಲ ಎಂದು ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ಆರೋಪಿಸಿದೆ. ಈ ಸಂಬಂಧ ವಿಜಯಪುರದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ, ಕೂಡಲೇ ಈ ಕಾಮಗಾರಿಯನ್ನು ಕೈಬಿಟ್ಟು ಶಾಶ್ವತ ಹುಳು ತೆಗೆಯುವ ಯೋಜನೆಯನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ರೈತ ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಸಾರವಾಡ ಗ್ರಾಮದ ಡೊಣಿ ನದಿಯ ಹೋಳು ಎತ್ತುವಲ್ಲಿ ಸರ್ಕಾರ ಗ್ರಾಮಸ್ಥರಿಗೆ ಅನ್ಯಾಯ ಮಾಡುತ್ತಿದೆ. ನಕ್ಷೆಯ ಪ್ರಕಾರ ನದಿಯ ಹೋಳನ್ನು ತೆಗೆಯದೆ, ರೈತರ ಜಮೀನುಗಳಲ್ಲಿ ನದಿಯನ್ನು ಹರಿಸಲಾಗುತ್ತಿದೆ. ಇದರಿಂದ ರೈತರಿಗೆ ತೊಂದರೆಯಾಗುತ್ತಿದ್ದು, ಇದನ್ನು ಶಾಶ್ವತವಾಗಿ ಸರಿಪಡಿಸಬೇಕು ಎಂದು ಆಗ್ರಹಿಸಿದರು.

Tags:

error: Content is protected !!