Belagavi

ಬಿಜೆಪಿಗರು ಮನುವಾದಿಗಳು, ಮಹಿಳೆಯರನ್ನು ನಾಲ್ಕು ಗೋಡೆಗೆ ಸೀಮಿತ ಮಾಡುವವರು:

Share

ಕಾಂಗ್ರೆಸ್ ಮಹಿಳಾ ವಿರೋಧಿ ಎಂಬ ಬಿಜೆಪಿ ಟೀಕೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬೆಳಗಾವಿಯಲ್ಲಿ ಖಡಕ್ ತಿರುಗೇಟು ನೀಡಿದ್ದಾರೆ. ಮಹಿಳೆಯರಿಗೆ ರಾಜಕೀಯ ಮತ್ತು ಆರ್ಥಿಕ ಶಕ್ತಿ ನೀಡಿದ್ದೇ ಕಾಂಗ್ರೆಸ್ ಎಂದು ಪ್ರತಿಪಾದಿಸಿದ ಅವರು, ಬಿಜೆಪಿಯ ಮಹಿಳಾ ಮೀಸಲಾತಿ ವಿಧೇಯಕದ ಬಗ್ಗೆ ತೋರುವ ಮುತುವರ್ಜಿಯನ್ನು ಮಣಿಪುರ ಘಟನೆ ಬಗ್ಗೆ ಯಾಕೆ ತೋರಲಿಲ್ಲವೆಂದು ಪ್ರಶ್ನಿಸಿದ್ದಾರೆ.

ಇಂದು ಬೆಳಗಾವಿಯ ಕಾಂಗ್ರೆಸ್ ಭವನದಲ್ಲಿ ಕರೆಯಲಾಗಿದ್ದ ಮಾಧ್ಯಮಗೋಷ್ಟಿಯನ್ನು ಉದ್ಧೇಶಿಸಿ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಅವರು, ಬಿಜೆಪಿಗರ ಕಾಂಗ್ರೆಸ್ ಮಹಿಳಾ ವಿರೋಧಿ ಎಂಬ ಟೀಕೆಗೆ ಮೊಟ್ಟ ಮೊದಲ ಮಹಿಳಾ ಪಿಎಂ., ಸಿಎಂ., ರಾಷ್ಟ್ರಪತಿ, ರಾಜ್ಯಪಾಲ, ಜಿ.ಪಂ.ತಾ.ಪಂ, ಗ್ರಾ.ಪಂ. ಸ್ಥಳೀಯ ಆಡಳಿತದಲ್ಲಿ ಮಹಿಳೆಯರಿಗೆ ಕಾಂಗ್ರೆಸ್ ಅವಕಾಶ ನೀಡಿದೆ. 2023 ರಲ್ಲಿಯೇ ಮಹಿಳಾ ಮೀಸಲಾತಿಗೆ ಕಾಂಗ್ರೆಸ್ ಬೆಂಬಲಿಸಿದೆ. ಇಂದಿಗೂ ಶೇ. 33 ರಷ್ಟು ಮೀಸಲಾತಿಯ ಪರವಾಗಿಯೇ ಇದ್ದೇವೆ. ವಿಪಕ್ಷೀಯರನ್ನು ಕರೆದು ಚರ್ಚಿಸದೆಯೇ ತರಾತುರಿಯಲ್ಲಿ ವಿಧೇಯಕವನ್ನು ಜಾರಿಗೊಳಿಸಲು ಹೊರಟಿದೆ. ಕ್ಷೇತ್ರ ಮರುವಿಂಗಡಣೆಗಾಗಿ ಮಹಿಳಾ ಮೀಸಲಾತಿಯ ಮುಖವಾಡವನ್ನು ಬಿಜೆಪಿ ಧರಿಸಿದೆ. ವರದಕ್ಷಿಣೆ ಕಿರುಕುಳಕ್ಕೆ ಕಾನೂನನ್ನು ಕೂಡ ಕಾಂಗ್ರೆಸ್ಸೆ ರಚನೆ ಮಾಡಿದೆ. ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸಲು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ. ಭೂತದ ಬಾಯಲ್ಲಿ ಭಗವಂತ ಎಂಬಂತೆ ಬಿಜೆಪಿಗರು ವರ್ತಿಸುತ್ತಿದ್ದು, ಮಹಿಳೆಯರ ಬಗ್ಗೆ ಇಷ್ಟು ಚಿಂತನೆಯಿದ್ದರೇ ಮಣಿಪುರ ಘಟನೆ ಮತ್ತು ಮಹಿಳೆಯರ ಸ್ಥಳಾಂತರದ ಬಗ್ಗೆ ಯಾಕೆ ಮಾತನಾಡುತ್ತಿಲ್ಲವೆಂದು ಪ್ರಶ್ನಿಸಿದರು. ಬಿಜೆಪಿಗರು ಮನುವಾದಿಗಳು ಮಹಿಳೆಯನ್ನು ನಾಲ್ಕು ಗೋಡೆಗಳಡಿ ಇಡುವವರು. ಬಿಜೆಪಿಯ 545 ಮಹಿಳಾ ಮೀಸಲಾತಿಗೆ ಕಾಂಗ್ರೆಸ್ ಯಾವಾಗಲೂ ತಯಾರಾಗಿದೆ ಎಂದರು.

ಚುನಾವಣೆಯನ್ನು ಗೆಲ್ಲುವುದೇ ಬಿಜೆಪಿಗರ ಕಾಯಕ. ನಮಗೆ ನಾರಿ ವಂದನೆ ಎಂದು ಕೇವಲ ನಾಮಕೆ ವಾಸ್ತೆ ನಮಸ್ಕಾರಗಳು ಬೇಡ. ಮಹಿಳೆಯರಿಗೆ ನಿಜವಾಗಿಯೂ ಅವಕಾಶಗಳು ಬೇಕು. ಇನ್ನು ವೋಟರ್ ಲಿಸ್ಟ್ ಮ್ಯಾಪಿಂಗ್’ ಕುರಿತು ಮಾತನಾಡಿದ ಅವರು ತಮ್ಮ ಕ್ಷೇತ್ರದಿಂದ ಸುಮಾರು 23 ಸಾವಿರ ಮತದಾರರ ಹೆಸರು ರದ್ಧಾಗುವ ಪ್ರಮೇಯ ಬಂದಿದೆ. ಇನ್ನು ನಾಯಕತ್ವ ಬದಲಾವಣೆ ಇನ್ನುಳಿದ ವಿಷಯಗಳ ಬಗ್ಗೆ ನಮಗೆ ಗೊತ್ತಿಲ್ಲ. ನಾವು ಕೇವಲ ಪಕ್ಷದ ಜವಾಬ್ದಾರಿಯನ್ನು ಪೂರ್ಣಗೊಳಿಸುವವರು ಎಂದರು. ಜಿಲ್ಲೆಯಲ್ಲಿ ಹಲವರು ಹಿರಿಯರಿದ್ದಾರೆ ಅವರಿಗೆ ಸಚಿವ ಸಂಪುಟದಲ್ಲಿ ಅವಕಾಶ ನೀಡಿದರೇ ತಪ್ಪಿಲ್ಲ. ದೊಡ್ಡ ಜಿಲ್ಲೆಗೆ ಹೆಚ್ಚಿನ ಮಂತ್ರಿ ಸ್ಥಾನ ನೀಡಿದರೇ ಒಳ್ಳೆಯದು ಎಂದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಮಹಿಳಾ ರಾಜ್ಯ ಉಪಾಧ್ಯಕ್ಷೆ ದೇವಕಿ, ಅಶ್ವಿನಿ ದಳವಡೆ, ಲತಾ ಮಾನೆ, ಜಯಶ್ರೀ ಮಾಳಗಿ, ಕಾಡಾ ಅಧ್ಯಕ್ಷ ಯುವರಾಜ್ ಕದಮ್ ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ಧರು.

Tags:

error: Content is protected !!