BELAGAVI

ರಿಕ್ಷಾ ಚಾಲಕನ ಮಗನ ಸಾಧನೆಗೆ ಮಾರ್ಕೇಟ್ ಪೊಲೀಸರಿಂದ ಸಲಾಂ: ಎಸ್ಸೆಸ್ಸೆಲ್ಸಿಯಲ್ಲಿ 98.12% ಅಂಕ ಗಳಿಸಿದ ಸಿದ್ಧೇಶ್ವರ ಗವಳಿಗೆ ಸನ್ಮಾನ

Share

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 98.12% ರಷ್ಟು ಅಂಕ ಪಡೆದು ಉತ್ತೀರ್ಣರಾದ ಗವಳಿ ಗಲ್ಲಿಯ ರಿಕ್ಷಾ ಚಾಲಕ ಸಿದ್ಧೇಶ್ವರ ಗವಳಿಯವರ ಮಗ ಶಿವರಾಜ್ ಸಿದ್ಧೇಶ್ವರ ಗವಳಿ ಅವರು ಸಾಧನೆಯನ್ನು ಮಾಡಿದ್ದಾರೆ.

ಈ ಪ್ರತಿಭಾವಂತ ವಿದ್ಯಾರ್ಥಿಗೆ ಬೆಳಗಾವಿ ಮಾರ್ಕೇಟ್ ಪೊಲೀಸ್ ಠಾಣೆಯ ಸಿಪಿಐ ಮಹಾಂತೇಶ್ ಧಾಮಣ್ಣವರ ಮತ್ತು ಬಬನ್ ಭೋಬೆ ಮಿತ್ರಮಂಡಳದ ವತಿಯಿಂದ ಸತ್ಕರಿಸಿ ಪ್ರೋತ್ಸಾಹಿಸಲಾಯಿತು. ಈ ಸಂದರ್ಭದಲ್ಲಿ ಪಿ ಎಸ್ ಐ ಆನಂದ ಆದಗೊಂಡ, ಪಿ ಎಸ್ ಐ ಉದ್ಧಪ್ಪ ಕಟ್ಟಿಕರ, ಹೆಡ್ ಕಾನ್ಸಟೇಬಲ್ ಶೆಟ್ಟಿ, ರಾಜು ಕೇಣಿ, ಮಾರುತಿ ದೇಸೂರಕರ, ಬಬನ್ ಭೋಬೆ ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ಧರು.

Tags:

error: Content is protected !!