BELAGAVI

ಸಂಸದ ಈರಣ್ಣ ಕಡಾಡಿ ಅನುದಾನದಡಿ ಶಿಂದೋಳಿ ಗ್ರಾಮದಲ್ಲಿ ನೂತನ ಬಸ್ ನಿಲ್ದಾಣ

Share

ಶಿಂದೋಳಿ ಗ್ರಾಮದ ಚೆನ್ನಮ್ಮ ಸರ್ಕಲ್‌ನಲ್ಲಿ ಇಂದು ರಾಜ್ಯಸಭಾ ಸಂಸದರಾದ ಗೌರವಾನ್ವಿತ ಈರಣ್ಣ ಕಡಾಡಿ ಅವರ ಅನುದಾನದಡಿ ನಿರ್ಮಾಣವಾಗಲಿರುವ ಬಸ್ ನಿಲ್ದಾಣದ ಭೂಮಿಪೂಜೆಯನ್ನು ಬಿಜೆಪಿ ಬೆಳಗಾವಿ ಗ್ರಾಮೀಣ ಮಂಡಲದ ಮಾಜಿ ಅಧ್ಯಕ್ಷರಾದ ಧನಂಜಯ ಜಾಧವ್ ಅವರು ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಧನಂಜಯ ಜಾಧವ್ ಅವರು, ಸಂಸದರಾದ ಈರಣ್ಣ ಕಡಾಡಿ ಅವರು ಬೆಳಗಾವಿ ಗ್ರಾಮೀಣ ಭಾಗದ ಅನೇಕ ಕಡೆಗಳಲ್ಲಿ ಬಸ್ ನಿಲ್ದಾಣಗಳು, ವ್ಯಾಯಾಮ ಶಾಲೆಗಳು, ಗ್ರಂಥಾಲಯಗಳು ಮತ್ತು ಪೇವರ್ಸ್ ಅಳವಡಿಕೆ ಸೇರಿದಂತೆ ಅನೇಕ ಅಭಿವೃದ್ಧಿ ಕೆಲಸಗಳಿಗೆ ದೊಡ್ಡ ಪ್ರಮಾಣದಲ್ಲಿ ಅನುದಾನ ನೀಡುವ ಮೂಲಕ ಸಹಕರಿಸಿದ್ದಾರೆ. ಅವರ ಈ ಜನಪರ ಕಾರ್ಯಗಳಿಗಾಗಿ ಗ್ರಾಮೀಣ ಜನರ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸತೀಶ್ ಶಹಾಪುರಕರ್, ಪೀರಾಜಿ ಅನಗೋಳಕರ್, ಸವಿತಾ ಮುಚಂಡಿ, ಸಾಗರ್ ಮುಚಂಡಿ, ರೇಖಾ ಶಹಾಪುರಕರ್, ವಿಜಯಕುಮಾರ್, ಉಮೇಶ್ ಪುರಿ, ಬಾಳು ಅನಗೋಳಕರ್, ಮಹಾದೇವ ತಿಗಡಿ, ಬಸವರಾಜ ತಳವಾರ, ವೀರಭದ್ರ ಪೂಜಾರಿ, ಮಿಲನ್ ಮಾತಾರಿ ಸೇರಿದಂತೆ ಗ್ರಾಮದ ಹಿರಿಯರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

Tags:

error: Content is protected !!