ಬೆಳಗಾವಿ ತಾಲೂಕಿನ ಭೂತರಾಮಟ್ಟಿ ಹೊನಗಾದಲ್ಲಿರುವ ವಿಜಯಾ ಇಂಟರ್ನ್ಯಾಷನಲ್ ಶಾಲೆ, 2025-26ನೇ ಸಾಲಿನ ಹತ್ತನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ ಶೇ. 100 ರಷ್ಟು ಫಲಿತಾಂಶ ದಾಖಲಿಸಿ ಅದ್ಭುತ ಸಾಧನೆ ಮಾಡಿದೆ.
ಶಾಲೆಯ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿದಿರುವ ಫರ್ಹಾನ್ ಪಟೇಲ್ ಶೇ. 96 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದರೆ, ತನ್ಮಯ್ ಜಾಲಿಹಾಳ್ ಶೇ. 87 ಅಂಕಗಳನ್ನು ಗಳಿಸಿ ಗಮನ ಸೆಳೆದಿದ್ದಾರೆ. ಉಳಿದಂತೆ ವಿನಾಯಕ್ ಬನೋಶಿ (ಶೇ. 82), ಶಾಂಭವಿ ಕೃಷ್ಣೋಜಿ (ಶೇ. 81) ಮತ್ತು ಸಾನಿಕಾ. ಕೋಲಕಾರ (ಶೇ. 80) ರವರು ಅತ್ಯುತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ. ವಿದ್ಯಾರ್ಥಿಗಳ ಈ ಅಮೋಘ ಸಾಧನೆಗೆ ಶಾಲೆಯ ಆಡಳಿತ ಮಂಡಳಿ ಹಾಗೂ ಶಿಕ್ಷಕ ವೃಂದ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

