ಡಿಕೆ ಶಿವಕುಮಾರ್ ಅವರು ವಿವಿಧ ರಾಜ್ಯಗಳ ಚುನಾವಣೆಗಳ ಸಮಿತಿಯಲ್ಲಿದ್ದಾರೆ, ಅವರು ಕೆಪಿಸಿಸಿ ಅಧ್ಯಕ್ಷರಿದ್ದಾರೆ.
ಹೀಗಾಗಿ ದೆಹಲಿಗೆ ಹೋಗಿ ಮುಖಂಡರನ್ನು ಭೇಟಿಯಾಗು ವುದು ಸರ್ವೆಸಾಮಾನ್ಯ ಎಂದು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ತಿಳಿಸಿದರು. ವಿಜಯಪುರ ನಗರದಲ್ಲಿ ಮಾದ್ಯಮಗಳ ಜೊತೆಗೆ ಮಾತನಾಡಿ ಡಿಸಿಎಂ ಡಿಕೆ ಶಿವಕುಮಾರ್ ದೆಹಲಿ ಪ್ರವಾಸ ವಿಚಾರಕ್ಕೆ ಸಚಿವ ಎಂ ಬಿ ಪಾಟೀಲ್ ಪ್ರತಿಕ್ರಿಯೆ ನೀಡಿ ನಾಯಕತ್ವ ಇನ್ನಿತರ ವಿಚಾರಗಳು ಮಂತ್ರಿಮಂಡಲ ವಿಚಾರಗಳ ಬಗ್ಗೆ ಪದೇ ಪದೇ ಕೇಳಬೇಡಿ ಅದು ನಮ್ಮ ಹೈಕಮಾಂಡ್ಗೆ ಬಿಟ್ಟ ವಿಚಾರ, ಹೈಕಮಾಂಡ್ ಯಾವ ನಿರ್ಣಯ ಕೈಗೊಳ್ಳುತ್ತೆ, ಸಿದ್ದರಾಮಯ್ಯನವರು ಹೇಳಿದ್ದಾರೆ ಡಿಕೆ ಶಿವಕುಮಾರ್ ಅವರು ಕೂಡ ಹೇಳಿದ್ದಾರೆ ಕಾಂಗ್ರೆಸ್ ಪಕ್ಷದಲ್ಲಿ ಹೈಕಮಾಂಡ್ ಸುಪ್ರೀಂ.. ಮೇ 6 ರ ಬಳಿಕ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿ ಆ ಡೇಟ್ ಈ ಡೇಟ್ ಎಲ್ಲಾ ನೀವೇ ಕೊಡ್ತೀರಿ 25 ಡೇಟ್ ನಿಮ್ಮುವೆ ಆಗಿವೆ ಎಂದರು. ಇಷ್ಟೆಲ್ಲಾ ಡೇಟ್ ಗೆ ಹೈಕಮಾಂಡ್ ಪೂರ್ಣ ವಿರಾಮ ಹಾಕಬೇಕು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಎಂಬಿ ಪಾಟೀಲರು ಅದು ನಿಮಗೆ ಏನು ಸಂಬಂಧ, ನಮ್ಮ ಹೈಕಮಾಂಡಗೆ ಗೊತ್ತಿರುತ್ತೆ.. ಮನೆಯಲ್ಲಿರುತ್ತೆ ಸಮಸ್ಯೆಗಳು ರಾಜಕೀಯ ಪಕ್ಷದಲ್ಲಿ ಇರಲ್ವಾ ಎಂದು ಪ್ರಶ್ನಿಸಿದರು. ನಾಲ್ಕು ಗೋಡೆಗಳ ಮಧ್ಯ ಬಗೆಹರಿಸುತ್ತೇವೆ. ಮಾಧ್ಯಮಗಳ ಮುಂದೆ ಮಾತನಾಡುತ್ತಿರುತ್ತದಾ?. ನಮ್ಮಲ್ಲಿ ಏನೇ ಸಮಸ್ಯೆ ಇದ್ದರೂ ಹೈಕಮಾಂಡ್ ಅದನ್ನು ಗಮನಿಸುತ್ತಿರುತ್ತದೆ ಅದನ್ನು ನಾಲ್ಕು ಗೋಡೆಗಳ ಮಧ್ಯೆ ಬಗೆಹರಿಸುತ್ತೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

