ವಿಜಯಪುರ ಜಿಲ್ಲೆಯ ಆಲಮೇಲ ತಾಲ್ಲೂಕು ಎಂದ ಕೂಡಲೇ ನೆನಪಾಗುವದು ಭೀಮಾ ತೀರದ ಕುಖ್ಯಾತಿ. ಈ ಕುಖ್ಯಾತಿಗಿಂತ ಇಲ್ಲೊಂದು ಖ್ಯಾತಿ ಪಡೆಯುವತ್ತ ಶಿಕ್ಷಣ ಕ್ರಾಂತಿ ನಡೆಯುತ್ತಿದೆ. ಆಲಮೇಲ ತಾಲೂಕಿನ ದೇವರನಾವದಗಿ ಗ್ರಾಮದಲ್ಲಿ ಶಿಕ್ಷಣ ಕ್ರಾಂತಿಯ ಕನಸು ಕಂಡು ಶಿಕ್ಷಣ ಪ್ರೇಮಿ ದಿವಂಗತ ಎಸ್.ಕೆ.ಗುಗ್ಗರಿ ಇವರು ಮಲ್ಲಿಕಾರ್ಜುನ ಶಿಕ್ಷಣ ಸಂಸ್ಥೆಯನ್ನು ಹುಟ್ಟು ಹಾಕಿದ ಪರಿಣಾಮ ಇಂದು ಗ್ರಾಮವು ರಾಜ್ಯ ಮಟ್ಟದಲ್ಲಿ ಗುರ್ತಿಸಿಕೊಳ್ಳುವತ್ತ ಸಾಗುತ್ತಿದೆ.


ಸಾವಿರಾರು ವಿದ್ಯಾರ್ಥಿಗಳ ಕನಸನ್ನು ಸಾಕಾರಗೊಳಿಸುವತ್ತ ದಿಟ್ಟ ಹೆಜ್ಜೆ ಇಟ್ಟಿದೆ. ಎಸ್ ಕೆ ಗುಗ್ಗರಿ ಇವರ ಮಕ್ಕಳಾದ ಪ್ರಕಾಶ ಹಾಗೂ ಮಹಾಂತೇಶ ಇವರ ಸತತ ಪ್ರಯತ್ನದಿಂದ ಶಾಲೆಯು ಪ್ರತಿ ವರ್ಷದಿಂದ ವರ್ಷಕ್ಕೆ ಬೆಳವಣಿಗೆ ಹೊಂದುತ್ತಿದೆ. ಮಲ್ಲಿಕಾರ್ಜುನ ಶಿಕ್ಷಣ ಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಮಲ್ಲಿಕಾರ್ಜುನ ಪ್ರೌಢಶಾಲೆಯು ಪ್ರಸಕ್ತ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಚಂದ್ರಕಾಂತ ಸಾಧನೆಮಾಡಿದೆ. ಶಾಲೆಯು ಭವಾನಿ ಪ್ಯಾಟಿ ಗೀತಾ ಪೂಜಾರಿ ಒಟ್ಟು ಶೇ. 98.4ರಷ್ಟು ಫಲಿತಾಂಶ ದಾಖಲಿಸಿ ಅಭೂತಪೂರ್ವ ಯಶಸ್ಸು ಸಾಧಿಸಿದೆ. ಪರೀಕ್ಷೆಗೆ ಹಾಜರಾಗಿದ್ದ ಒಟ್ಟು 125 ವಿದ್ಯಾರ್ಥಿಗಳಲ್ಲಿ 123 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. 45 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 73 ವಿದ್ಯಾರ್ಥಿಗಳು ಪ್ರಥಮ ದರ್ಜೆ ಹಾಗೂ 5 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಶಾಲೆಯ ವಿದ್ಯಾರ್ಥಿನಿ ಭವಾನಿ ಪ್ಯಾಟಿ ಶೇ. 97.12ರಷ್ಟು ಅಂಕಗಳನ್ನು ಪಡೆಯುವ ಮೂಲಕ ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಗೀತಾ ಪೂಜಾರಿ ಶೇ. 96.00 ಹಾಗೂ ಚಂದ್ರಕಾಂತ ಹೂನಳ್ಳಿ ಶೇ. 95.52 ಪಡೆದು ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದಿದ್ದಾರೆ. ಇನ್ನೂ ವಿದ್ಯಾರ್ಥಿಗಳ ಸಾಧನೆಗೆ ಆಡಳಿತ ಮಂಡಳಿ, ತಾಲ್ಲೂಕಿನ ಜನತೆ, ಪಾಲಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
