Vijaypura

ವಿದ್ಯಾರ್ಥಿಗಳ ಹೋರಾಟಕ್ಕೆ ಬ್ರೇಕ್; ಉದ್ಯೋಗ ನೀಡುವಂತೆ ಒತ್ತಾಯಿಸಿ ಆಕ್ಸಾ ಸಂಸ್ಥೆಯ ನೇತೃತ್ವದಲ್ಲಿ ಬೃಹತ್ ಹೋರಾಟಕ್ಕೆ ಸಿದ್ದತೆ, ಹೋರಾಟಕ್ಕೆ ಬ್ರೇಕ್ ಹಾಕಿದ ಪೊಲೀಸ್ ಇಲಾಖೆ, ಯಾವುದೇ ಕಾರಣಕ್ಕೂ ಹಿಂಜರಿಯಲ್ಲಾ ಎನ್ನುತ್ತಿರುವ ವಿದ್ಯಾರ್ಥಿಗಳು

Share

ಕಳೆದ ಎರಡುವರೆ ಮೂರು ವರ್ಷಗಳಿಂದ ರಾಜ್ಯ ಸರ್ಕಾರ ಯಾವುದೇ ರೀತಿಯಾದ ಸರ್ಕಾರಿ ಹುದ್ದೆ ಕಾಲ್ ಫಾರ್ಮ್ ಮಾಡಿಲ್ಲ. ಇದರಿಂದಾಗಿ ರಾಜ್ಯದಲ್ಲಿ ಎರಡು ಲಕ್ಷ ತೊಂಬತ್ತು ಸಾವಿರಕ್ಕೂ ಅಧಿಕ ಸರ್ಕಾರಿ ಹುದ್ದೆಗಳು ಇಂದು ಖಾಲಿಯಾಗಿದೆ. ಇನ್ನೊಂದಡೆ ಕಾಲ್ ಫಾರ್ಮ್ ಆಗದ ಹಿನ್ನೆಲೆಯಲ್ಲಿ ಹಗಲು ರಾತ್ರಿ ಓದಿರುವಂತ ವಿದ್ಯಾರ್ಥಿಗಳು ನೌಕರಿ ಸಿಗದೇ ಇತ್ತ ವಯ್ಯಸ್ಸು ಕೂಡಾ ದಾಟುತ್ತಿದೆ ಎಂದು ಆತಂಕದಲ್ಲಿ ಇದ್ದಾರೆ. ಸರ್ಕಾರ ಆದಷ್ಟು ಬೇಗ ಕಾಲ್ ಮಾಡಲೇಬೇಕು ಎಂಬ ವಿಚಾರ ಸರ್ಕಾರದ ಗಮನಕ್ಕೆ ತರಲು ಹೋರಾಟಕ್ಕೆ ಮುಂದಾದರೆ ಪೊಲೀಸ್ ಇಲಾಖೆ ಮೂಲಕ ಹೋರಾಟ ಹತ್ತಿಕ್ಕುವ ಕೆಲಸವಾಗುತ್ತಿದೆ. ಈ ಕುರಿತಾದ ಒಂದು ಕಂಪ್ಲೀಟ್ ವರದಿ ಇಲ್ಲಿದೆ ನೋಡಿ…

ಹೌದು ರಾಜ್ಯದಲ್ಲಿ ಕಳೆದ ಮೂರು ವರ್ಷಗಳಿಂದ ಸರ್ಕಾರದಿಂದ ಯಾವುದೇ ರೀತಿಯಾದಂತಹ ಸರ್ಕಾರಿ ನೌಕರಿಗೆ ಕಾಲ್ ಫಾರ್ ಆಗುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳು ಹೋರಾಟಕ್ಕೆ ಮುಂದಾಗಿದ್ದರು. ಈ ನಿಟ್ಟಿನಲ್ಲಿ ವಿಜಯಪುರ ನಗರದಲ್ಲಿ ಸಹಿತ ಇದೆ ಏಪ್ರಿಲ್ 21 ರಿಂದ ಅನಿದಿಷ್ಟಾವದಿ ಗಳ ಕಾಲ ಹೋರಾಟಕ್ಕೆ ನಿರ್ಧಾರ ಮಾಡಿದರು. ಸುಮಾರು 500 ಜನ ವಿದ್ಯಾರ್ಥಿಗಳನ್ನು ಸೇರಿಸಿ ಆಲ್ ಕರ್ನಾಟಕ ಸ್ಟೇಟ್ ಸ್ಟುಡೆಂಟ್ಸ್ ಆರ್ಗನೈಸೇಶನ್ ನೇತೃತ್ವದಲ್ಲಿ ಹೋರಾಟ ಹಮ್ಮಿಕೊಳ್ಳಲಾಗಿತ್ತು. ಆದರೆ ಪೊಲೀಸ್ ಇಲಾಖೆ ಮಾತ್ರ ಹೋರಾಟಕ್ಕೆ ಬ್ರೇಕ್ ಹಾಕಿದೆ ವಿವಿಧ ಕಾರಣಗಳ ನೀಡಿ ಹೋರಾಟಕ್ಕೆ ಅನುಮತಿಯನ್ನು ನೀಡಿಲ್ಲ. ಆದರೆ ವಿದ್ಯಾರ್ಥಿಗಳು ಮಾತ್ರ ನಾವು ಯಾವುದೇ ಕಾರಣಕ್ಕೂ ಬಗ್ಗಲ್ಲ ನಾವು ಮುಂಬರುವ ದಿನಗಳಲ್ಲಿ ಸರ್ಕಾರ ನಮ್ಮ ಮನವಿಗೆ ಸ್ಪಂದಿಸದೇ ಇದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ…

ಇನ್ನೂ ಅದೆಷ್ಟೋ ಕಡುಬಡವ ವಿದ್ಯಾರ್ಥಿಗಳು ಹಳ್ಳಿಗಳಿಂದ ಸಿಟಿ ಗಳಿಗೆ ಬಂದು ಕೋಚಿಂಗ್ ಸೆಂಟರ್ ಗಳಿಗೆ ಹೋಗಿ ಹೇಗಾದರೂ ಮಾಡಿ ಸರ್ಕಾರಿ ನೌಕರಿ ಪಡೆಯಬೇಕು ಎಂದು ಹಗಲು ರಾತ್ರೀ ಕಷ್ಟ ಪಟ್ಟು ಓದುತ್ತಾರೆ. ಆದರೆ ಆ ವಿದ್ಯಾರ್ಥಿಗಳ ಪ್ರಯತ್ನ ಸಂಪೂರ್ಣವಾಗಿ ಹಾಳಾಗಿ ಹೋಗುತ್ತಿದೆ. ಇತ್ತ ಪೋಷಕರು ಸಹಿತ ಮಕ್ಕಳಿಗೆ ನೌಕರಿ ಸಿಗುತ್ತಿಲ್ಲ ಎಂದು ಆತಂಕದಲ್ಲಿರುವದ ಸಾಮಾನ್ಯ. ಇದೇ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ 2013 ರಿಂದ 2018 ಅವಧಿಯಲ್ಲಿ ಕಾಲ್ ಫಾರ್ಮ್ ಮಾಡಿತ್ತು, ಆದರೆ ಈಗ ಯಾಕೆ ಮಾಡುತ್ತಿಲ್ಲ ಎಂಬುದು ವಿದ್ಯಾರ್ಥಿಗಳ ಪ್ರಶ್ನೆ. ಇತ್ತ ವಿಜಯಪುರ ನಗರ ಶಾಸಕ ಯತ್ನಾಳ‌ಕೂಡಾ ಈ ವಿಚಾರವಿ ಪ್ರತಿಕ್ರಿಯೆ ನೀಡಿ ರಾಜ್ಯದಲ್ಲಿ ಇಂದು 2 ಲಕ್ಷ 88 ಸಾವಿರ ಹುದ್ದೆಗಳು ಖಾಲಿ ಇವೆ. ನಿಗಮ ಮಂಡಳಿಗಳಲ್ಲಿ 1 ಲಕ್ಷದಷ್ಟು ಹುದ್ದೆ ಖಾಲಿ ಇವೆ. ಆದರೆ ಈ ವಿಚಾರವಾಗಿ ಹೋರಾಟಕ್ಕೆ ವಿದ್ಯಾರ್ಥಿಗಳು ಮುಂದಾದರೆ ಪೋಲಿಸರು ಅನುಮತಿ ಕೊಟ್ಟಿಲ್ಲ. ನಾವು ಯಾವುದೇ ಕಾರಣಕ್ಕೂ ಹೋರಾಟ ಬಿಡಲ್ಲ. ಯುವಕರೊಟ್ಟಿಗೆಚರ್ಚೆ ಮಾಡಿ ವಿಜಯಪುರ ದಿಂದ ಬೆಂಗಳೂರು ಚಲೋ ಕರೆ ಕೊಡುತ್ತೇವೆ. ನಮ್ಮ ಹೋರಾಟ ಆರಂಭ ಮಾಡುತ್ತಲೇ ಸರ್ಕಾರದ ಪತನದ ಮೊದಲ ಹೆಜ್ಜೆ ಆಗುತ್ತದೆ. ತಕ್ಷಣ ನೇಮಕಾತಿ ಆರಂಭಿಸಿ ಉದ್ಯೋಗ ಕಲ್ಪಿಸಬೇಕು. ಹಿಂದೆ ಇಂದಿರಾ ಗಾಂದಿ ಎಮರ್ಜೆನ್ಸಿ ತಂದಿದ್ದರು, ಈಗ ರಾಜ್ಯದಲ್ಲಿ ಸಿದ್ದರಾಮಯ್ಯನವರ ಎಮರ್ಜೆನ್ಸಿ ನಡೆದಿದೆ. ಪಾಕಿಸ್ತಾನ ಜಿಂದಾಬಾದ ಎನ್ನುವರಿಗೆ ಈ ಸರ್ಕಾರದಲ್ಲಿ ಪರ್ಮಿಷನ್ ಸಿಗತ್ತೆ. ಆದರೆ ವಿದ್ಯಾರ್ಥಿಗಳ ಹೋರಾಟಕ್ಕೆ ಇಲ್ಲ. ರಾಜ್ಯದಲ್ಲಿ ಸಿದ್ದರಾಮಯ್ಯನವರ ಸರ್ಕಾರ ದಿವಾಳಿ ಆಗಿದೆ. ಮುಂಬರುವ ದಿನದಲ್ಲಿ ವಿದ್ಯಾರ್ಥಿಗಳೊಂದಿಗೆ ಚರ್ಚಿಸಿ ಹೋರಾಟ ಮಾಡಲಾಗುವದು ಎಂದಿದ್ದಾರೆ…

ಇನ್ನೂ ಸರ್ಕಾರಿಂದ ಯಾವುದೇ ಹುದ್ದೆಗೆ ಕಾಲ್ ಫಾರ್ಮ್ ಆಗದ ಕಾರಣ ಇಂದು ಅದೆಷ್ಟೋ ವಿದ್ಯಾರ್ಥಿಗಳು ಓದುವದೇ ಸಾಕು ಎನ್ನುವಷ್ಟರ ಮಟ್ಟಿಗೆ ಜೀವನದಲ್ಲಿ ಜಿಗುಪ್ಸೆ ಹೊಂದಿದ್ದಾರೆ. ಇತ್ತ ಕಾಲ್ ಫಾರ್ಮ್ ಆಗಲ್ಲ ಇನ್ನೂ ಹೆತ್ತವರು ಎಷ್ಟು ದಿನ ಅಂತಾ ಹಣ ಕೊಡಬೇಕು ಎಂಬದು ವಿದ್ಯಾರ್ಥಿಗಳಲ್ಲಿ ಕಾಡುವ ಪ್ರಶ್ನೆಯಾಗಿದೆ‌. ಸರ್ಕಾರ ಈ ಪ್ರಕರಣ ಗಂಭೀರವಾಗಿ ಪರಿಗಣಿಸಿ ಆದಷ್ಟು ಬೇಗಾ ಕಾಲ್ ಫಾರ್ಮ್ ಮಾಡಬೇಕು ಇರದಿದ್ದರೆ ವಿದ್ಯಾರ್ಥಿಗಳು ಮುಂಬರುವ ದಿನಗಳಲ್ಲಿ ಈ ಸರ್ಕಾರಕ್ಕೆ ತಕ್ಕ ಪಾಠ ಕಲಿಸುವದಂತೂ ಶತ ಸಿದ್ದ…

Tags:

error: Content is protected !!