hubbali

ಡ್ರೈವರ್‌ ಮಗಳ ಅತ್ಯದ್ಭುತ ಸಾಧನೆ: ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ದಾಖಲೆ..!

Share

ಆಕೆ ಬಡ ಚಾಲಕನ ಮಗಳು. ಹುಟ್ಟಿ ಬೆಳೆದಿದ್ದು, ಬಡತನದಲ್ಲಿಯೇ ಆದರೂ, ಸಾಧನೆಯಲ್ಲಿ ಸಿರಿವಂತಳಾಗಿದ್ದಾಳೆ. ಕನ್ನಡ ಮಾಧ್ಯಮದಲ್ಲಿ ಓದಿ ಶೇ. 98.08ರಷ್ಟು ಅಂಕ ಪಡೆಯುವ ಮೂಲಕ ಸೈ ಎನಿಸಿಕೊಂಡಿದ್ದಾಳೆ.

ಹುಬ್ಬಳ್ಳಿ ತಾಲೂಕಿನ ಶಿರಗುಪ್ಪಿ ಗ್ರಾಮದ ಪಂಡಿತ ನೆಹರು ಪ್ರೌಢಶಾಲೆಯ ವಿದ್ಯಾರ್ಥಿನಿ ಶಕುಂತಲಾ ಹಸಬಿ ಈ ಸಾಧನೆ ಮಾಡಿದ ವಿದ್ಯಾರ್ಥಿನಿ. ಈಕೆ ಕನ್ನಡ 125, ಸಮಾಜ ವಿಜ್ಞಾನ 100, ಹಿಂದಿ 100, ಇಂಗ್ಲಿಷ್‌ 96, ವಿಜ್ಞಾನ 97, ಗಣಿತ 95 ಅಂಕ ಪಡೆಯುವ ಮೂಲಕ ಒಟ್ಟು 613 ಅಂಕ ಪಡೆದಿದ್ದಾಳೆ.

ಈಕೆಯ ತಂದೆ ಚಂದ್ರಶೇಖರ ಹಸಬಿ ಖಾಸಗಿ ಟ್ಯಾಕ್ಸಿ ಡ್ರೈವರ್‌ ಆಗಿದ್ದು, ಟೂರ್ಸ್ ಆ್ಯಂಡ್‌ ಟ್ರಾವೆಲ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಚಂದ್ರಶೇಖರ ಪಿಯುಸಿ, ಪತ್ನಿ ಬಿಎ ಓದಿದ್ದಾರೆ. ತಾವು ಸರಿಯಾಗಿ ಓದದ ಕಾರಣ ನೌಕರಿ ಸಿಕ್ಕಿಲ್ಲ. ಆದರೆ, ಮಕ್ಕಳಿಗಾದರೂ ಉತ್ತಮ ಶಿಕ್ಷಣ ಕೊಡಿಸೋಣವೆಂದು ಹಗಲಿರುಳು ಶ್ರಮಿಸುತ್ತಿದ್ದಾರೆ. ಅದರ ಫಲವಾಗಿ ಶಕುಂತಲಾ 613 ಅಂಕ ಪಡೆದಿದ್ದು, ಬಿಎ ಎಲ್‌ಎಲ್‌ಬಿ ಓದಿ ಹೈಕೋರ್ಟ್‌ ವಕೀಲೆಯಾಗಬೇಕೆಂಬ ಆಸೆ ಇಟ್ಟುಕೊಂಡಿದ್ದಾಳೆ.

ಇನ್ನೂ ಶಕುಂತಲಾಳ ಹಿರಿಯ ಸಹೋದರ ಸಹ ಎಸ್‌ಎಸ್‌ಎಲ್‌ಸಿಯಲ್ಲಿ ಹುಬ್ಬಳ್ಳಿ ಗ್ರಾಮೀಣ ತಾಲೂಕಿಗೆ ಫಸ್ಟ್‌ ಬಂದಿದ್ದ. ಇನ್ನು ಪಿಯುಸಿಯಲ್ಲಿ ವಿಜ್ಞಾನ ವಿಭಾಗ ಆಯ್ಕೆ ಮಾಡಿಕೊಂಡಿದ್ದ ಈತ ಅಲ್ಲೂ ಶೇ. 95ರಷ್ಟು ಅಂಕ ಪಡೆಯುವ ಮೂಲಕ ಕಾಲೇಜಿಗೆ 3ನೇ ಸ್ಥಾನ ಪಡೆದಿದ್ದಾ‌ನೆ.

Tags:

error: Content is protected !!