BELAGAVI

ನೀರಿನಲ್ಲಿ ಮುಳುಗಿದ್ದ ವ್ಯಕ್ತಿಯ ಶವ ಕೇವಲ ಎರಡು ಗಂಟೆಯಲ್ಲಿ ಪತ್ತೆ ಹಚ್ಚಿದ HERF ತಂಡ

Share

ಬೆಳಗಾವಿ ಜಿಲ್ಲೆಯ ಬಂಬರಗಾ ಗ್ರಾಮದ ಬಳಿ ನೀರಿನಲ್ಲಿ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ನಡೆದಿದೆ. ಮಾಹಿತಿ ಸಿಕ್ಕ ಕೂಡಲೇ ಸ್ಥಳಕ್ಕೆ ಧಾವಿಸಿದ ಹೆಲ್ಪ್‌ಲೈನ್ ರಕ್ಷಣಾ ತಂಡವು ಅತ್ಯಂತ ಕಡಿಮೆ ಸಮಯದಲ್ಲಿ ಮೃತದೇಹವನ್ನು ಹೊರತೆಗೆದು ಶ್ಲಾಘನೆಗೆ ಪಾತ್ರವಾಗಿದೆ.
ಇಂದು ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಬಂಬರಗಾ ಗ್ರಾಮದ ಬಳಿ ಕರಗುಪ್ಪಿ ನಿವಾಸಿ ಬಸವರಾಜ ಮಾರುತಿ ಮಾಳಗಿ (34) ಎಂಬುವವರು ನೀರಿನಲ್ಲಿ ಬಿದ್ದಿರುವ ಬಗ್ಗೆ ಪೊಲೀಸ್ ಇಲಾಖೆಯಿಂದ ಮಾಹಿತಿ ಲಭ್ಯವಾಗಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ‘ಹೆಲ್ಪ್‌ಲೈನ್ ಎಮರ್ಜೆನ್ಸಿ ರೆಸ್ಕ್ಯೂ ಫೌಂಡೇಶನ್’ (HERF) ತಂಡವು ಬೋಟ್ ಸಮೇತ ಸ್ಥಳಕ್ಕೆ ಧಾವಿಸಿತು. ತಂಡದ ಸದಸ್ಯರಾದ ಬಸವರಾಜ ಹಿರೇಮಠ, ಸೂರಜ್ ರಾಕ್ಷೆ, ಕಾರ್ತಿಕ್ ಪಾಟೀಲ್ ಹಾಗೂ ಪ್ರಕಾಶ್ ಪಾಟೀಲ್ ಅವರ ವ್ಯವಸ್ಥಿತ ಕಾರ್ಯಾಚರಣೆಯ ಫಲವಾಗಿ, ಕೇವಲ ಎರಡು ಗಂಟೆಗಳಲ್ಲಿ ಮೃತದೇಹವನ್ನು ಪತ್ತೆಹಚ್ಚಿ ದಡಕ್ಕೆ ತರಲಾಯಿತು. ಈ ವೇಗದ ಕಾರ್ಯಾಚರಣೆಯಿಂದಾಗಿ ಕಾನೂನು ಪ್ರಕ್ರಿಯೆಗಳಿಗೆ ಹೆಚ್ಚಿನ ಸಹಕಾರಿಯಾಗಿದ್ದು, ಸ್ಥಳೀಯ ಆಡಳಿತ ಮತ್ತು ಸಾರ್ವಜನಿಕರು ರಕ್ಷಣಾ ತಂಡದ ಸಾಹಸವನ್ನು ಕೊಂಡಾಡಿದ್ದಾರೆ.

Tags:

error: Content is protected !!