ಕಾಗವಾಡ ಕ್ಷೇತ್ರ ಶಿಕ್ಷಣಾಧಿಕಾರಿ ವಲಯ ಮಟ್ಟದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ಶೇಕಡ 95.42 ರಷ್ಟು ದೊರೆತಿದ್ದು ಚಿಕ್ಕೋಡಿ ಜಿಲ್ಲಾ ಮಟ್ಟದಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದೆ ಎಂದು ಬಿಇಒ ಪಾಂಡುರಂಗ ಮದಬಾವಿ ಹೇಳಿದರು.


ಕಾಗವಾಡದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ತಾಲೂಕಿನಲ್ಲಿ ವಿಶೇಷ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಅದರೊಂದಿಗೆ ಸಾಧನೆ ಮಾಡುವುದರಲ್ಲಿ ಪ್ರೀತ್ನಿಸಿದ ಎಲ್ಲಾ ಶಿಕ್ಷಕರಿಗೆ ಸನ್ಮಾನಿಸಿ ಅಭಿನಂದಿಸಿದರು.
ವಲಯದಲ್ಲಿ 37 ಪ್ರೌಢಶಾಲೆಗಳ ಪೈಕಿ 17 ಶಾಲೆಯ ನೂರರಷ್ಟು ಫಲಿತಾಂಶ ಪಡೆದಿದ್ದಾರೆ. ಪರೀಕ್ಷೆಗೆ ಹಾಜಿರಾದ ವಿದ್ಯಾರ್ಥಿಗಳು 2161 ಉತ್ತೀರ್ಣಗೊಂಡ ವಿದ್ಯಾರ್ಥಿಗಳು 2062 ಅನುತ್ತೀರ್ಣ 99 ಶೇಕಡ ಫಲಿತಾಂಶ 95.45 ದೊರೆತಿದೆ.
ಇನ್ನುಳಿದ ಆರು ಪ್ರೌಢಶಾಲೆಗಳಲ್ಲಿ ಶೇಕಡ 99 ವಿದ್ಯಾರ್ಥಿ ಉತ್ತಂಡ ರಾಗಿದ್ದಾರೆ ಈ ವರ್ಷದ ಫಲಿತಾಂಶ ವಿಶೇಷವಾಗಿದ್ದು ಎಲ್ಲ ಶಿಕ್ಷಕರು ವಿದ್ಯಾರ್ಥಿಗಳು ಪ್ರತ್ನಿಸಿದ್ದಾರೆ ಎಂದು ಹೇಳಿದರು.
ಸನ್ಮಾನ ಸಮಾರಂಭದಲ್ಲಿ ಶೇಡಬಾಳ ಸನ್ಮತಿ ವಿದ್ಯಾಲಯದ ಸಂತೋಷ್ ರತ್ನಾಪುಗೌಳ ರಾಜ್ಯಕ್ಕೆ ತೃತೀಯ, ಸರ್ಕಾರಿ ಪ್ರೌಢಶಾಲೆ ತಂಗಡಿ ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ಯಶೋದ ಮೂರೇ, ಹಾಗೂ ಕೆ ಆರ್ ಇ ಎಸ್ ಐನಾಪುರ್ ತಲೆಯ ಐಶ್ವರ್ಯ ಉಂಗ್ರಾಣಿ, ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ಸುರುಗುಪ್ಪಿ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಅಭಿನಂದಿಸಿದರು.
ಸಮಾರಂಭದಲ್ಲಿ ದೈಹಿಕ ಶಿಕ್ಷಕ ಪರಿವೀಕ್ಷಕರು ಎಂ ವೈ ಪೂಜಾರಿ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎ ಎಸ್ ಪಾಟೀಲ್, ಮುಖ್ಯೋಧ್ಯಾಪಕರಾದ ಶ್ರೀಮತಿ ಎಂ ಎನ್ ಕಾಳಿನಟ್ಟಿ, ಎಸ್ ಪಿ ಸನದಿ, ಎಸ್ ಆರ್ ಹುಲಿನವರ, ಎಲ್ಲಾದರೂ ಹೋಗಿ ಆರ್ ಟಿ ಗುರವ, ಸಂಜೆಯ ಬಿರಡಿ, ಎಸ್ ಆರ್ ಮಾಳಿ, ಭರತ ಗೆಲವಡೆ, ಸೇರಿದಂತೆ ಅನೇಕರು ಇದ್ದರು.
