BELAGAVI

ಸುಳೇಭಾವಿಯಲ್ಲಿ ಸಂಭ್ರಮ ಶಿವಜಯಂತಿ: 7 ದಶಕಗಳ ಪಾರಂಪರಿಕ ಎತ್ತಿನ ಗಾಡಿ ಮೆರವಣಿಗೆ

Share

ಬೆಳಗಾವಿ ತಾಲೂಕಿನ ಪ್ರಸಿದ್ಧ ಕ್ಷೇತ್ರ ಸುಳೇಭಾವಿಯಲ್ಲಿ ಈ ಬಾರಿಯೂ ಶಿವಜಯಂತಿಯ ಸಡಗರ ಮನೆಮಾಡಿದೆ. ಕಳೆದ ಏಳು ದಶಕಗಳಿಂದ ನಡೆದುಕೊಂಡು ಬಂದಿರುವ ವಿಶಿಷ್ಟ ಸಂಪ್ರದಾಯದಂತೆ, ಎತ್ತಿನ ಗಾಡಿಯಲ್ಲಿ ಶಿವಬೆಳಗಿನ ಮೆರವಣಿಗೆ ನಡೆಸುವ ಮೂಲಕ ಶಿವಭಕ್ತರು ತಮ್ಮ ಅಪ್ರತಿಮ ಭಕ್ತಿಯನ್ನು ಮೆರೆದಿದ್ದಾರೆ.

ಬೆಳಗಾವಿ ತಾಲೂಕಿನ ಶಕ್ತಿ ದೇವತೆ ಶ್ರೀ ಮಹಾಲಕ್ಷ್ಮೀಯ ಪುಣ್ಯಕ್ಷೇತ್ರವಾದ ಸುಳೇಭಾವಿಯಲ್ಲಿ ಛತ್ರಪತಿ ಶಿವಾಜೀ ಮಹಾರಾಜ ವ್ಯಾಯಾಮ ಶಾಲಾ ಯುವಕ ಮಂಡಳದ ವತಿಯಿಂದ ಕಳೆದ 60-70 ವರ್ಷಗಳ ಸುದೀರ್ಘ ಪರಂಪರೆಯ ಪಾರಂಪರಿಕ ಶಿವಜಯಂತಿಯನ್ನು ಅತ್ಯಂತ ವೈಭವದಿಂದ ಆಚರಿಸಲಾಯಿತು. ಪಾರಂಪರಿಕ ಎತ್ತಿನ ಗಾಡಿಯಲ್ಲಿ ಶಿವಾಜೀ ಮಹಾರಾಜರ ಭಾವಚಿತ್ರವನ್ನು ಇರಿಸಿದ ಮೆರವಣಿಗೆಯು ಲಕ್ಷ್ಮೀ ಗಲ್ಲಿಯಿಂದ ಆರಂಭವಾಗಿ ಕಲ್ಮೇಶ್ವರ ದೇವಸ್ಥಾನ, ಮಹಾಲಕ್ಷ್ಮೀ ಮಂದಿರ ಹಾಗೂ ರೇಣುಕಾ ಮಂದಿರ ಸೇರಿದಂತೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಈ ಸಂಭ್ರಮದ ಮೆರವಣಿಗೆಯ ಯಶಸ್ವಿಗಾಗಿ ಅನೀಲ ಮುರಾರಿ, ವಿಲಾಸ್ ಮೋಳಗಿ, ನಾಗೇಶ್ ಚೌಗುಲೆ, ದೇವರಾಜ್ ಕುಕಡೊಳ್ಳಿ, ವಿಶ್ವನಾಥ್ ಪಾಟೀಲ್, ಕಿರಣ್ ಬಡಕಿ, ಲಕ್ಷ್ಮಣ್ ಗೌಡಪ್ಪಗೊಳ, ಬಸವಾಣಿ ಮುರಾರಿ, ದೇವಾನಂದ ಹುಂಕರಿಪಾಟೀಲ್, ಲಕ್ಷ್ಮಣ್ ಮುರಾರಿ, ಸಿದ್ರಾಯಿ ಹುಂಕರಿಪಾಟೀಲ್ ಸೇರಿದಂತೆ ಇನ್ನುಳಿದವರು ಶ್ರಮಿಸಿದರು.

Tags:

error: Content is protected !!