Vijaypura

ರವೀಂದ್ರನಾಥ ಠಾಗೋರ್ ಶಾಲೆಗೆ ಕೀರ್ತಿ ತಂದ ವಿದ್ಯಾರ್ಥಿಗಳು; ವಿದ್ಯಾರ್ಥಿಗಳ ಅಭೂತಪೂರ್ವ ಸಾಧನೆಗೆ ಅಭಿನಂದನೆ

Share

ವಿಜಯಪುರ ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿರುವ ಛತ್ರಪತಿ ಶಿವಾಜಿ ಮಹಾರಾಜ ಶಿಕ್ಷಣ ಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ರವೀಂದ್ರನಾಥ ಠಾಗೋರ್ ಪ್ರೌಢಶಾಲೆಯ ವಿದ್ಯಾರ್ಥಿಗಳು ಇಂದು ಪ್ರಕಟಗೊಂಡ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅಮೋಘ ಸಾಧನೆ ಮಾಡಿದ್ದಾರೆ. ಇಂದು ಪ್ರಕಟಗೊಂಡ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಅಭೂತಪೂರ್ವ ಯಶಸ್ಸನ್ನು ಗಳಿಸಿದ್ದಾರೆ. ಇಂಗ್ಲಿಷ್‌ ಮಾದ್ಯಮದಲ್ಲಿ ನಿಖಿತಾ ನೀಲೂರ 98.08%, ಶ್ರೇಯಾ ಕಾಮನಕೇರಿ 96%, ಗೌರಿ ಘಾಟಗೆ 95%, ಸೃಷ್ಟಿ ಸಾತರೇಕರ 94.24/, ಹೇಮಂತ ಮಳ್ಳೂರ 94&, ಶ್ರೀ ಗಾಯಕವಾಡ 94%, ನೇಹಾಲ ನದಾಫ್ 93, ಸಮರ್ಥ ಪಾವಟೆ 92.06% ಸಿಂಚನಾ ಸುರಪುರ 92.16% ಇನ್ನೂ ಕನ್ನಡ ಮಾದ್ಯಮದಲ್ಲಿ ರಾಗಿಣಿ ಬಿರಾದಾರ 93%, ನಜೀಮಿನ್ ಮಾಳನೂರ 91% ಶ್ವೇತಾ ಬಿರಾದಾರ 90% ಪ್ರತಿಭಾ ಧರ್ಮಟ್ಟಿ 90% ಹೀಗೆ ಸಾಧನೆಗೈದಿದ್ದಾರೆ. ವಿದ್ಯಾರ್ಥಿಗಳ ಅಮೋಘ ಸಾಧನೆಗೆ ಸಂಸ್ಥೆಯ ಚೇರ್ಮನ್ ಶಿವಾಜಿ ಗಾಯಕವಾಡ ಇವರು ವಿದ್ಯಾರ್ಥಿಗಳನ್ನು ಅಭಿನಂಧಿಸಿದ್ದಾರೆ. ವಿದ್ಯಾರ್ಥಿಗಳ ಮುಂದಿನ ಶೈಕ್ಷಣಿಕ ಜೀವನ ಯಶಸ್ಸು ಪಡೆಯಲಿ. ವಿದ್ಯಾರ್ಥಿಗಳ ಕನಸುಗಳಂತೆ ಅವರ ಕನಸನ್ನು ನನಸಾಗಿಸಿಕೊಳ್ಳಲಿ ಎಂದು ಶುಭ ಹಾರೈಸಿದ್ದಾರೆ. ಸಾಧನೆಗೈದ ವಿದ್ಯಾರ್ಥಿಗಳಿಗೆ ಹಾಗೂ ಶಾಲಾ ಶಿಕ್ಷಕರಿಗೆ ಸಂಸ್ಥೆಯ ಕಾರ್ಯರ್ದಶಿ ಶ್ರೀಮತಿ ರೀತಾ ಗಾಯಕವಾಡ, ಪ್ರಿನ್ಸಿಪಲ್ ಅಭಿಜಿತ ಗಾಯಕವಾಡ ಹಾಗೂ ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ವಿಜಯಕುಮಾರ ಸಾರವಾಡ ಅಭಿನಂಧಿಸಿ ಕೃತಜ್ಞತೆ ಸಲ್ಲಿಸಿದ್ದಾರೆ.

Tags:

error: Content is protected !!