BELAGAVI

ರೈತರ ಭೂಮಿಗೆ ಕನ್ನ ಹಾಕಿದ ವಂಚಕ!!???

Share

ರೈತರಿಂದ ಪಡೆದ ಕೇವಲ 2 ವರ್ಷದ ಒಪ್ಪಂದವನ್ನು, ಮೋಸದಿಂದ 20 ವರ್ಷಕ್ಕೆ ಬದಲಾಯಿಸಿ, ರೈತರ ಬದುಕಿನ ಆಧಾರವನ್ನೇ ಕಸಿದುಕೊಳ್ಳಲು ಮುಂದಾಗಿರುವ ವ್ಯಕ್ತಿಯ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಒತ್ತಾಯಿ ಜಯ ಕರ್ನಾಟಕ ಸಂಘಟನೆಯ ವತಿಯಿಂದ ಬೆಳಗಾವಿ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಎದುರು ಪ್ರತಿಭಟನೆ ನಡೆಸಿ ಮನವಿಯನ್ನು ಸಲ್ಲಿಸಲಾಯಿತು.

ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ತೀರ್ಥಕುಂಡ ಗ್ರಾಮದಲ್ಲಿ ಆಘಾತಕಾರಿ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಗ್ರಾಮದ ರೈತರಾದ ತಾತೋಬಾ ವಿಠಲ್ ಖಾಮಕರ್ ಮತ್ತು ತುಕಾರಾಮ್ ವಿಠಲ್ ಖಾಮಕರ್ ಎಂಬುವರು ತಮ್ಮ ಮೂರು ಎಕರೆ ಜಮೀನನ್ನು ರಾಘವೇಂದ್ರ ರಮೇಶ್ ನಾಯ್ಕ ಎಂಬುವರಿಗೆ ಎರಡು ವರ್ಷಗಳ ಅವಧಿಗೆ ಮಾತ್ರ ಕರಾರು ಮಾಡಿಕೊಟ್ಟಿದ್ದರು. ಆದರೆ, ರೈತರ ಅನಕ್ಷರತೆಯ ಲಾಭ ಪಡೆದ ರಾಘವೇಂದ್ರ, ದಾಖಲೆಗಳಲ್ಲಿ ಮೋಸದಿಂದ ಅವಧಿಯನ್ನು 20 ವರ್ಷಗಳಿಗೆ ಹೆಚ್ಚಿಸಿಕೊಂಡಿದ್ದಾನೆ. ಅಷ್ಟೇ ಅಲ್ಲದೆ, ಒಪ್ಪಂದಕ್ಕಿಂತ ಹೆಚ್ಚಿನ ಜಮೀನನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ರೈತರಿಗೆ ಪಂಗನಾಮ ಹಾಕಿದ್ದಾನೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಕುರಿತಾದ ಮನವಿಯನ್ನು ಇಂದು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಯಿತು.

ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲೂಕಿನ ತೀರ್ಥಕುಂಡೆ ಗ್ರಾಮದ ತಾತೋಬಾ ಕಾಮಕರ ಎಂಬ ಬಡ ರೈತನಿಗೆ ಸೇರಿದ ಜಮೀನನ್ನು 2 ವರ್ಷಕ್ಕೆ ಲೀಜ್ ನೀಡಿದ್ದಾರೆ. ಆದರೇ ರಾಘವೇಂದ್ರ ನಾಯಕ 20 ವರ್ಷ ಎಂದು ತಿದ್ದುಪಡಿ ಮಾಡಿದ್ದಾರೆ. ಅಲ್ಲದೇ ಇದನ್ನ ಪ್ರಶ್ನಿಸಿದ ರೈತರ ಮೇಲೆ ದಬ್ಬಾಳಿಕೆ ಮಾಡಲಾಗುತ್ತಿದೆ. ಖಾನಾಪೂರ ಠಾಣೆಯಲ್ಲಿ ದೂರು ನೀಡಿದರೂ 3 ಎಕರೆಯಿದ್ದ ಜಮೀನನ್ನು 5 ಎಕರೆಯ ವರೆಗೆ ಕಬಳಿಸಿದ್ದಾರೆ. ಈ ರೈತ ಕುಟುಂಬಕ್ಕೆ ನ್ಯಾಯ ನೀಡಬೇಕೆಂದು ಜಯ ಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ಸಂಜಯ್ ರಜಪೂತ ಹೇಳಿದರು.

ಇನ್ನು ಲಕ್ಷ್ಮೀ ಕಾಮಕರ ಅವರು ಮಾತನಾಡಿ ನಾವು ಹೊಲಕ್ಕೆ ಕಾಲಿಡುತ್ತಲೇ ನಮಗೆ ತೊಂದರೆ ನೀಡುತ್ತಿದ್ದಾರೆ. ಜಮೀನು ನೀಡುವುದಾಗಿ ಹೇಳಿದ್ದರು. ಆದರೇ, ನಾವು ಹೊಲದಲ್ಲಿ ಬೆಳೆದ ಬೆಳೆಯನ್ನು ಹಾಳು ಮಾಡುತ್ತಿದೆ. ಕೇವಲ 15 ಲಕ್ಷ ರೂಪಾಯಿಗೆ ಲೀಜ್ ಪಡೆದು ಈ ತೊಂದರೆ ನೀಡುತ್ತಿದ್ದಾರೆಂದು ಆರೋಪಿಸಿದರು.

ಈ ಸಂದರ್ಭದಲ್ಲಿ ಖಾಮಕರ ಕುಟುಂಬದವರು ಮತ್ತು ಜಯ ಕರ್ನಾಟಕ ಸಂಘಟನೆಯ ಪ್ರಮುಖರು ಭಾಗಿಯಾಗಿದ್ಧರು.

Tags:

error: Content is protected !!