ವೀರಭದ್ರ ದೇವರ ನೃತ್ಯ ಮಾಡುತ್ತಿದ್ದ ಪುರವಂತರೊಬ್ಬರು 21 ಅಡಿಯ ಚೂಪಾದ ಶಸ್ತ್ರವನ್ನ ಗಲ್ಲಕ್ಕೆ ಚುಚ್ಚಿಕೊಂಡು ಪ್ರದರ್ಶನ ನೀಡಿ ಜನರನ್ನ ನಿಬ್ಬೆರಗಾಗಿಸಿದ ಘಟನೆ ವಿಜಯಪುರ ಜಿಲ್ಲೆಯ ಗವಿಮಠ ಬೊಮ್ಮನಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಜಡೆಯಶಾಂತೇಶ್ವರ ಜಾತ್ರೆ ನಿಮಿತ್ತವಾಗಿ ಶಿರಗೂರಿನ ಪುರವಂತ ಆರ್ ಜಿ ಹಿರೇಮಠ ಪವಾಡ ಪ್ರದರ್ಶಿಸಿ ನೆರೆದಿದ್ದ ಜನರನ್ನ ಅಚ್ಚರಿಗೊಳಿಸಿದರು. 21 ಅಡಿಯಷ್ಟಿದ್ದ ಸ್ಟಿಲ್ ರಾಡ್ ನ ಚೂಪಾದ ಮುಂಭಾಗವನ್ನ ಗಲ್ಲಕ್ಕೆ ಚುಚ್ಚಿಕೊಂಡ ಆರ್ ಜಿ ಹಿರೇಮಠ ವೀರಾವೇಶದೊಂದಿದೆ ಪ್ರದರ್ಶಿಸಿದರು. ಬಳಿಕ ಗಲ್ಲದ ರಂಧ್ರದ ಮೂಲಕವೇ ರಾಡನ್ನ ಹೊರ ತೆಗೆದು ಜನರನ್ನ ನಿಬ್ಬೆರಗಾಗುವ ಹಾಗೇ ಮಾಡಿದ್ರು..

