ಬೆಳಗಾವಿಯಲ್ಲಿ ಶೀಘ್ರದಲ್ಲೇ 100 ಕೋಟಿ ವೆಚ್ಚದಲ್ಲಿ ತಿರುಪತಿ ಬಾಲಾಜೀ ದೇವಸ್ಥಾನವನ್ನು ಮುಂಬರುವ 2 ವರ್ಷಗಳಲ್ಲಿ ನಿರ್ಮಿಸಲಾಗುವುದೆಂದು ತಿರುಪತಿ ಬಾಲಾಜಿ ದೇವಸ್ಥಾನ ಟ್ರಸ್ಟಿನ ನರೇಶ್’ಕುಮಾರ್ ಅವರು ತಿಳಿಸಿದರು.

ಇಂದು ಬೆಳಗಾವಿಯಲ್ಲಿ ಕರೆಯಲಾಗಿದ್ದ ಮಾಧ್ಯಮಗೋಷ್ಟಿಯನ್ನು ಉದ್ಧೇಶಿಸಿ ಮಾತನಾಡಿದ ಅವರು ಕರ್ನಾಟಕದ ಎರಡನೇ ರಾಜಧಾನಿ ಬೆಳಗಾವಿಯಲ್ಲಿ ತಿರುಪತಿ ತಿಮ್ಮಪ್ಪನ ದೇವಸ್ಥಾನವನ್ನು ನಿರ್ಮಿಸಲಾಗುತ್ತಿದೆ. ರೆಡ್ಡಿ ಸಮಾಜದವರು 7 ಎಕರೆ ಭೂಮಿಯನ್ನು ದಾನವಾಗಿ ನೀಡಿದ್ದಾರೆ. ಇದು ಉತ್ತರ ಕರ್ನಾಟಕದ ಜನರಿಗೆ ಅನುಕೂಲವಾಗಲಿದೆ. ಆದರೇ, ಬಾಲಾಜಿ ದೇವಸ್ಥಾನ ಟ್ರಸ್ಟ್ ಎಲ್ಲ ಕಾರ್ಯಗಳನ್ನು ಮುಂದುವರೆಸಿದೆ.
ಸದ್ಯ ಬೆಳಗಾವಿಯಲ್ಲಿ ಸುಮಾರು 2 ವರ್ಷಗಳಲ್ಲಿ ತಿರುಪತಿ ತಿಮ್ಮಪ್ಪನ ದೇವಸ್ಥಾನ, ಕಾರ್ಯಾಲಯ ನಿರ್ಮಾಣ, ದೂರದಿಂದ ಭಕ್ತರಿಗೆ ತಂಗುವ ವ್ಯವಸ್ಥೆ, ಅನ್ನದಾನ ಎಲ್ಲ ವ್ಯವಸ್ಥೆಯನ್ನು ಮಾಡಲಾಗುವುದು. ಇದಕ್ಕಾಗಿ 100 ಕೋಟಿಗೂ ಅಧಿಕ ಖರ್ಚಾಗಲಿದ್ದು, ಶೇ. 10 ರಷ್ಟು ರೆಡ್ಡಿ ಜನರು, ಇನ್ನುಳಿದದ್ದನ್ನು ಭಕ್ತರ ದೇಣಿಗೆಯಿಂದ ಪಡೆಯಲಾಗುವುದು. ಇನ್ನು ಹೆಚ್ಚಿನ ಜಾಗೆಯನ್ನು ನೀಡಿದರೇ ತೆಗೆದುಕೊಳ್ಳಲಾಗುವುದು. ಕೊಲ್ಹಾಪುರ ಮಹಾಲಕ್ಷ್ಮೀ ದರ್ಶನ ಪಡೆದು ಬರುವ ಭಕ್ತರಿಗೆ ಇದು ಅನುಕೂಲವಾಗಲಿದೆ ಎಂದರು.
