Banglore

ಮೀಸಲಾತಿ ವಿಚಾರದಲ್ಲಿ ಎಸ್‌ಸಿ, ಎಸ್‌ಟಿ ಸಮುದಾಯಕ್ಕೆ ಅನ್ಯಾಯ ಸಿಎಂ ಸರ್ವಪಕ್ಷಗಳ ಸಭೆ ಕರೆದು ಚರ್ಚಿಸಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ವಿ.ಎಸ್. ಉಗ್ರಪ್ಪ ಆಕ್ರೋಶ

Share

 

ಸಮಾಜದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರ ಮೀಸಲಾತಿ ಕೊಡುವಲ್ಲಿ ಅನ್ಯಾಯ ಮಾಡಿವೆ ಎಂದು‌ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಹೇಳಿದರು.

ಮಂಗಳವಾರ ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ರಾಜ್ಯದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಸಮಾನ್ಯ ವರ್ಗದವರು 4 ಕೋಟಿ ಜನಸಂಖ್ಯೆ ಇದೆ. ರಾಜಕೀಯದಲ್ಲಿ ಜನಸಂಖ್ಯೆಯ ಅನುಸಾರವಾಗಿ ಮೀಸಲಾತಿ ‌ನೀಡಿದ್ದಾರೆ. ಆದರೆ ಮೀಸಲಾತಿ ವಿಚಾರದಲ್ಲಿ ನಮಗೆ ಅನ್ಯಾಯವಾಗಿದೆ ಎಂದರು‌.

ಕೇಂದ್ರ ಮತ್ತು ರಾಜ್ಯ ಸರಕಾರ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರ ಬದುಕಿನ ಜೊತೆಗೆ ಚೆಲ್ಲಾಟವಾಡುತ್ತಿದ್ದಾರೆ. ಸಾಮಾಜೀಕ ನ್ಯಾಯದ ಬಗ್ಗೆ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ನಾಯಕರೊಂದಿಗೆ ಕೇಂದ್ರ ಸರಕಾರಕ್ಕೆ ನಿಯೋಗ ತೆಗೆದುಕೊಂಡು ಹೋಗಬೇಕು ಎನ್ನುವ ನಿರ್ಣಯವನ್ನು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ‌ಡಿ.ಕೆ.ಶಿವಕುಮಾರ ಸಭೆ ಕರೆಯಬೇಕು ಎಂದರು. ಬೈಟ್

ಸಣ್ಣ ಸಣ್ಣ ಮಕ್ಕಳ ಪತ್ರಕ್ಕೆ ಉತ್ತರ ಕೊಡುವ ಪ್ರಧಾನಿ ನರೇಂದ್ರ ‌ಮೋದಿ ಅವರು ಏಳು ಕೋಟಿ ಜನಸಂಖ್ಯೆ ಇರುವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಮೀಸಲಾತಿ ವಿಚಾರ ಕುರಿತು ಪತ್ರ‌ ಬರೆದೂ ಪ್ರಧಾನಿ ನರೇಂದ್ರ ಮೋದಿ ಅವರಿಂದ ಉತ್ತರ ಬಂದಿಲ್ಲ ಎಂದು ಹರಿಹಾಯ್ದರು.

ಮಹಿಳಾ ಮೀಸಲಾತಿಯನ್ನು 33% ಮೀಸಲಾತಿ ತರಲು ಹೊರಟಿರುವ ಪ್ರಧಾನಿ ನರೇಂದ್ರ ಮೋದಿ ಅವರು 2011ರ ಮೀಸಲಾತಿ ಪಡೆದು ಮಸೂದೆ ಪಾಸ್ ಮಾಡಲು ಹೋಗಿ ಮೋದಿ ಮಸೂದೆ ಫೇಲ್ ಆಗಿದೆ. ಮಿಸ್ಟರ್ ಮೋದಿ ಮಹಿಳೆಯರ ಮೇಲೆ ನಿಮಗೆ ಗೌರವ, ಬದ್ಧತೆ ಇದ್ದರೆ, ಸಂವಿಧಾನಕ್ಕಿಂತ ಹೆಚ್ಚು ಮನುವಾಧಿ ಹಾಗೂ ಆರ್ ಎಸ್ ಎಸ್ ನವರ ಕೈವಾಡ ಹೆಚ್ಚಾಗಿದೆ ಎಂದು ಕಿಡಿಕಾರಿದರು. ಬೈಟ್

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಸಮಾಜದವರಿಗೆ ಅನ್ಯಾಯವಾದರೂ ನಮ್ಮ ಸಮಾಜದ ಶಾಸಕ, ಸಚಿವರು ಬಾಯಿ ಬಿಡುತ್ತಿಲ್ಲ ಎಂದರು. ಬೈಟ್

ಶಿವಾನಂದ ಸ್ವಾಮೀಜಿ, ನರಸಿಂಹ, ರಾಜಣ್ಷ, ವೆಂಕಟೇಶ ನಾಯಕ, ಸುರೇಶ ಗವನ್ನವರ, ಮಹೇಶ್ ಶೀಗಿಹಳ್ಳಿ, ಹನುಮಂತರಾಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tags:

error: Content is protected !!