Accident

ಮೀನು ಹಿಡಿಯಲು ಹೋಗಿ ಶವವಾಗಿ ಬಂದ ಮೀನುಗಾರ.

Share

ಹುಕ್ಕೇರಿ ತಾಲೂಕಿನ ಬೆಣಿವಾಡ ಗ್ರಾಮದ ಹಿರಣ್ಯಕೇಶಿ ನದಿಯಲ್ಲಿ ಮೀನು ಹಿಡಿಯಲು ಹೋಗಿದ್ದ ಮೀನುಗಾರ ನದಿಯಲ್ಲಿ ಶವವಾದ ಘಟನೆ ಜರುಗಿದೆ.
ಹುಕ್ಕೇರಿ ನಗರದ ಭೋವಿ ಗಲ್ಲಿಯ ನಿವಾಸಿ 50 ವರ್ಷದ ರಾಜು ರಾಮು ಭೋವಿ ಎಂಬುವವನು ಮೀನು ಹಿಡಿಯಲು ಬೆಣಿವಾಡ ಗ್ರಾಮದ ಹಿರಣ್ಯಕೇಶಿ ನದಿಗೆ ತೇರಳಿದಾಗ ಆಳವಾದ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.

ಮೃತನಿಗೆ ಓರ್ವ ಹೆಂಡತಿ ಮತ್ತು ಮೂರು ಜನ ಹೆಣ್ಣು ಮಕ್ಕಳು ಇದ್ದು ಪ್ರತಿ ದಿನ ಮೀನು ಹಿಡಿದು ಮಾರಿ ಜೀವನ ಸಾಗಿಸುತ್ತಿದ್ದನು ಈಗ ಅವನ ಅಗಲಿಕೆಯಿಂದ ಕುಟುಂಬಸ್ಥರು ದಿಕ್ಕು ದೋಚದಂತಾಗಿದೆ, ಕುಟುಂಬದ ಆಧಾರವಾಗಿದ್ದ ರಾಜುವಿನ ನಿಧನದಿಂದ ಸಂಸಾರ ಬೀದಿಗೆ ಬಂದಿದೆ.

ಸ್ಥಳಕ್ಕೆ ಹುಕ್ಕೇರಿ ಪೋಲಿಸರು ಆಗಮಿಸಿ ಪ್ರಕರಣ ಧಾಖಲಿಸಿ ಈಜುಗಾರರ ಸಹಾಯದಿಂದ ಮೃತನ ಶವ ತಗೆದು ಮರಣೋತ್ತರ ಪರಿಕ್ಷೆಗೆ ರವಾನಿಸಿದ್ದಾರೆ.
ಮೀನುಗಾರ ಇಲಾಖೆ ವತಿಯಿಂದ ಮೃತನ ಕುಟುಂಬಕ್ಕೆ ಸಹಾಯ ಧನ ನೀಡಿ ಪರಿಹಾರ ಒದಗಿಸ ಬೇಕು ಎಂದು ಮೀನುಗಾರರ ಸಂಘದ ಸದಸ್ಯರು ಒತ್ತಾಯಿಸಿದ್ದಾರೆ.

ರಾಜು ಬಾಗಲಕೋಟಿ
ಇನ್ ನ್ಯೂಜ ಹುಕ್ಕೇರಿ.

Tags:

error: Content is protected !!