• ಜಿಲ್ಲಾಸ್ಪತ್ರೆಯಲ್ಲಿ ಹೈಟೆಕ್ ‘ಹೀಟ್ ಸ್ಟ್ರೋಕ್’ ವಾರ್ಡ್ ಸಜ್ಜು
• ಶಾಖದ ಅಲೆ ತಡೆಯಲು ಜಿಲ್ಲಾಡಳಿತದ ಹೈ ಅಲರ್ಟ್

ವಿಜಯಪುರ ಜಿಲ್ಲೆಯಲ್ಲಿ ಹೆಚ್ಚಾಗುತ್ತಿದೆ ಬಿಸಿಲಿನ ತಾಪ; ಬಿಸಿಲಿನ ತಾಪಕ್ಕೆ ಬೆಚ್ಚಿಬಿದ್ದ ಗುಮ್ಮಟ ನಗರಿ ಜನ; ಜಿಲ್ಲಾಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್ ಓಪನ್, ಜನರಿಗೆ ಮುನ್ನೆಚ್ಚರಿಕೆ
ಈ ಜಿಲ್ಲೆ ಈಗ ಬಿಸಿಲು ನಾಡಾಗಿದೆ. ಈಗ 42 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಜಿಲ್ಲೆಯ ಜನರು ಕಂಗಾಲಾಗಿ ಹೋಗಿದ್ದಾರೆ. ಇನ್ನೂ ಬಿಸಿಲಿನ ತಾಪದಿಂದ ಜನರಿಗೆ ರಕ್ಷಣೆ ಕೊಡಲೆಂದು ಜಿಲ್ಲಾಡಳಿತ ಸಂಪೂರ್ಣ ವಾಗಿ ಸಿದ್ದತೆ ಮಾಡಿಕೊಂಡಿದೆ. ಈ ಕುರಿತಾದ ಒಂದು ವರದಿ ಇಲ್ಲಿದೆ ನೋಡಿ…
ಹೌದು, ಪ್ರತಿ ವರ್ಷ ಬೇಸಿಗೆಯಲ್ಲಿ ವಿಜಯಪುರ ಜಿಲ್ಲೆಯಲ್ಲಿ ಅತ್ಯಧಿಕ ಬಿಸಿಲಿನ ತಾಪಮಾನ ಇರುತ್ತೆ. ಬೆಳಿಗ್ಗೆ 10 ಗಂಟೆಯಿಂದ ಸಾಯಂಕಾಲ 4 ಗಂಟೆಯವರೆಗೆ ಬಿಸಿಲಿನ ಪ್ರಖರತೆಗೆ ಮನೆಯಿಂದ ಕಾಲು ಹೊರಗಡೆ ಹೋಗದಂತಹ ಪರಿಸ್ಥಿತಿ ಇರುತ್ತೆ. ಈ ವರ್ಷವೂ ಅತ್ಯಧಿಕ ಅಂದರೆ 42 ಡಿಗ್ರಿ ಸೆಲ್ಸಿಯಸ್ ತಾಪಮಾನದತ್ತ ಬಿಸಿಲು ಏರಿಕೆ ಆಗುತ್ತಿರುವದರಿಂದ ಜಿಲ್ಲಾಡಳಿತ ಹೈ ಅಲರ್ಟ್ ಘೋಷಿಸಿದೆ. ಜೊತೆಗೆ ಜಿಲ್ಲಾಸ್ಪತ್ರೆಯಲ್ಲಿ 10 ಬೆಡ್ ಗಳುಳ್ಳ ಹವಾನಿಯಂತ್ರಿತ ಹೀಟ್ ಸ್ಟ್ರೋಕ್ ವಾರ್ಡ್ ತೆರೆಯಲಾಗಿದೆ…
ವಿಜಯಪುರ ಜಿಲ್ಲೆಯಲ್ಲಿ ಈ ಬಿಸಿಲಿನ ತಾಪ ದಿನೇ ದಿನ ಬಾರಿ ಏರಿಕೆಯಾಗುತ್ತಿರುವ ಪರಿಣಾಮ ಸಂಭಾವ್ಯ ‘ಹೀಟ್ ವೇವ್’ (ಶಾಖದ ಅಲೆ) ಎದುರಿಸಲು ವಿಜಯಪುರ ಜಿಲ್ಲಾಸ್ಪತ್ರೆ ಸಂಪೂರ್ಣ ಸಜ್ಜಾಗಿದೆ. ವಿಜಯಪುರ ಜಿಲ್ಲಾಸ್ಪತ್ರೆ ಸಾರ್ವಜನಿಕರ ಆರೋಗ್ಯ ರಕ್ಷಣೆಗೆ ಸಕಲ ಸಿದ್ಧತೆ ಮಾಡಿಕೊಂಡಿದೆ. ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಪ್ರತ್ಯೇಕ ಹೀಟ್ ಸ್ಟ್ರೋಕ್ ವಾರ್ಡ್ ಸ್ಥಾಪನೆ ಮಾಡಲಾಗಿದ್ದು, ಈ ವಾರ್ಡ್‌ನಲ್ಲಿ ತಂಪು ವಾತಾವರಣವಿರಲು ಎಸಿ ವ್ಯವಸ್ಥೆ ಮಾಡಲಾಗಿದೆ. ಅಸ್ವಸ್ಥರಾದವರಿಗೆ ತಕ್ಷಣ ಚಿಕಿತ್ಸೆ ನೀಡಲು ಪ್ರತ್ಯೇಕ ಹತ್ತು ಹಾಸಿಗೆಗಳನ್ನು ಒಳಗೊಂಡ ವಿಶೇಷ ಕೊಠಡಿಯನ್ನು ಕಾಯ್ದಿರಿಸಲಾಗಿದೆ. ನುರಿತ ತಜ್ಞ ವೈದ್ಯರನ್ನು ನಿಯೋಜಿಸಲಾಗಿದೆ. ಅಗತ್ಯ ಔಷಧಿಗಳನ್ನು ಸಂಗ್ರಹಿಸಲಾಗಿದೆ. ದ್ರವ ರೂಪದ ಆಹಾರ, ತಂಪು ಪಾನೀಯ, ಸೇವಿಸಬೇಕು ಜೊತೆಗೆ ವೃದ್ಧರು, ಚಿಕ್ಕ ಮಕ್ಕಳನ್ನು ಹೊರಗಡೆ ಬಿಡಬೇಡಿ, ಅಗತ್ಯವಿದ್ದರೆ ಮಾತ್ರ ಬೆಳಿಗ್ಗೆ 10ಗಂಟೆಗೆ ಮನೆಯಿಂದ ಹೊರೆಗೆ ಬನ್ನಿ ಇಲ್ಲವಾದರೆ ನೆರಳಿನಲ್ಲಿ ಕೆಲ್ಸ ಮಾಡಿ ಇಲ್ಲವಾದರೆ ಹೀಟ್ ಸ್ಟ್ರೋಕ್ ಗೊಳಗಾಬಹುದು ಎಂದು ಎಚ್ಚರಿಕೆ ನೀಡಲಾಗಿದೆ…
ಜಿಲ್ಲಾಸ್ಪತ್ರೆಯಲ್ಲಿ ಹೀಟ್ ಸ್ಟ್ರೋಕ್ ವಾರ್ಡ್ ತೆರೆದಿರೋದಕ್ಕೆ ಜನರು ಜಿಲ್ಲಾಸ್ಪತ್ರೆ ಹಾಗೂ ಜಿಲ್ಲಾಡಳಿತಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜನರು ಬೇಸಿಗೆಯಲ್ಲಿ ಅನುಸರಿಸಬೇಕಾದ ಕ್ರಮಗಳನ್ನು ಪಾಲಿಸಿ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾಗಿದೆ.
