Belagavi

ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಜಮಖಂಡಿ ಮೂಲದ ವಿವಾಹಿತೆ ಬೆಳಗಾವಿಯಲ್ಲಿ ಆತ್ಮಹತ್ಯೆ!!!

Share

• ಬೆಳಗಾವಿಯಲ್ಲಿ ವರದಕ್ಷಿಣೆ ಕಿರುಕುಳಕ್ಕೆ ವಿವಾಹಿತೆ ಬಲಿ
• ಜಮಖಂಡಿ ಮೂಲದ ಶ್ರೀನಿಧಿ ಆತ್ಮಹತ್ಯೆಗೆ ಶರಣು
• ಪತಿ, ಅತ್ತೆ ಸೇರಿದಂತೆ ಐವರ ವಿರುದ್ಧ ಗಂಭೀರ ಆರೋಪ
• ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ವರದಕ್ಷಣೆ ಕಿರುಕುಳಕ್ಕೆ ಬೇಸತ್ತು ಜಮಖಂಡಿ ಮೂಲದ ವಿವಾಹಿತೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿಯ ಕಂಗ್ರಾಳಿ ಜ್ಯೋತಿ ನಗರದದಲ್ಲಿ ನಡೆದಿದೆ.
ಶ್ರೀನಿಧಿ (28) ಆತ್ಮಹತ್ಯೆ ಮಾಡಿಕೊಂಡವರು. ಕಳೆದ ನಾಲ್ಕು ವರ್ಷದ ಹಿಂದೆ ಬಿ.ಕೆ.ಕಂಗ್ರಾಳಿಯ ಜ್ಯೋತಿ ನಗರ ನಿವಾಸಿ ಸಂತೋಷ ಜೊತೆ ವಿವಾಹ ಮಾಡಿಕೊಡಲಾಗಿತ್ತು. ದಂಪತಿಗೆ ಇಬ್ಬರು ಮಕ್ಕಳು ಇದ್ದಾರೆ. ಮದುವೆಯಾದ ದಿನದಿಂದ ಸಂತೋಷ ವರದಕ್ಷಿಣೆ ಕುರಿಕುಳ ನೀಡುತ್ತಿದ್ದಕ್ಕೆ ಬೇಸತ್ತು ಶ್ರೀನಿಧಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಮದುವೆಯಾದ ದಿನದಿಂದ ಪತಿ ಸಂತೋಷ, ಅತ್ತೆ ಸುಧಾ ಹಾಗೂ ಸಂಬಂಧಿಕರಾದ ಸಂಜನಾ, ಪ್ರವೀಣ ಸೂರ್ಯವಂಶ ಮತ್ತು ಶ್ರದ್ಧಾ ಮಹೇಶ ವರದಕ್ಷಣೆಗಾಗಿ ಒತ್ತಡ ಹಾಕಿ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ.
ಅಲ್ಲದೆ, ಯುವತಿಯನ್ನು ತವರಿನವರೊಂದಿಗೆ ಸಂಪರ್ಕದಲ್ಲಿರದಂತೆ ತಡೆದು, ಮೊಬೈಲ್‌ ಫೋನ್‌ ಕಸಿದುಕೊಂಡಿದ್ದಾರೆ. ಕಳೆದ ಏ. 9ರಂದು ಶ್ರೀನಿಧಿ ಗಂಭೀರ ಸ್ಥಿತಿಯಲ್ಲಿದ್ದಾಳೆ” ಎಂದು ಕುಟುಂಬದವರಿಗೆ ಮಾಹಿತಿ ನೀಡಲಾಗಿತ್ತು. ತಕ್ಷಣ ಕುಟುಂಬದವರು ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ಧಾವಿಸಿದಾಗ, ಶ್ರೀನಿಧಿ ಶವವಾಗಾರದಲ್ಲಿ ಪತ್ತೆಯಾಗಿದೆ. ಬೈಟ್
ಈ ಕುರಿತು ಪತಿ ಸಂತೋಷ “ಮನೆಯ ಮೊದಲ ಮಹಡಿಯ ಕೋಣೆಯ ಕಿಟಕಿಯ ಗ್ರೀಲ್‌ಗೆ ಕಟ್ಟಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ” ಎಂದು ಹೇಳಿದ್ದಾನೆ. ಆದರೆ, ವರದಕ್ಷಣೆ ಕಿರುಕುಳದಿಂದಲೇ ಆತ್ಮಹತ್ಯೆಗೆ ಮಾಡಲಾಗಿದೆ ಎಂದು ಮೃತಳ ತಾಯಿ ಮಂಗಲ ಯಾದವ ಆರೋಪಿಸಿದ್ದಾರೆ. ಬೈಟ್
ಈ ಸಂಬಂಧ ಪತಿ ಸಂತೋಷ, ಅತ್ತೆ ಸುಧಾ ಹಾಗೂ ಸಂಬಂಧಿಕರಾದ ಸಂಜನಾ ಮತ್ತು ಶ್ರದ್ಧಾ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕುಟುಂಬದವರು ಪೊಲೀಸ್ ಇಲಾಖೆಗೆ ದೂರು ನೀಡಿದ್ದಾರೆ. ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:

error: Content is protected !!