Belagavi

ವಿಶ್ವ ಯಕೃತ್ ದಿನ: ನಿಮ್ಮ ಆರೋಗ್ಯದ ‘ಪವರ್‌ ಹೌಸ್’ ಲಿವರ್ ಬಗ್ಗೆ ನಿರ್ಲಕ್ಷ್ಯ ಬೇಡ; ತಜ್ಞ ವೈದ್ಯರಿಂದ ಮಹತ್ವದ ಸಲಹೆ

Share

ಯಕೃತ್ತು ಮಾನವ ದೇಹದ ಪ್ರಮುಖ ಅಂಗಗಳಲ್ಲಿ ಒಂದಾಗಿದ್ದು, ನಮ್ಮ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಪಿತ್ತರಸ ಉತ್ಪಾದನೆಯ ಮೂಲಕ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ರಕ್ತದಲ್ಲಿನ ಸಕ್ಕರೆ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಿ, ಅಗತ್ಯ ಪೋಷಕಾಂಶಗಳನ್ನು ಸಂಗ್ರಹಿಸುತ್ತದೆ. ಅಲ್ಲದೇ ದೇಹವು ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುವುದು ಸೇರಿದಂತೆ 500ಕ್ಕೂ ಹೆಚ್ಚು ಪ್ರಮುಖ ಕಾರ್ಯಗಳನ್ನು ಯಕೃತ್ತು ನಿರ್ವಹಿಸುತ್ತದೆ. ಆದ್ದರಿಂದ ಸಮತೋಲಿತ ಆರೋಗ್ಯಕರ ಆಹಾರ ಸೇವನೆಯ ಮೂಲಕ ಯಕೃತ್ತಿನ ಆರೋಗ್ಯವನ್ನು ಸರಿಯಾಗಿ ಕಾಪಾಡಿಕೊಳ್ಳಬಹುದು ಎಂದು ಅರಿಹಂತ ಆಸ್ಪತ್ರೆಯ ಹಿರಿಯ ಗ್ಯಾಸ್ಟ್ರೊಎಂಟ್ರಾಲಾಜಿಸ್ಟಗಳಾದ ಡಾ. ವರದರಾಜ ಗೋಕಾಕ ಹಾಗೂ ಡಾ. ಗಣೇಶ ಕೊಪ್ಪದ ಅವರು ಹೇಳುತ್ತಾರೆ.
ಆರೋಗ್ಯಕರ ಮತ್ತು ಸಕ್ರಿಯ ಜೀವನ ನಡೆಸಲು ಯಕೃತ್ತಿನ ಆರೋಗ್ಯ ಅತೀ ಮುಖ್ಯ. ಅತಿಯಾದ ಮದ್ಯಪಾನ, ಜಡ ಜೀವನಶೈಲಿ, ಬೊಜ್ಜು, ಆಹಾರ ಪದ್ದತಿ, ಹಾಗೂ ಕೆಲ ವೈರಲ್ ಸೋಂಕುಗಳಿಂದ ಯಕೃತ್ತು ಹಾನಿಗೊಳಗಾಗುತ್ತದೆ. ಅಲ್ಲದೇ ಫ್ಯಾಟಿ ಲಿವರ್, ಹೆಪಟೈಟಿಸ್, ಸಿರೋಸಿಸ್ ಅಥವಾ ಯಕೃತ್ತಿನ ಕ್ಯಾನ್ಸರಿನಂತಹ ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಹುದು.
ಲೀವರನ ಸಾಮಾನ್ಯ ಕಾಯಿಲೆಗಳು :
ಹೆಪಟೈಟಿಸ್ ಬಿ ಮತ್ತು ಸಿ: ಯಕೃತ್ತಿನ ಮೇಲೆ ಪರಿಣಾಮ ಬೀರುವ ಹೆಪಾಟೈಟಿಸ್‌ ಬಿ ಮತ್ತು ಸಿ ವೈರಲ್ ಸೋಂಕುಗಳಿಗೆ ಸರಿಯಾಗಿ ಚಿಕಿತ್ಸೆ ನೀಡದಿದ್ದರೆ ದೀರ್ಘಕಾಲದ ಕಾಯಿಲೆ, ಸಿರೋಸಿಸ್ ಮತ್ತು ಲೀವರ ಕ್ಯಾನ್ಸರ್ಗೆ ಕಾರಣವಾಗಬಹುದು. ಹೆಪಟೈಟಿಸ್ ಬಿ ಲಸಿಕೆ ಪಡೆಯುವದರ ಮೂಲಕ ಇದನ್ನು ತಡೆಗಟ್ಟಬಹುದು. ಹೆಪಟೈಟಿಸ್ ಸಿ ರೋಗಕ್ಕೆ ಆಂಟಿವೈರಲ್ ಚಿಕಿತ್ಸೆ ನೀಡಬಹುದು.
ಫ್ಯಾಟಿ ಲಿವರ್: ಆಲ್ಕೊಹಾಲ್ ಇಲ್ಲದ ಕೊಬ್ಬಿನ ಯಕೃತ್ತಿನ ಕಾಯಿಲೆ. ಇದು ಬೊಜ್ಜು, ಮಧುಮೇಹ ಮತ್ತು ಜಡ ಜೀವನಶೈಲಿ ಹೊಂದಿರುವ ಜನರಲ್ಲಿ ಸಾಮಾನ್ಯವಾಗಿದ್ದು, ಭಾರತದ ನಗರಗಳಲ್ಲಿ ಬೆಳೆಯುತ್ತಿರುವ ಸಾಂಕ್ರಾಮಿಕ ರೋಗವೆಂದು ಪರಿಗಣಿಸಲಾಗಿದೆ. ಆಲ್ಕೊಹಾಲುಯುಕ್ತ ಕೊಬ್ಬಿನ ಯಕೃತ್ತಿನ ಕಾಯಿಲೆ. ಇದು ಅತಿಯಾದ ಮದ್ಯ ಸೇವನೆಯಿಂದ ಬಂದೆರಗುತ್ತದೆ. ನಿಧಾನವಾಗಿ ಇದು ಆಲ್ಕೊಹಾಲಯುಕ್ತ ಹೆಪಟೈಟಿಸ್ ಮತ್ತು ಸಿರೋಸಿಸ್ ಆಗಿ ಬದಲಾಗುವ ಸಂಭವ ಅಧಿಕವಾಗಿರುತ್ತದೆ.
ಲಿವರ್ ಸಿರೋಸಿಸ್: ದೀರ್ಘಕಾಲ ಮದ್ಯಸೇವನೆ, ಹೆಪಟೈಟಿಸ್ ಅಥವಾ ಕೊಬ್ಬಿನ ಲಿವರ್ ಕಾಯಿಲೆಯ ಪರಿಣಾಮದಿಂದ ಕಂಡುಬರುತ್ತದೆ. ಗಂಭೀರ ಪರಿಸ್ಥಿತಿಗಳಲ್ಲಿ ಇದು ಯಕೃತ್ತಿನ ವೈಫಲ್ಯಕ್ಕೆ ಕಾರಣವಾಗಬಹುದು.
ಲಿವರ್ ಕ್ಯಾನ್ಸರ್: ಸಾಮಾನ್ಯವಾಗಿ ಸಿರೋಸಿಸ್ ಅಥವಾ ದೀರ್ಘಕಾಲದ ಹೆಪಟೈಟಿಸ್ ಬಿ/ಸಿ ಸೋಂಕಿನಿಂದಾಗಿ ಲಿವರ್ ಕ್ಯಾನ್ಸರ್ ಕಾಣಿಸಿಕೊಳ್ಳಬಹುದು.
ವಿಲ್ಸನ್ ಕಾಯಿಲೆ ಮತ್ತು ಹಿಮೋಕ್ರೊಮಾಟೋಸಿಸ್: ಇವು ಅಪರೂಪದ ಆನುವಂಶಿಕ ಕಾಯಿಲೆಗಳಾಗಿದ್ದು, ದೇಹದಲ್ಲಿ ತಾಮ್ರ ಅಥವಾ ಕಬ್ಬಿಣದ ಅಸಹಜ ಶೇಖರಣೆಯಿಂದಾಗಿ ಯಕೃತ್ತಿನ ಕಾರ್ಯದ ಮೇಲೆ ಪರಿಣಾಮ ಬೀರುತ್ತವೆ.
ರೋಗ ಕಂಡುಹಿಡಿಯುವಿಕೆ :
ಮಧುಮೇಹ, ಬೊಜ್ಜು ಅಥವಾ ಯಕೃತ್ತಿನ ಸಮಸ್ಯೆಗಳ ಇತಿಹಾಸದಂತಹ ಅಪಾಯಕಾರಿ ಅಂಶಗಳನ್ನು ಹೊಂದಿರುವ ಜನರು ನಿಯಮಿತವಾಗಿ ಯಕೃತ್ತಿನ ಪರೀಕ್ಷೆಗಳಿಗೆ ಒಳಗಾಗಬೇಕು. ಹೆಪಟೈಟಿಸ್ ಬಿ ಅಥವಾ ಸಿ ಯ ಆರಂಭಿಕ ರೋಗನಿರ್ಣಯವು ಬಹಳ ಮುಖ್ಯ. ಶೀಘ್ರವೇ ರೋಗಕಂಡುಹಿಡಿದರೆ ಚಿಕಿತ್ಸೆ ಸುಲಭ.
ತಡೆಗಟ್ಟುವುದು ಹೇಗೆ?
ಯಕೃತ್ತಿನ ಕಾಯಿಲೆಗಳನ್ನು ತಡೆಗಟ್ಟಲು ಜೀವನಶೈಲಿಯ ಬದಲಾವಣೆಗಳನ್ನು ಮಾಡಿಕೊಳ್ಳುವುದು ಬಹಳ ಮುಖ್ಯ. ಕೊಬ್ಬಿನಂಶ ಕಡಿಮೆ ಇರುವ ಆರೋಗ್ಯಕರ ಆಹಾರ, ಹಣ್ಣುಗಳು, ತರಕಾರಿಗಳು, ಧಾನ್ಯಗಳು ಮತ್ತು ಪ್ರೋಟೀನ್ಗಳಲ್ಲಿ ಸಮೃದ್ಧವಾಗಿರುವ ಆಹಾರವು ಯಕೃತ್ತಿನ ಆರೋಗ್ಯಕ್ಕೆ ಸಹಾಯಕಾರಿಯಾಗಿವೆ.
ಬೊಜ್ಜು ನಮ್ಮ ಆರೋಗ್ಯಕ್ಕೆ ಪ್ರಮುಖ ಅಪಾಯಕಾರಿ ಅಂಶವಾಗಿದೆ. ನಿಯಮಿತ ವ್ಯಾಯಾಮ ಮತ್ತು ಸಮತೋಲಿತ ಆಹಾರವು ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಮದ್ಯ ಪಾನ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ.ಅದನ್ನು ಬಿಡುವುದೇ ಒಳಿತು. ಇದರಿಂದ ಯಕೃತ್ತಿನ ಆರೋಗ್ಯ ಚೆನ್ನಾಗಿರುತ್ತದೆ.
ವಿಶ್ವ ಯಕೃತ್ ದಿನಾಚರಣೆಯು ಯಕೃತ್ತಿನ ಆರೋಗ್ಯವನ್ನು ಹಗುರವಾಗಿ ಪರಿಗಣಿಸಬಾರದು ಎಂಬುದನ್ನು ಪ್ರತಿ ವರ್ಷ ನೆನಪಿಸುತ್ತದೆ. ಭಾರತದಲ್ಲಿ ಜೀವನಶೈಲಿ ಕಾಯಿಲೆಗಳು ಹೆಚ್ಚುತ್ತಿರುವ ಕಾರಣ, ನಿಯಮಿತ ತಪಾಸಣೆ, ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳುವುದು, ಮಧುಮೇಹವನ್ನು ನಿಯಂತ್ರಿಸುವುದು ಮತ್ತು ಮದ್ಯಪಾನವನ್ನು ತ್ಯಜಿಸುವದು ಸೇರಿದಂತೆ ಮುಂತಾದ ಕ್ರಮಗಳು ಯಕೃತ್ತಿನ ಕಾರ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ

Tags:

error: Content is protected !!