• ಏಪ್ರಿಲ್ 19ಕ್ಕೆ ಬೃಹತ್ ಬೈಕ್ ರ್ಯಾಲಿ
• ಏಪ್ರಿಲ್ 26ಕ್ಕೆ ಬಸವಣ್ಣನ ಭವ್ಯ ಮೆರವಣಿಗೆ
• ಕುಂದಾನಗರಿಯಲ್ಲಿ ಬಸವ ಜಯಂತಿ ಸಂಭ್ರಮ
• ಒಗ್ಗಟ್ಟಿನಿಂದ ಆಚರಿಸಲು ಸಮಿತಿ ಕರೆ

ಏಪ್ರೀಲ್ 19 ರಂದು ಬೆಳಗಾವಿಯಲ್ಲಿ ಜಗಜ್ಯೋತಿ ಬಸವೇಶ್ವರ ಜಯಂತಿಯ ಹಿನ್ನೆಲೆ ಬೈಕ್ ರ್ಯಾಲಿ ಮತ್ತು ಏಪ್ರಿಲ್ 26 ರಂದು ಭವ್ಯ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ. ಎಲ್ಲ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿ ಯಶಸ್ವಿಗೊಳಿಸಬೇಕೆಂದು ಬಸವೇಶ್ವರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ರಮೇಶ್ ಕಳಸಣ್ಣವರ ಮನವಿ ಮಾಡಿದ್ದಾರೆ.
ಇಂದು ಬೆಳಗಾವಿಯ ಬಸವೇಶ್ವರ ಬ್ಯಾಂಕಿನ ಸಭಾಗೃಹದಲ್ಲಿ ಬಸವ ಜಯಂತಿಯ ಹಿನ್ನೆಲೆ ಶ್ರೀ ಬಸವೇಶ್ವರ ಉತ್ಸವ ಕೇಂದ್ರ ಸಮಿತಿಯ ಪೂರ್ವಭಾವಿ ಸಭೆಯನ್ನು ಕರೆಯಲಾಗಿತ್ತು. ಸಭೆಯಲ್ಲಿ ಬಸವ ಜಯಂತಿ ಆಚರಣೆಯ ಕುರಿತು ಮಹತ್ವದ ಚರ್ಚೆ ನಡೆಯಿತು.
ವಿಶ್ವಗುರು ಬಸವೇಶ್ವರರ ಜಯಂತಿಯನ್ನು ಈ ಬಾರಿಯೂ ಅತ್ಯಂತ ಹರ್ಷೋದ್ಘಾರದಿಂದ ಆಚರಿಸುವ ನಿರ್ಣಯವನ್ನು ಕೈಗೊಳ್ಳಲಾಯಿತು. ಏಪ್ರೀಲ್ 19 ರಂದು ಬೆಳಿಗ್ಗೆ 8 ಜಗಜ್ಯೋತಿ ಬಸವೇಶ್ವರ ವೃತ್ತದ ಉದ್ಯಾನವನದಿಂದ ರಾಮತೀರ್ಥ ನಗರದ ವರೆಗೆ ಬೈಕ್ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ. ಏಪ್ರೀಲ್ 26 ರಂದು ಸಂಜೆ 4.30ಕ್ಕೆ ನಗರದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಿಂದ ಭವ್ಯ ಮೆರವಣಿಗೆಯನ್ನು ನಡೆಸಲಾಗುವುದು ಎಂದು ಸಭೆಯ ಬಳಿಕ ಮಾಧ್ಯಮಗೋಷ್ಟಿ ನಡೆಸಿ ಬಸವೇಶ್ವರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ರಮೇಶ್ ಕಳಸಣ್ಣವರ ಹೇಳಿದರು.
ಈ ಸಂದರ್ಭದಲ್ಲಿ ಬಸವರಾಜ್ ರೊಟ್ಟಿ, ಸರಳಾ ಹೇರೆಕರ, ಲಿಂಗರಾಜ್ ಜಗಜಂಪಿ, ಸತೀಶ್ ಪಾಟೀಲ್, ಪ್ರಕಾಶ ಬಾಳೆಕುಂದ್ರಿ, ರಾಜು ಕಾಳೆನಟ್ಟಿ, ಗುರು ಇಂಗಳೇಶ್ವರ್, ಸಚಿನ್ ಬೈಲವಾಡ, ಅಣ್ಣಾಸಾಹೇಬ್ ಗಾಡವಿ, ಆನಂದ ಗುಡಸ್, ರಮೇಶ್ ತುಬಚಿ, ಸೂರ್ಯಕಾಂತ್ ಭಾವಿ, ಬಸವರಾಜ್ ಉಪ್ಪಿನ್, ಜಗದೀಶ್ ಖಡಬಡಿ, ಗಿರೀಶ್ ಬಾಗಿ, ಅನೀಲ್ ಹುಕ್ಕೇರಿ ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ಧರು.
