• ಮೊದೆಕೊಪ್ಪ ಗ್ರಾಮದಲ್ಲಿ ಗಜರಾಜನ ಪ್ರತ್ಯಕ್ಷ
• ಮಲಪ್ರಭಾ ನದಿ ತೀರದಲ್ಲಿ ಆನೆ ಸಂಚಾರ
• ತೋಟಗಳ ಮಧ್ಯೆ ನುಗ್ಗಿದ ಕಾಡಾನೆ
• ಆತಂಕದಲ್ಲಿ ಖಾನಾಪುರ ತಾಲೂಕಿನ ಜನತೆ

ಖಾನಾಪೂರ ತಾಲೂಕಿನ ಮೊದೆಕೊಪ್ಪ ಗ್ರಾಮದ ಮಲಪ್ರಭಾ ನದಿ ತೀರದಲ್ಲಿ ಆನೆಯೊಂದು ಪ್ರತ್ಯಕ್ಷವಾಗಿದ್ದು, ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
ಗ್ರಾಮದ ಬಾಲೀರಾಮ ಗೌಡ ಎಂಬುವವರ ಹೊಲದ ಬಳಿ ಕಾಣಿಸಿಕೊಂಡ ಈ ಆನೆಯು, ನದಿಯ ಅಕ್ಕಪಕ್ಕದ ಪ್ರದೇಶಗಳಲ್ಲಿ ಸಂಚರಿಸಿದೆ. ಈ ಭಾಗದಲ್ಲಿ ಬಾಳೆ, ಗೋಡಂಬಿ (ಕಾಜು), ಅಡಿಕೆ ಹಾಗೂ ಮಾವಿನ ತೋಟಗಳು ಸಮೃದ್ಧವಾಗಿದ್ದರೂ, ಅದೃಷ್ಟವಶಾತ್ ಆನೆಯು ಯಾವುದೇ ಬೆಳೆ ಹಾನಿ ಮಾಡಿಲ್ಲ. ಸದ್ಯದ ಮಾಹಿತಿ ಪ್ರಕಾರ, ಮೊದೆಕೊಪ್ಪ ಗ್ರಾಮದ ಪರಿಸರದಲ್ಲಿ ಸಂಚರಿಸಿದ ಆನೆಯು ಬಳಿಕ ಮಲಪ್ರಭಾ ನದಿಯನ್ನು ದಾಟಿ ಮುಂದಕ್ಕೆ ಹೋಗಿದೆ ಎಂದು ತಿಳಿದುಬಂದಿದೆ.
