• ಕೃಷ್ಣಾ ಮೇಲ್ದಂಡೆ ಸಂತ್ರಸ್ತರಿಗೆ ಲೋಕ ಅದಾಲತ್
• ಜೂನ್ ಅಂತ್ಯದವರೆಗೆ ವಿಶೇಷ ನ್ಯಾಯಾಂಗ ಸಭೆ
• ಭೂ ಪರಿಹಾರ ವಿವಾದಗಳಿಗೆ ಶೀಘ್ರ ಮುಕ್ತಿ
• ವಿಜಯಪುರ ಜಿಲ್ಲಾ ನ್ಯಾಯಾಧೀಶರಿಂದ ಮಹತ್ವದ ಮಾಹಿತಿ

ಕೃಷ್ಣಾ ಮೇಲ್ದಂಡೆ ಯೋಜನೆಗಾಗಿ ಸರ್ಕಾರ ಸ್ವತಃ ಸ್ವಾಧೀನಪಡಿಸಿಕೊಂಡ ಭೂಸಂತರಿಗಾಗಿ ವಿಶೇಷ ಲೋಕ ಅದಾಲತ್ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಸತ್ರ ನ್ಯಾಯಾಧೀಶರಾದ ಹರೀಶ್ ಎ ಅವರು ಮಾಹಿತಿ ನೀಡಿದರು.
ವಿಜಯಪುರದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಸತ್ರ ನ್ಯಾಯಾಧೀಶರಾದ ಹರೀಶ್ ಎ ಅವರು ಎಪ್ರಿಲ್‌ನಿಂದ ಜೂನ್ ಅಂತ್ಯದವರೆಗೆ ಎರಡು ತಿಂಗಳ ಕಾಲ ಈ ಅದಾಲತ್ ನಡೆಯಲಿದ್ದು, ಸಂತ್ರಸ್ತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ತಿಳಿಸಿದರು.
