hubbali

ರಾತ್ರಿ ವೇಳೆ ಕಿಮ್ಸ್‌ ಗೆ ಬಂದರೇ ಹುಷಾರ: ಸಿಬ್ಬಂದಿಗಳ ಬೇಜವಾಬ್ದಾರಿ ವಿಡಿಯೋ ವೈರಲ್ ಮಾಡಿದ ಚಾಲಕ..!

Share

ಬಡವರ ಸಂಜೀವಿನಿ ಎಂದೇ ಕರೆಸಿಕೊಳ್ಳುವ ಕಿಮ್ಸ್‌ಗೆ ರಾತ್ರಿ ವೇಳೆ ಬಂದ್ರೆ ಹುಷಾರ..! ಇಲ್ಲಿನ ಸಿಬ್ಬಂದಿಗಳ ಬೇಜವಾಬ್ದಾರಿಯಿಂದ ನರಕಯಾತನೆ ಅನುಭವಿಸಬೇಕಾಗುತ್ತದೆ ಎಚ್ಚರ. ರೋಗಿಗಳಿಗೆ ಚಿಕಿತ್ಸೆ ನೀಡುವವರು ಯಾರು ಇಲ್ಲ ಎಂಬುವಂತಾಗಿದ್ದು, ರೋಗಿಗಳನ್ನು ಬೆಡ್ ಖಾಲಿ ಇಲ್ಲ ಎಂದು ಆಂಬ್ಯುಲೆನ್ಸ್‌ ನಲ್ಲಿಯೇ ಸುಮಾರು ಹೊತ್ತು ಕಾಯುವಂತೆ ಮಾಡಿರುವ ವಿಡಿಯೋ ಈಗ ವೈರಲ್ ಆಗಿದೆ.

ಬಡವರ ಸಂಜೀವಿನಿಯಲ್ಲಿ ರಾತ್ರಿ ಸಮಯದಲ್ಲಿ ಬಂದ್ರೆ ಸಿಗಲ್ಲ ಚಿಕಿತ್ಸೆ. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಬೆಡ್ ಖಾಲಿ ಇಲ್ಲವಂತೆ. ಹೌದು..ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ವ್ಯಕ್ತಿಯನ್ನು ಕಿಮ್ಸ್‌ಗೆ ಕರೆತರಲಾಗಿತ್ತು.
ಕಿಮ್ಸ್ ಆಸ್ಪತ್ರೆಗೆ ಕರೆತಂದರೆ ಬೆಡ್‌ಗಳು ಖಾಲಿ ಇಲ್ಲ ಎಂದು ಹೇಳಿದ ಕಿಮ್ಸ್ ಸಿಬ್ಬಂದಿಯ ವರ್ತನೆ ನಿಜಕ್ಕೂ ಸಾರ್ವಜನಿಕ ವಲಯದಲ್ಲಿ ಆಕ್ರೋಶ ಹುಟ್ಟು ಹಾಕಿದೆ. ಬೆಡ್‌ಗಳು ಖಾಲಿ ಇಲ್ಲ ಎಂಬುವಂತ ನೆಪಹೇಳಿ, ಅರ್ಧ ಗಂಟೆಗಳ ಕಾಲ ಕುಳಿತರೂ ಆಂಬ್ಯುಲೆನ್ಸ್‌ನಿಂದ ಕೆಳಗೆ ಇಳಿಸಿಕೊಳ್ಳದ ಕಿಮ್ಸ್ ಸಿಬ್ಬಂದಿಯ ವರ್ತನೆಯಿಂದ ಬೇಸತ್ತು ಆಂಬ್ಯುಲೆನ್ಸ್ ಡ್ರೈವ‌ರ್ ಇಲ್ಲಿನ ಅವ್ಯವಸ್ಥೆ ವಿಡಿಯೋ ಮಾಡಿ ವೈರಲ್ ಮಾಡಿದ್ದಾರೆ. ಅಲ್ಲದೆ ಇದರಿಂದಾಗಿ ಗಾಯಗೊಂಡ ವ್ಯಕ್ತಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ ಆಂಬ್ಯುಲೆನ್ಸ್‌ ಚಾಲಕ, ಬೆಡ್‌ಗಳು ಖಾಲಿ ಇಲ್ಲ ಎನ್ನುವ ಸಿಬ್ಬಂದಿ ವಿಡಿಯೋ ವೈರಲ್ ಮಾಡಿದ್ದಾರೆ.

Tags:

error: Content is protected !!