• ಗಾಂಧಿ ಗ್ರಾಮ ಪುರಸ್ಕಾರ ಪಡೆದ ಶಾಲೆಯಲ್ಲೇ ಕಿಡಿಗೇಡಿತನ
• ಶಾಲೆಯ ಕಿಟಕಿ ಮುರಿದು ಪುಸ್ತಕಗಳಿಗೆ ಬೆಂಕಿ
• ಸಿಸಿ ಕ್ಯಾಮರಾ ಅಳವಡಿಸದ ಪಿಡಿಒ ವಿರುದ್ಧ ಆಕ್ರೋಶ
• ಕೃತ್ಯ ಎಸಗಿದವರ ಬಂಧನಕ್ಕೆ ಗ್ರಾಮಸ್ಥರ ಆಗ್ರಹ

ಗಾಂಧಿ ಗ್ರಾಮ ಪುರಸ್ಕಾರ ಪಡೆದಿರುವ ಚಿಕ್ಕೋಡಿ ತಾಲೂಕಿನ ಕರೋಶಿ ಸರಕಾರಿ ಕನ್ನಡ ಪ್ರಾಥಮಿಕ ಶಾಲೆಯಲ್ಲಿನ ಕಿಟಕಿ ಮುರಿದು ಕಿಡಿಗೇಡಿಗಳು ಪುಸ್ತಕಕ್ಕೆ ಬೆಂಕಿ ಹಚ್ಚಿರುವ ಘಟನೆ ನಡೆದಿದೆ.

ಇಂತಹ ದುರ್ಘಟನೆ ನಡೆಯಬಾರದು ಎಂಬ ಉದ್ದೇಶದಿಂದ ಅಲ್ಲಿನ ಗ್ರಾಮಸ್ಥರೊಬ್ಬರು ಶಾಲೆಗೆ ಸಿಸಿ ಕ್ಯಾಮರಾ ಅಳವಡಿಸುವಂತೆ ಮನವಿ ಮಾಡಿದ್ದರು. ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಸಿಸಿ ಕ್ಯಾಮರಾ ಅಳವಡಿಸದೆ ನಿರ್ಲಕ್ಷ್ಯ ಮಾಡಿದ್ದಾರೆ. ಇದರಿಂದಾಗಿ ಸರಕಾರಿ ಶಾಲೆ ಕಿಟಕಿ ಮುರಿದು ಕೀಡಿಗೇಡಿಗಳು ಬೆಂಕಿ ಹಚ್ಚಿ ಮಕ್ಕಳ ಪುಸ್ತಕ ಸುಟ್ಟು ಹಾಕಿದ್ದಾರೆ. ಇಂತಹ ಕೃತ್ಯ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
