State

ರಾಜ್ಯ ರಾಜಕೀಯದಲ್ಲಿ ಮತ್ತೆ ‘ರೆಸಾರ್ಟ್’ ರಾಜಕೀಯದ ಸದ್ದು:

Share

ರಾಜ್ಯ ರಾಜಕೀಯದಲ್ಲಿ ಮತ್ತೇ ‘ರೆಸಾರ್ಟ್ ರಾಜಕೀಯ’ದ ಸದ್ದು ಕೇಳಿಬರುತ್ತಿದ್ದು, ಕಾಂಗ್ರೆಸ್ ಶಾಸಕರಿಗಾಗಿ ಗೋವಾದಲ್ಲಿ 40 ಕೊಠಡಿಗಳನ್ನು ಕಾಯ್ದಿರಿಸಲಾಗಿದೆ ಎಂದು ಬಿಜೆಪಿ ಶಾಸಕ ಅಭಯ್ ಪಾಟೀಲ್ ಹೊಸ ಬಾಂಬ್ ಸಿಡಿಸಿದ್ದಾರೆ.

ಕಾಂಗ್ರೆಸ್ ಪಕ್ಷದೊಳಗಿನ ಆಂತರಿಕ ಭಿನ್ನಮತ ಸ್ಫೋಟಗೊಂಡಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ ಎಂದು ಆರೋಪಿಸಿರುವ ಅವರು, ಇನ್ನು ಮುಂದೆ ಸಿದ್ದರಾಮಯ್ಯ ಸರ್ಕಾರ ಗೋವಾದಿಂದ ಅಥವಾ ವಿದೇಶದಿಂದ ನಡೆಯಲಿದೆ ಎಂದು ವ್ಯಂಗ್ಯವಾಡಿದ್ದಾರೆ. ತಮಗೆ ಬಂದಿರುವ ಖಚಿತ ಮಾಹಿತಿಯ ಆಧಾರದ ಮೇಲೆ ಈ ಸ್ಫೋಟಕ ಹೇಳಿಕೆ ನೀಡುತ್ತಿರುವುದಾಗಿ ತಿಳಿಸಿರುವ ಅಭಯ್ ಪಾಟೀಲ್ ಅವರ ಮಾತುಗಳು ಈಗ ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಹಾಗೂ ಕುತೂಹಲ ಮೂಡಿಸಿವೆ.

ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದೆ. ರಸ್ತೆಗಳಲ್ಲಿ ಗುಂಡಿಗಳು ನಿರ್ಮಾಣಗೊಂಡಿವೆ. ಸರ್ಕಾರಿ ಅಧಿಕಾರಿಗಳ ವೇತನ ಪಾವತಿಯಾಗುತ್ತಿಲ್ಲ. ಉತ್ತರ ಕರ್ನಾಟಕದಲ್ಲಿ ಹಾಹಾಕಾರ ಉಂಟಾಗಿದೆ. ಕಾನೂನು ಸುವ್ಯವಸ್ಥೆ ಹಾಳಾಗಿದೆ. ಇವರು ತಮ್ಮ ಒಳಜಗಳವನ್ನು ಸ್ವತಃ ಬಗೆಹರಿಸಿಕೊಂಡು ರಾಜ್ಯದ ಸಮಸ್ಯೆಗಳನ್ನು ನೀಗಿಸುವ ಬದಲೂ ನಿರ್ಮಾಣ ಮಾಡುತ್ತಿದ್ದಾರೆ. ಇವರು ಮೌಜಿ ಮಸ್ತಿಗಾಗಿ ಅಧಿಕಾರಕ್ಕೆ ಬಂದವರು ಎಂದರು.

ಇನ್ನು ಆರೋಗ್ಯ ಇಲಾಖೆಯ ಅಧಿಕಾರಿ ಅಬಕಾರಿ ಇಲಾಖೆಗೆ ವರ್ಗಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರದ ಶಿಫಾರಸ್ಸಿನ ವಿರುದ್ದವು ಅವರು ಕೆಂಡಕಾರಿದ್ದಾರೆ. ಅಬಕಾರಿ ಇಲಾಖೆ ಅಧಿಕಾರಿಗಳ ತಲೆ ಕೆಟ್ಟಿದೆಯಾ? ಅದನ್ನು ಸರಿಪಡಿಸಲು ವೈದ್ಯಕೀಯ ಅಧಿಕಾರಿಗಳನ್ನು ಕಳುಹಿಸುತ್ತಿದ್ದಾರೆ. ಸಿಎಂ ಸಿದ್ಧರಾಮಯ್ಯ ತುಘಲಕ್ ದರ್ಬಾರ್ ನಡೆಸುತ್ತಿದ್ದಾರೆ. ಡಿ.ಎಚ್.ಓ ಅವರನ್ನು ಅಬಕಾರಿ ಇಲಾಖೆಗೆ ವರ್ಗಾವಣೆ ಮಾಡಿದರೇ, ಅಲ್ಲಿ ಹೋಗಿ ಅವರೇನು ಮಾಡಬೇಕು? ಎಲ್ಲ ಇಲಾಖೆಗಳಲ್ಲಿ ಬೇಕಾಬಿಟ್ಟು ವರ್ಗಾವಣೆ ನಡೆಯುತ್ತಿದೆ. ಇಷ್ಟೊಂದು ಆಡಳಿತ ಕೆಟ್ಟಿದ್ದು ರಾಜ್ಯದ ಇತಿಹಾಸದಲ್ಲೇ ಮೊದಲೂ ಬಾರಿ. ಭ್ರಷ್ಟಾಚಾರದಲ್ಲಿ ಕಾಂಗ್ರೆಸ್ ಗಿನ್ನಿಸ್ ದಾಖಲೆ ಮಾಡಬಹುದು ಎಂದರು.

Tags:

error: Content is protected !!