Chikkodi

ಚಿಕ್ಕೋಡಿ ಪಟ್ಟಣದ ತೇಕಡಿ ಟಕೀಯಾ,ಮಕಾಂದಾರ ಕಾಲೋನಿ,ಗೈಬನ ಪ್ಲಾಟ್ ನ ಜನರ ಸಮಸ್ಯೆ ಆಲಿಸಿದ ಎಂಎಲ್ಸಿ ಪ್ರಕಾಶ ಹುಕ್ಕೇರಿ

Share

ಶಾಸಕ ಗಣೇಶ ಹುಕ್ಕೇರಿ ಎಂಎಲ್ಸಿ ಪ್ರಕಾಶ ಹುಕ್ಕೇರಿಯವರ ಪ್ರಯತ್ನದಿಂದ ಚಿಕ್ಕೋಡಿ ಪಟ್ಟಣದ ತೇಕಡಿ ಟಕೀಯಾ,ಮಕಾಂದಾರ ಕಾಲೋನಿ,ಗೈಬನ ಪ್ಲಾಟ್ ಹಾಗೂ ಅರಕಾಟೆ ಕಾಲೋನಿಯ ರಸ್ತೆ ಅಭಿವೃದ್ಧಿಗಾಗಿ 56 ಲಕ್ಷ ರೂಪಾಯಿ ಮಂಜೂರಾಗಿದೆ ಎಂದು ಪುರಸಭೆ ಸದಸ್ಯ ಗುಲಾಬ ಹುಸೇನ ಬಾಗವಾನ ಹೇಳಿದರು.

ಚಿಕ್ಕೋಡಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿ ಅವರು ತೇಕಡಿ ಟಕೀಯಾ,ಮಕಾಂದಾರ ಕಾಲೋನಿ,ಗೈಬನ ಪ್ಲಾಟ್ ಹಾಗೂ ಅರಕಾಟೆ ಕಾಲೋನಿಗಳಲ್ಲಿ ಎಂಎಲ್ಸಿ ಪ್ರಕಾಶ ಹುಕ್ಕೇರಿ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಆಲಿಸಿ ಪರಿಹಾರವನ್ನು ಸೂಚಿಸಿದ್ದಾರೆ ಹಾಗೂ ರಸ್ತೆ ಅಭಿವೃದ್ಧಿಗೆ 56 ಲಕ್ಷ ರೂಪಾಯಿ ಅನುದಾನ ಮಂಜೂರು ಮಾಡಿದ್ದಾರೆ.ಶಾಹಿದ್ ಮಹಲ,ಬೋರವೇಲ್,ಅಂಡಗ್ರೌಂಡ ಕೇಬಲ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಮಾಡಿಕೊಡುವಂತೆ ಮನವಿಯನ್ನು ಮಾಡಿಕೊಂಡಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಶರಫೋದ್ಧಿನ ಮಕಾಂದಾರ, ಅಬ್ದುಲ ಮಕಾಂದಾರ, ಅಬ್ದುಲ ಮಸ್ಜಿದ ಇನಾಮದಾರ, ಅಬಾಸ ಮಕಾಂದಾರ, ಮಲಿಕಜಾನ ಮಕಾಂದಾರ, ಇಕ್ಬಾಲ ಪಟೇಲ, ಸರ್ದಾರ ಗಲಫೆ, ಅಬ್ಬು ಗೌಂಡಿ, ರೂಕಮೋದ್ದಿನ ಮಕಾಂದಾರ, ಜಾವೇದ ಮಕಾಂದಾರ, ಇಸ್ರಾರ ಮಕಾಂದಾರ, ನವಾಜ ಮಕಾಂದಾರ, ಆಸೀಫ್ ಶೇಕ್, ಮುದ್ದಸರ್ ಮಕಾಂದಾರ, ಝಿಯಾ ಇನಾಮದಾರ, ಡಾ” ಫಾರೂಕ್,ಜಕರಿಯಾ ಮಕಾಂದಾರ, ರಿಯಾಜ ಪಟಾನ, ಅಕಿಲ್ ಮಕಾಂದಾರ, ತೌಫಿಕ್ ಮಕಾಂದಾರ, ಯುನುಸ ಬಿಜಾಪುರೆ, ಮೊಹಮ್ಮದ್ ಶಿಂಗಾಪುರೆ, ವಸಿಮ ಕಿಲೆದಾರ್, ಮುಸಾವಿರ ಮಕಾಂದಾರ, ನಯೀಮ ಪಟಾನ್, ಮುಕ್ತರ ಮಕಾಂದಾರ ಸೇರಿದಂತೆ ಇನ್ನಿತರು ಉಪಸ್ಥಿತರಿದ್ದರು.

Tags:

error: Content is protected !!