Chikkodi

ಫೆಬ್ರುವರಿ 16 ರಿಂದ ಯಕ್ಸಂಬಾದ ಕರ್ಲಹೊಂಡಲಿಂಗೇಶ್ವರ ಜಾತ್ರಾಮಹೋತ್ಸವ

Share

ಪ್ರತಿ ವರ್ಷದಂತೆ ಈ ವರ್ಷವು ಕೂಡಾ ಮಹಾಶಿವರಾತ್ರಿ ಅಂಗವಾಗಿ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದ ಕರ್ಲಹೊಂಡಲಿಂಗೇಶ್ವರ ಜಾತ್ರಾಮಹೋತ್ಸವು ಫೆಬ್ರುವರಿ 16-18 ವರೆಗೆ ನಡೆಯಲಿದೆ ಎಂದು ಜಾತ್ರಾ ಕಮಿಟಿಯ ಸದಸ್ಯರು ತಿಳಿಸಿದ್ದಾರೆ.

ಸೋಮವಾರ ದಿನಾಂಕ
16-02-2026 ರಂದು ಮುಂಜಾನೆ 8:00 ಗಂಟೆಗೆ ಕುಂಭಮೇಳ ಹಾಗೂ ಸಕಲ ವಾದ್ಯಗಳೊಂದಿಗೆ ಪಲ್ಲಕ್ಕಿ ಆಗಮನ ಹಾಗೂ ಗ್ರಾಮ ನೈವೇದ್ಯ ಜರಗುವುದು.ಮಂಗಳವಾರ ದಿನಾಂಕ 17-02-2026 ರಂದು ಮುಂಜಾನೆ 8:00 ಗಂಟೆಗೆ ರುದ್ರಾಭಿಷೇಕ ಮತ್ತು ಮಧ್ಯಾಹ್ನ 12:00 ಗಂಟೆಗೆ ಮಹಾಪ್ರಸಾದದ ವ್ಯವಸ್ಥೆ ಮಾಡಲಾಗಿದೆ ಎಂದರು.

ಮುಂಜಾನೆ 10:00 ಗಂಟೆಗೆ –
ವಿಜಯಪುರ ಜಿಲ್ಲೆಯ ಬಾಗೇವಾಡಿಯ ಹಾಗೂ ರಾಯಬಾಗ ತಾಲೂಕಿನ ಖಣದಾಳ ಗ್ರಾಮದ ಶ್ರೀಹುಲಿಕಾಂತೇಶ್ವರ ಹರದೇಶಿ ಗೀ ಗೀ ಪದ ಕಲಾ ಮೇಳ ಹಾಗೂ ಗೌರಿಶಂಕರ ಗೀ ಗೀ ಪದ ಕಲಾ ಮೇಳ ಹಾಗೂ ವಿದ್ಯಾಶ್ರೀ ಮಸಬಿನಾಳ,ಲಕ್ಷ್ಮಣ ಖಣದಾಳಯವರಿಂದ ಶಾಹೀರಕಿ ಗಾನಾ (ಗೀ ಗೀ ಪದಗಳು) ನಡೆಯಲಿವೆ.ಬುಧವಾರ ದಿನಾಂಕ : 18-02-2026 ರಂದು ಶರ್ಯತ್ತುಗಳು ನಡೆಯಲಿವೆ.
ಮುಂಜಾನೆ 9:00 ಗಂಟೆಗೆ ಜನರಲ್ ಕುದುರೆಗಾಡಿ ಶರ್ಯತ್ತು ನಡಲಿವೆ.ಮುಂಜಾನೆ 10:00 ಗಂಟೆಗೆ ನವತರ ಜನರಲ್ ಕುದುರೆಗಾಡಿ ಶರ್ಯತ್ತು ನಡಲಿವೆ.
ಮುಂಜಾನೆ 10:30 ಗಂಟೆಗೆ ಕೈಯಲ್ಲಿ ಎತ್ತು ಹಿಡಿದು ಓಡುವ ಶರ್ಯತ್ತುಗಳು ನಡೆಯಲಿವೆ ಈ ಎಲ್ಲ ಕಾರ್ಯಕ್ರಮಗಳಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು
ಎಂದು ಕರ್ಲಹೊಂಡಲಿಂಗೇಶ್ವ ದೇವಸ್ಥಾನದ ಕಮಿಟಿಯ ಸದಸ್ಯರು ಮಾಧ್ಯಮಗಳ ಮೂಲಕ ಮನವಿಯನ್ನು ಮಾಡಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಅಧ್ಯಕ್ಷರಾದ ಆಶಿಶ್ ಶ್ ಹುಕ್ಕೇರಿ.ಸತೀಶ ಕಬಾಡೆ,ಸುರೇಂದ್ರ ಕಬಾಡೆ, ರವಿ ಹಿಟನೆ, ಪುಂಡಲಿಕ ಸಾತ್ವರ, ಸಚಿನ ಮಾನೆ, ಸುಧಾಕರ ಮೊಪಗಾರ,ಪುಂಡಲಿಕ್ ಹಿಟನೆ ರಾಜು ಸಲಗರೆ, ಬಾಬು ಬಾಕಳೆ, ಬಾಲಚಂದ್ರ ಸಪ್ತಸಾಗರ, ರಮೇಶ ಕಮ್ಮಾರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು..

Tags:

error: Content is protected !!