hubbali

ಖಾತಾರ್ನಕ್ ಪಿಕ್ ಪಾಕೆಟ್ ಕಳ್ಳರು : ದೃಶ್ಯ ಸಿಸಿಟಿವಿಯಲ್ಲಿ ಸೆರೆ

Share

ಹುಬ್ಬಳ್ಳಿಯಲ್ಲಿ ಇದೀಗ ಖಾತಾರ್ನಕ್ ಪಿಕ್ ಪಾಕೆಟ್ ಕಳ್ಳರ ಹಾವಳಿ ವಿಪರೀತವಾಗಿದ್ದು ಇಷ್ಟು ದಿನಗಳ ಕಾಲ ಬಸ್ ಹಾಗೂ ಬಸ್ ನಿಲ್ದಾಣದಲ್ಲಿ ಕಳ್ಳತನ ಮಾಡುತ್ತಿದ್ದ ಪಿಕ್ ಪಾಕೆಟ್ ಕಳ್ಳರು ಇದೀಗ ಹುಬ್ಬಳ್ಳಿಯ ರಸ್ತೆಗಳಲ್ಲಿ ತಮ್ಮ ಕೈಚಳಕವನ್ನು ತೋರಿ ಕಳ್ಳತನ ಮಾಡಿ ಗ್ಯಾಂಗ್ ಫುಲ್ ಆಕ್ಟಿವ್ ಆಗಿದೆ.

ಹುಬ್ಬಳ್ಳಿಯ ರೈಲ್ವೇ ಸ್ಟೇಷನ್ ರೋಡ್, ಜನತಾ ಬಜಾರ್ ಹಾಗೂ ದುರ್ಗದ ಬೈಲ್ ರಸ್ತೆಯಲ್ಲಿ ಓಡಾಡುವ ಬೇರೆ ಊರಿನವರನ್ನು ಟಾರ್ಗೆಟ್ ಮಾಡೋ ಈ ಗ್ಯಾಂಗ್ ರಸ್ತೆಯ ಪಕ್ಕದಲ್ಲಿ ಅವರ ಜೊತೆ ಮಾತನಾಡುತ್ತ ಅವರ ಕೈ ಮುಟ್ಟಿ ಅವರ ಜೊತೆ ತಮಾಷೆ ಮಾಡುತ್ತಾ ಅವರ ಜೇಬಿನಲ್ಲಿದ್ದ ಮೊಬೈಲ್, ಹಾಗೂ ಪರ್ಸ್ ಎಗರಿಸಿ ಇನ್ನೊಬ್ಬ ಕಳ್ಳನ ಕೈಯಲ್ಲಿ ಕೊಟ್ಟು ಎಸ್ಕೇಪ್ ಆಗೋ ಗ್ಯಾಂಗ್ ಫುಲ್ ಆಕ್ಟಿವ್ ಆಗಿದೆ.

ಪಾಪ ಬೇರೆ ಊರಿಂದ ಬಂದಿರೋ ಅಮಾಯಕರು ಅತ್ತ ಮೊಬೈಲ್, ಪರ್ಸ್, ದುಡ್ಡು ಎಲ್ಲವನ್ನು ಕಳೆದುಕೊಂಡು ಬೇರೆಯವರ ಬಳಿ ಹಣ ಕೇಳಿ ತಮ್ಮ ಊರಿಗೆ ಹೋಗುವಂತ ಪ್ರಸಂಗಗಳು ಇದೀಗ ಹುಬ್ಬಳ್ಳಿಯಲ್ಲಿ ನಡೆಯುತ್ತಿದೆ.ಸದ್ಯ ಈ ಖತರ್ನಾಕ್ ಕಳ್ಳತನದ ದ್ರಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು. ಪೊಲೀಸರು ಪಿಕ್ ಪಾಕೆಟ್ ಮಾಡೋ ಈ ಕಳ್ಳರ ಕೈಗೆ ಕಬ್ಬಿಣದ ಬಳೆ ಯಾವಾಗ ಹಾಕ್ತಾರೇ ಅನ್ನೋದನ್ನು ಕಾದು ನೋಡಬೇಕಿದೆ.

Tags:

error: Content is protected !!