ವಾಣಿಜ್ಯನಗರಿ ಹುಬ್ಬಳ್ಳಿಗೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಆಗಮಿಸಿದ್ದ, ಸೋನು ನಿಗಮ್ ಅವರು ಹುಬ್ಬಳ್ಳಿಯ ಸಿದ್ದಾರೂಢ ಮಠಕ್ಕೆ ಭೇಟಿ ನೀಡಿ ದರ್ಶನ ಪಡೆದರು.
ಖ್ಯಾತ ಸಂಗೀತಕಾರ ಸೋನು ನಿಗಮ್, ಸಿದ್ಧಾರೂಢ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಕೆ ಮಾಡಿದರು. ಸಿದ್ಧಾರೂಢ ಗದ್ದುಗೆ ಬಳಿ ಹತ್ತು ನಿಮಿಷಗಳ ಧ್ಯಾನ ಮಾಡಿದ ಸೋನು ನಿಗಮ್ ಅವರಿಗೆ ಸಿದ್ಧಾರೂಢ ಮಠದ ಟ್ರಸ್ಟ್ನಿಂದ ಸಿದ್ದಾರೂಢ ಮೂರ್ತಿ ನೀಡಿ ಸತ್ಕರಿಸಲಾಯಿತು.


