ಪ್ರತಿ ಮಗುವಿಗೆ ಎರಡು ಹನಿ ಲಸಿಕೆ ಹಾಕಿ ಪೋಲಿಯೋದಿಂದ ಮಕ್ತ ಗೋಳಿಸಿ ಎಂದು ಹುಕ್ಕೇರಿ ತಾಲೂಕಾ ದಂಡಾಧೀಕಾರಿ ಬಲರಾಮ ಕಟ್ಟಿಮನಿ ಹೇಳಿದರು.
ಪೋಲಿಯೋ ದಿನ ಅಂಗವಾಗಿ ಹುಕ್ಕೇರಿ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಜರುಗಿದ ಕಾರ್ಯಕ್ರಮ ವನ್ನು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ನಂತರ ಐದು ವರ್ಷರ್ದಳಗಿನ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿ ಮಾದ್ಯಮಗಳೊಂದಿಗೆ ಮಾತನಾಡಿ ಮೂರು ದಿನಗಳ ಕಾಲ ಜರಗಲಿರುವ ಪೋಲಿಯೋ ಅಭಿಯಾನದಲ್ಲಿ ಐದು ವರ್ಷದ ವಳಗಿನ ಮಕ್ಕಳಿಗೆ ಎರಡು ಹನಿ ಪೋಲಿಯೋ ಲಸಿಕೆ ಹಾಕುವ ಮೂಲಕ ಪೋಲಿಯೋ ಮುಕ್ತ ದೇಶ,ರಾಜ್ಯವನ್ನಾಗಿಸೋಣ ಎಂದರು.


ನಂತರ ತಾಲೂಕಾ ಆರೋಗ್ಯ ಅಧಿಕಾರಿ ಡಾ, ಉದಯ ಕುಡಚಿ ಮಾತನಾಡಿ ವಿವಿಧ ಇಲಾಖೆಗಳ ಸಹಯೋಗದಲ್ಲಿ ಹುಕ್ಕೇರಿ ತಾಲೂಕಿನ್ಯಾದ್ಯಾಂತ 2 ನೂರು ಭೂತಗಳ ಮೂಲಕ ಸುಮಾರು 43 ಸಾವಿರಕ್ಕಿಂತಲೂ ಹೆಚ್ಚು ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವ ಗುರಿ ಹೊಂದಲಾಗಿದೆ ಕಾರಣ ಐದು ವರ್ಷಕ್ಕಿಂತ ಕಡಿಮೆ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿ ಪೋಲಿಯೋ ಮುಕ್ತ ಗೋಳಿಸಲು ಸಹಕರಿಸ ಬೇಕು ಎಂದರು

ಈ ಸಂದರ್ಭದಲ್ಲಿ ಮುಖ್ಯವೈದ್ಯಾಧೀಕಾರಿ
ಮಹಾಂತೇಶ ನರಸನ್ನವರ, ಡಾ, ದೀಪಕ ಅಂಬಲಿ, ಡಾ, ಸುರೇಶ ಹಿತ್ತಲಮನಿ, ಡಾ, ಎಂ ಸಿ ವಿಜಾಪುರೆ, ಮಹಾದೇವಿ ಜಕಮತಿ, ಎ ಎಸ್ ಪದ್ಮನ್ನವರ, ಸಿ ಡಿ ಪಿ ಓ ಹೋಳೆಪ್ಪ ಎಚ್, ಮುಖ್ಯಾಧೀಕಾರಿ ಈಶ್ವರ ಸಿದ್ನಾಳ, ಆರೋಗ್ಯ ಸಿಬ್ಬಂದಿಗಳಾದ ನವೀನ ಬಾಯನಾಯಕ, ಸೋಮೇಶ ಆರೆಬೆಂಚ
ಅಂಜನಾ ಮೋಳೆ, ಉದಯಸಿಂಗ ಹಜಾರೆ, ಸರಸ್ವತಿ ದೊಡಬಂಗಿ, ವಿಜಯ ಕುಂಬಾರ, ಮಂಜುನಾಥ ಬೆಟಗೇರಿ, ಅಮೃತ ದೊಡಮನಿ ಮೊದಲಾದವರು ಲಸಿಕಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.
