Hukkeri

ಶಾಂತಿ ಮತ್ತು ಸಮಾನತೆಯೇ ಅಂಬೇಡ್ಕರ್ ರವರ ಧ್ಯೇಯವಾಗಿತ್ತು – ಉದಯ ಹುಕ್ಕೇರಿ.

Share

ಶಾಂತಿ ಮತ್ತು ಸಮಾನತೆಯು ವಿಶ್ವದಲ್ಲಿ ಸದಾ ನೆಲೆಸಲು ಡಾ, ಬಿ ಆರ್ ಅಂಬೇಡ್ಕರ್ ರವರ ಧ್ಯೇಯ ವಾಗಿತ್ತು ಎಂದು ದಲಿತ ಮುಖಂಡ ಮಾಜಿ ಪುರಸಭೆ ಅದ್ಯಕ್ಷ ಉದಯ ಹುಕ್ಕೇರಿ ಹೇಳಿದರು.
ಡಾ, ಬಿ ಆರ್ ಅಂಬೇಡ್ಕರ್ ರವರ 59 ನೇ ಮಹಾಪರಿನಿರ್ವಾಣ ದಿನ ಅಂಗವಾಗಿ ಸಮಾಜ ಕಲ್ಯಾಣ ಇಲಾಖೆ ಮತ್ತು ತಾಲೂಕಾ ಆಡಳಿತ ವತಿಯಿಂದ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ತಾಲೂಕಾ ದಂಡಾಧೀಕಾರಿ ಬಲರಾಮ ಕಟ್ಟಮನಿ ಅಂಬೇಡ್ಕರ್ ರವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಚಾಲನೆ ನೀಡಿದರು.
ನಂತರ ವಿವಿಧ ಇಲಾಖೆ ಅಧಿಕಾರಿಗಳು ಮತ್ತು ದಲಿತ ಮುಖಂಡರು ತ್ರೀಸರಣ ಮತ್ತು ಪಂಚಶೀಲ ಪಠಣ ಮಾಡಿ ಕ್ಯಾಂಡಲ್ ಬೆಳಗಿದರು.
ಮಾದ್ಯಮಗಳೊಂದಿಗೆ ಮಾತನಾಡಿದ ತಹಸಿಲ್ದಾರ ಬಲರಾಮ ಕಟ್ಟಿಮನಿ ಮತ್ತು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೆಶಕ ಗುರುಶಾಂತ ಪಾವಟೆ ಇಂದು ಡಾ, ಬಾಬಾಸಾಹೇಬ ಅಂಬೇಡ್ಕರ್ ರವರ 59 ನೇ ಮಹಾಪರಿನಿರ್ವಾಣ ಅಂಗವಾಗಿ ತಾಲೂಕಿನ ಸಮಾಜದ ಮುಖಂಡರೊಂದಿಗೆ ಇಲಾಖೆ ಅಧಿಕಾರಿಗಳು ಅಂಬೇಡ್ಕರ್ ಭಾವ ಚಿತ್ರಕ್ಕೆ ನಮನ ಸಲ್ಲಿಸಿ ಸ್ಮರಣೆ ಮಾಡಲಾಗಿದೆ ಎಂದರು
ನಂತರ ಡಾ, ಬಿ ಆರ್ ಅಂಬೇಡ್ಕರ್ ಪರ ಘೋಷಣೆಗಳನ್ನು ಹಾಕಿ ಪುಷ್ಪ ನಮನ ಸಲ್ಲಿಸಿದರು.
ದಲಿತ ಮುಖಂಡ ಮಾಜಿ ಪುರಸಭೆ ಅದ್ಯಕ್ಷ ಉದಯ ಹುಕ್ಕೇರಿ ಮಾತನಾಡಿ ಇಂದು ಬಾಬಾಸಾಹೇಬರು ನಮ್ಮನ್ನು ಬಿಟ್ಟು 59 ವರ್ಷ ಗತಿಸಿದವು ಆದರೆ ಅವರ ಜ್ಞಾನದ ಅಡಿಯಲ್ಲಿ ಇಡಿ ವಿಶ್ವ ಸಾಗುತ್ತಿದೆ ಅದರಂತೆ ಶಾಂತಿ ಮತ್ತು ಸಮಾನತೆ ಎಲ್ಲರೂ ಮೈಗೂಡಿಸಿಕೋಳ್ಳ ಬೇಕು ಎಂದರು
ಈ ಸಂದರ್ಭದಲ್ಲಿ ಕರ್ನಾಟಕ ಸರಕಾರಿ ನೌಕರರ ಸಂಘದ ತಾಲೂಕಾ ಅದ್ಯಕ್ಷ ಅವಿನಾಶ ಹೋಳೆಪ್ಪಗೋಳ,ದಲಿತ ಮುಖಂಡರಾದ ಕೆಂಪಣ್ಣ ಶಿರಹಟ್ಟಿ, ರಮೇಶ ಹುಂಜಿ, ಬಾಹುಸಾಹೇಬ ಪಾಂಡ್ರೆ, ಕಿರಣ ಬಾಗೆವಾಡಿ, ಶಶಿಕಾಂತ ಹೋನ್ನಳ್ಳಿ, ಕೆ ಪಿ ಶಿರಗಾಂವಕರ, ಡಾ, ಕಾಡಪ್ಪ ಹೋಸಮನಿ, ಅಧಿಕಾರಿಗಳಾದ ಮಹೇಶ ಭಜಂತ್ರಿ, ಎಲ್ ಬಿ ಮಾಲದಾರ, ಎಸ್ ಜೆ ಗುಂದಗಿ, ಆರ್ ಎ ಜಕಬಾಳ, ಸಂತೋಷ ಮಾಲಗಿತ್ತಿಮಠ,ಶೇಟ್ಟೆಪ್ಪಾ ಹರಿಜನ, ಅರುಣಾ ಇಂಗಳೆ ಉಪಸ್ಥಿತರಿದ್ದರು.

Tags:

error: Content is protected !!