Khanapur

ಜೂನ್ 14 ರಂದು ಖೈರವಾಡ ಸರ್ಕಾರಿ ಹಿರಿಯ ಪ್ರಾಥಮಿಕ ಮರಾಠಿ ಶಾಲೆಯ 1997-98ನೇ ಸಾಲಿನ ವಿದ್ಯಾರ್ಥಿಗಳ ಸ್ನೇಹ ಸಮ್ಮೇಳನ

Share

ಖಾನಾಪೂರ ತಾಲೂಕಿನ ಖೈರವಾಡ ಗ್ರಾಮದಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಮರಾಠಿ ಶಾಲೆಯ 7ನೇ ತರಗತಿಯ ವಿದ್ಯಾರ್ಥಿಗಳ 1997-98 ನೇ ಸಾಲಿನ ವಿದ್ಯಾರ್ಥಿಗಳ ಸ್ನೇಹ ಸಮ್ಮೇಳನವು ಜೂನ್ 14 ರಂದು ನಡೆಯಲಿರುವ ಹಿನ್ನಲೆಯಲ್ಲಿ ಇದರ ಬಗ್ಗೆ ಹಳೆಯ ವಿದ್ಯಾರ್ಥಿಗಳು ಮಾಹಿತಿ ನೀಡಿ ಈ ಸಾಲಿನ ವಿದ್ಯಾರ್ಥಿಗಳು ಈ ಕಾರ್ಯಕ್ರಮ ಬಂದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕೋರಿದರು.

ಈ ಸಂದರ್ಭದಲ್ಲಿ ಹಳೆಯ ವಿದ್ಯಾರ್ಥಿ ಶಿಕ್ಷಕ ಮಂಜುನಾಥ ಬಸ್ತವಾಡಕರ ಅವರು ಮಾತನಾಡಿ 1937ರಲ್ಲಿ ಖೈರವಾಡನಲ್ಲಿ ಸ್ಥಾಪನೆಯಾದ ಮರಾಠಿ ಪ್ರಾಥಮಿಕ ಶಾಲೆ ಇಂದು ಸುಮಾರು 88 ವರ್ಷಗಳನ್ನು ಪೂರೈಸಿದೆ , ನಮ್ಮ ಮಾತೃ ಭಾಷೆಯ ಜ್ಞಾನವನ್ನು ಕಲಿಸಿದ ಶಾಲೆಯ ನೆನಪುಗಳು ಇಂದು ನಮಗೆ ಸ್ಪೂರ್ತಿ ನೀಡುತ್ತದೆ ಮರಾಠಿ ಶಾಲೆಗಳು ಪ್ರಗತಿ ಹೊಂದಬೇಕು, ಮರಾಠಿ ಶಾಲೆ ಉಳಿಯಬೇಕು, ಎಲ್ಲರೂ ಮರಾಠಿ ಶಾಲೆಗಳಿಗೆ ಬರಬೇಕು ಈ ಗುರಿಯನ್ನು ಗಮನದಲ್ಲಿಟ್ಟುಕೊಂಡು ಮರಾಠಿ ಶಾಲೆಯ ನೆನಪುಗಳನ್ನು ಪುನರುಜ್ಜೀವನಗೊಳಿಸಲು ಮತ್ತು ಭವಿಷ್ಯದಲ್ಲಿ ಮರಾಠಿ ಶಾಲೆಯ ಸಮೃದ್ಧಿಯನ್ನು ಖಚಿತಪಡಿಸಿಕೊಳ್ಳಲು 1997-98 ನೇ ಸಾಲಿನ ತರಗತಿಯ ಹಳೆಯ ವಿದ್ಯಾರ್ಥಿಗಳಿಗೆ ಬಿಳ್ಕೋಡುಗೆ ಕೂಟವನ್ನು ಆಯೋಜಿಸಲಾಗಿದೆ ಆದ್ದರಿಂದ ಹಳೆಯ ವಿದ್ಯಾರ್ಥಿಗಳು ಬಹು ಸಂಖ್ಯೆಯಲ್ಲಿ ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕೋರಿದರು.ಈ ಸಂದರ್ಭದಲ್ಲಿ ಮಾಜಿ ಶಿಕ್ಷಕರ ಸಮ್ಮಾನ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳು ನಡೆಯಲಿವೆ.

ಈ ಸಂದರ್ಭದಲ್ಲಿ ಪರಶುರಾಮ ಕೋಳೇಕರ, ಮಾರುತಿ ಕೋಳೇಕರ, ರೋಹಿತ್ ಬಾಗೆ,ಮಂದಿರಾ ಭುಜಗುರವ, ಅನಿತಾ ಜುಂಜವಾಡಕರ, ಗೌರಿ ಮದ್ವಾಲ್ಕರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಅಲ್ತಾಫ್ ಎಂ ಬಸರೀಕಟ್ಟಿ
ಇನ್ ನ್ಯೂಸ್ ಖಾನಾಪೂರ

Tags:

error: Content is protected !!