Khanapur

ಬೈಕ್’ಗೆ ಅಪರಿಚಿತ ಕಾರು ಡಿಕ್ಕಿ…

Share

ಖಾನಾಪೂರ ತಾಲೂಕಿನ ಕೌಂದಲ್ ಗ್ರಾಮ ಪಂಚಾಯತಿಯ ಸದಸ್ಯ ಮತ್ತು ಬಿಜೆಪಿ ಕಾರ್ಯಕರ್ತ ಉದಯ್ ಭೋಸಲೆ ದ್ವಿಚಕ್ರ ವಾಹನ ಅಪಘಾತದಲ್ಲಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ

ಕೌಂದಲನ ಸಾಮಾಜಿಕ ಕಾರ್ಯಕರ್ತ, ಕರಂಬಳ ಗ್ರಾಮ ಪಂಚಾಯತ್‌ನ ಹಾಲಿ ಸದಸ್ಯ ಮತ್ತು ಹಿರಿಯ ಬಿಜೆಪಿ ಕಾರ್ಯಕರ್ತ ಉದಯ್ ಭೋಸಲೆ (42) ಅವರ ದ್ವಿಚಕ್ರ ವಾಹನಕ್ಕೆ ಅಪರಿಚಿತ ಕಾರು ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಖಾನಾಪೂರ-ಬೆಳಗಾವಿ ರಸ್ತೆಯ ದೇಸೂರ ಬಳಿ ಸೇತುವೆಯ ಮೇಲೆ ಈ ಘಟನೆ ನಡೆದಿದೆ ಎಂದು ಹೇಳಲಾಗಿದ್ದು, ಅವರೊಂದಿಗೆ ಇದ್ದ ಭಾರತೀಯ ಸೇನೆಯ ಪ್ರಶಾಂತ್ ಪಾಟೀಲ್ (42) ಗಂಭೀರವಾಗಿ ಗಾಯಗೊಂಡಿದ್ದಾರೆ. ಕಾರು ಚಾಲಕ ಬೈಕ್‌ಗೆ ಹಿಂದಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.

Tags:

error: Content is protected !!