ಘಟಪ್ರಭಾ ಎಡದಂಡೆ ಕಾಲುವೆ ನೀರು ಹರಿಸುವಂತೆ ಆಗ್ರಹಿಸಿ ಗುರುವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಘಟಪ್ರಭಾ ಎಡದಂಡೆ, ಬಲದಂಡ, ನದಿಗೆ ಹುಕ್ಕೇರಿ ಕೊಟವಾಗಿ ಯಾತ ನೀರಾವರಿ ಎಡದಂಡೆ ಕಾಲುವೆ ನೀರು ಹರಿಸಲೇಬೇಕಾದ ಅನಿವಾರ್ಯ ಇದೆ. ಕೋಳವೆ ಬಾಂವಿ ಬೋರುಗಳು ಬತ್ತಿ ಹೋಗಿವೆ ಹಾಗೂ ದನಕರುಗಳಿಗೆ ಜಾನುವಾರುಗಳಿಗೆ ತುಂಬಾ ನೀರಿನ ಕೊರತೆ ಇರುವುದರಿಂದ ಕಾಲುವೆಗೆ ನೀರು ಹರಿಸಲೇಬೇಕೆಂದು ರೈತ ಮುಖಂಡ ಚೂನಪ್ಪ ಪೂಜಾರಿ ಒತ್ತಾಯಿಸಿದರು
ಘಟಪ್ರಭಾ ನದಿಯಿಂದ ರೈತರಿಗೆ ತುಂಬಾ ಅನುಕೂಲವಿದ್ದು ರೈತರು ಜಾನುವಾರಗಳು ಬದುಕಬೇಕಾದರೆ ನೀರು ಹರಿಸಲೇಬೇಕು.ಈಗ ಧಾರವಾಡದ ಕೈಗಾರಿಕಾ ಪ್ರದೇಶಗಳಿಗೆ ನೀರುಹರಿಸುವ ನಿರ್ಧಾರದಿಂದ ರಾಜ್ಯ ಸರ್ಕಾರ ಹಿಂದೆ ಸರಿಯಬೇಕು ತಕ್ಷಣವೇ ಕಾಮಗಾರಿ ನಿಲ್ಲಿಸಬೇಕೆಂದು ರೈತ ಸಂಘದ ಮುಖಂಡ ಜಾವೇದ ಮುನ್ನಾ ಆಗ್ರಹಿಸಿದರು.
ಬೇಸಿಗೆ ಕಾಲದಲ್ಲಿ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಲಿದ್ದು ತಕ್ಷಣ ನೀರು ಹರಿಸಲು ಅನುಕೂಲ ಮಾಡಿಕೊಡಬೇಕೆಂದು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಅರ್ಪಿಸಿದ ಮನವಿಯಲ್ಲಿ ತಿಳಿಸಿದ್ದಾರೆ.
ರೈತ ಮುಖಂಡರಾದ ಚುನ್ನಪ್ಪ ಪೂಜಾರಿ, ಪ್ರಕಾಶ ನಾಯಕ, ರಾಘವೇಂದ್ರ ನಾಯಕ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.