ಖೊಟ್ಟಿ ಆಸ್ತಿಪತ್ರವನ್ನು ಸೃಷ್ಠಿಸಿ ಮೃತರ 8 ಎಕರೆ 21 ಗುಂಟೆ ಜಮೀನನ್ನು ಕಬಳಿಸಿ ಬೇರೆಯವರಿಗೆ ಮಾರಾಟ ಮಾಡಿದ ಪ್ರಕರಣ ಬೆಳಗಾವಿ ತಾಲೂಕಿನ ಬಾಚಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಬೆಳಗಾವಿ ತಾಲೂಕಿನ ಬಾಚಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. 2003 ರಲ್ಲಿ ವಿಜಯ ಅಸಗಾಂವಕರ ಮೃತರಾಗಿದ್ದರು, ಅವರ ತಾಯಿ ಕಮಲಾಬಾಯಿ ಅಸಗಾಂವಕರ 2001 ರಲ್ಲಿ ಮೃತರಾಗಿದ್ದಾರೆ. ತಾಯಿ ಕಮಲಾಬಾಯಿ ಅಸಗಾಂವಕರ ಸಾಯುವ ಮುನ್ನ ತಮ್ಮ 8 ಎಕರೆ 21 ಗುಂಟೆ ಜಮೀನು ತಮ್ಮ ಮಗನಿಗೆ ಸೇರಬೇಕೆಂದೇ ವಿಲ್ ಬರೆದಿದ್ದರಂತೆ. ಆದರೇ ಅದು ಮಗನ ನಿಧನಾನಂತರ ಸೊಸೆಗೆ ಸೇರಿಲ್ಲ. ಸಾಗರ ದತ್ತಾತ್ರೈಯ ಜಾಧವ ಎಂಬುವರ ಹೆಸರಿಗೆ ನೋಂದಣಿಯಾಗಿದೆ.
ಈ ಹಿನ್ನೆಲೆ ಸೊಸೆ ವಿನೀತಾ ವಿಜಯ ಅಸಗಾಂವಕರ ಅವರು ಕಂಗ್ರಾಳಿ ಬಿ.ಕೆ. ಗ್ರಾಮದ ಸಾಗರ ಜಾಧವ, ಮುತ್ಯಾನಟ್ಟಿ ಗ್ರಾಮದ ಸುರೇಶ ಬೆಳಗಾವಿ, ಸಾಹುಕಾರ ಗಲ್ಲಿ,ಕಡೋಲಿಯ ಶಾಂತಾ ನಾರ್ವೇಕರ ಮತ್ತು ಕಲ್ಮೇಶ್ವರ ಗಲ್ಲಿ, ಕಡೋಲಿಯ ಹಾರೂಣ ತಾಶೀಲ್ದಾರ ವಿರುದ್ಧ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.