ಕೇಂದ್ರ ಸರ್ಕಾರದ ಬಜೆಟ್ ರೈತರು, ಸಂಘಟಿತ ಮತ್ತು ಅಸಂಘಟಿತ ಕೂಲಿ ಕಾರ್ಮಿಕರ ವಿರೋಧ ಬಜೆಟ್ ಆಗಿದೆ ಎಂದು ಆರೋಪಿಸಿ ಇಂದು ಬೆಳಗಾವಿಯಲ್ಲಿ ಸೇಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸನ ವತಿಯಿಂದ ಪ್ರತಿಭಟನೆಯನ್ನು ನಡೆಸಲಾಯಿತು. ಕೇಂದ್ರ ಸರ್ಕಾರದ ರೈತ ಕಾರ್ಮಿಕರ ವಿರೋಧಿ ಬಜೆಟನ್ನು ವಿರೋಧಿಸಿ ಬೆಳಗಾವಿಯಲ್ಲಿಂದು ಸೇಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸನ ವತಿಯಿಂದ ಪ್ರತಿಭಟನೆಯನ್ನು ನಡೆಸಲಾಯಿತು. ಈ ಕುರಿತಾದ ಮನವಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಯಿತು.
ಕೇಂದ್ರದ ಬಜೆಟನಲ್ಲಿ ರೈತರಿಗೆ ಕಾರ್ಮಿಕರಿಗೆ ಸಹಾಯ ಸಿಗುವ ನಿರೀಕ್ಷೆಯಿತ್ತು. ಆದರೇ ಅಸಂಘಟಿತ ಕೂಲಿ ಕಾರ್ಮಿಕರು, ರೈತರು ಸೇರಿದಂತೆ ದುಡಿಯುವ ಜನರಿಗೆ ಅನ್ಯಾಯ ಮಾಡಲಾಗಿದೆ. ಸಾಮಾಜೀಕ ಕಲ್ಯಾಣ ಯೋಜನೆಗಳಿಗೆ ಅನುದಾನವನ್ನು ನೀಡಿಲ್ಲ. ಉದ್ಯೋಗಖಾತ್ರಿ ಯೋಜನೆ ಸೇರಿದಂತೆ ಹಲವು ಯೋಜನೆಗಳಿಗೆ ಅನುದಾನವನ್ನು ಕಡಿತಗೊಳಿಸಿ, ಕೇವಲ ಶ್ರೀಮಂತ್ರರಿಗಾಗಿ ಬಜೆಟನ್ನು ಮಂಡಿಸಲಾಗಿದೆ ಎಂದು ಸಿಐಟಿಯು ಪ್ರಧಾನ ಕಾರ್ಯದರ್ಶಿ ಜೆ.ಎಂ. ಜೈನೆಖಾನ್ ತಿಳಿಸಿದರು.
ರೈತರು, ಅಸಂಘಟಿತ ಕೂಲಿ ಕಾರ್ಮಿಕ ಸೇರಿದಂತೆ ಬಡಜನರು ಕೇಂದ್ರ ಸರ್ಕಾರದ ಕಣ್ಣಿಗೆ ಕಾಣಿಸುವುದಿಲ್ಲವೇ? ಯಾರೂ ಹೊರಗಡೆ ಬರದಿರುವ ವೇಳೆ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಕೋವಿಡ್ ಸಂದರ್ಭದಲ್ಲಿ ತಮ್ಮ ಜೀವವನ್ನು ಲೆಕ್ಕಿಸದೇ ಸೇವೆ ಸಲ್ಲಿಸಿದ್ದಾರೆ. ಆದರೇ ಇದು ಸಚಿವೆ ನಿರ್ಮಲಾ ಸೀತಾರಮಣ್ ಅವರ ಗಮನಕ್ಕಿಲ್ಲವೇ? 2018 ರ ಬಳಿಕ ನಮಗೆ ಯಾವುದೇ ಅನುದಾನವನ್ನು ನೀಡಿಲ್ಲ. ಮಧ್ಯಾನ್ಹಾಹಾರ ತಯಾರಿಸುವವರು, ರೈತರು ಸೇರಿದಂತೆ ಕೂಲಿ ಕಾರ್ಮಿಕರಿಗೆ ಬಜೆಟಿನಲ್ಲಿ ಅನ್ಯಾಯ ಮಾಡಲಾಗಿದೆ ಎಂದು ಪ್ರತಿಭಟನಾಕಾರರಾದ ಮಂದಾ ನೇವಗಿ ತಿಳಿಸಿದರು.
ದಿಲೀಪ್ ವಾರ್ಕೆ, ದೊಡ್ಡಪ್ಪ ಪುಜಾರಿ, ಚೆನ್ನಮ್ಮ ಗಡಕರಿ, ಜೀತೆಂದ್ರ ಕಾಗಣಿಕರ, ತುಳಸಮ್ಮ ಮಾಳದಕರ, ಗೋದಾವರಿ ರಾಜಾಪುರೆ, ಸಿ.ಎಸ್.ಮಗದುಮ್, ಸುಮನ್ ಗಡಾದ, ಭಾರತಿ ಜೋಗಪ್ಪನ್ನವರ ಸೇರಿದಂತೆ ಇನ್ನುಳಿದವರು ಭಾಗಿಯಾಗಿದ್ಧರು.