ಬೆಳಗಾವಿಯ ಆಂಜನೇಯ ನಗರದಲ್ಲಿರುವ ಶ್ರೀ ಗಣೇಶ ಮಂದಿರದ ವಾರ್ಷಿಕೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ನೆರವೇರಿತು.
ಬೆಳಗಾವಿಯ ಆಂಜನೇಯ ನಗರದಲ್ಲಿರುವ ಶ್ರೀ ಗಣೇಶ ಮಂದಿರದ ವಾರ್ಷಿಕೋತ್ಸವ ಕಾರ್ಯಕ್ರಮವು ಪ್ರತಿ ವರ್ಷದಂತೆ ಈ ಬಾರಿಯೂ ರಥಸಪ್ತಮಿಯ ದಿನ ನೆರವೇರಿತು. ಬೆಳಿಗ್ಗೆಯಿಂದಲೇ ಅಭಿಷೇಕ, ಅಲಂಕಾರ, ವಿಶೇಷ ಪೂಜೆ, ಮಹಾಆರತಿ ಸೇರಿದಂತೆ ಇನ್ನುಳಿದ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಸಂಜೆ ಮಹಾ ಆರತಿಯ ಬಳಿಕ ರಾತ್ರಿ ಮಹಾಪ್ರಸಾದದ ವ್ಯವಸ್ಥೆಯನ್ನು ಮಾಡಲಾಗಿತ್ತು. ಆಂಜನೇಯ ನಗರ, ಮಾಳಮಾರುತಿ, ಮಹಾಂತೇಶನಗರ ಸೇರಿದಂತೆ ಸುತ್ತಮುತ್ತಲಿನ ಹಲವಾರು ಭಕ್ತರು ಜನರು ಭಾಗಿಯಾಗಿದ್ಧರು.
ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಮಂದಿರ ಕಮೀಟಿಯ ಅಧ್ಯಕ್ಷರಾದ ಗಿರಿರಾಜ್ ಪಾಟೀಲ್, ಕಾರ್ಯದರ್ಶಿಯಾದ ನಾಗರಾಜ್ ಚಿಕ್ಕೋರ್ಡೆ, ಕೃಷ್ಣ ಬೆನಕೆ, ಮಾಜಿ ಶಾಸಕ ಅನಿಲ ಬೆನಕೆ, ಅರುಣ ಮರೆನ್ನವರ, ಸಂತೋಷ ಪರ್ವತರಾವ್, ಮಂಜುನಾಥ ಕುಲಕರ್ಣಿ, ಮಹಾಂತೇಶ ಶೇಗಾಂವಿ, ಮಾಜಿ ನಗರಸೇವಕಿ ಪುಷ್ಪಾ ಪರ್ವತರಾವ್, ಮದನಕುಮಾರ ಭೈರಪ್ಪನ್ನವರ ಇನ್ನುಳಿದ ಗಣ್ಯರು ಶ್ರಮಿಸಿದರು.