ಮಹಾರಾಷ್ಟ್ರದ ಪುಣೆನಲ್ಲಿಯ ಧ್ರುವ ಗ್ಲೋಬಲ ಸ್ಕೂಲನಲ್ಲಿ ಭಾನುವಾರ ನಡೆದ ಬ್ರೈನೊ ಬ್ರೈನ್ ಇಂಟರ್ನ್ಯಾಷನಲ ಸಂಸ್ಥೆ ಹಮ್ಮಿಕೊಂಡಿದ್ದ ರಾಜ್ಯಮಟ್ಟದ 162ನೆe ಬ್ರೆನೊ ಬ್ರೈನ್ ಉತ್ಸವ 2025 ರಲ್ಲಿ ಬೆಳಗಾವಿ ವಡಗಾವಿ ಶಾಖೆಯ ಒಟ್ಟು 20 ವಿದ್ಯಾರ್ಥಿಗಳು ಭಾಗವಹಿಸಿದ್ದು 5 ವಿದ್ಯಾರ್ಥಿಗಳು ಚಾಂಪಿಯನ್ಸ್ ಟ್ರೋಫಿ 6 ವಿದ್ಯಾರ್ಥಿಗಳು ಚಿನ್ನದ ಪದಕ ಮತ್ತು 9 ವಿದ್ಯಾರ್ಥಿಗಳು ಬೆಳ್ಳಿಯ ಪದಕ ಗೆದ್ದು ಸಾಧನೆಗೈದಿದ್ದಾರೆ.
ಈ ಕುರಿತು ಮಾತನಾಡಿದ ಬೆಳಗಾವಿ ವಡಗಾವಿ ಶಾಖೆಯ ತರಬೇತಿದಾರರಾದ ಜ್ಯೋತಿ ರಾಜೇಶ ಭರಮೈನವರ ಇದೊಂದು 6 ರಿಂದ 14 ವರ್ಷದ ಮಕ್ಕಳ ಚುರುಕುತನ, ಬುದ್ಧಿ ಸಾಮರ್ಥ್ಯ, ಮನೋ ಸಾಮರ್ಥ್ಯ ಹೆಚ್ಚಿಸುವ ಕೋರ್ಸ್ ಇದ್ದು ಇದರಲ್ಲಿ ನಮ್ಮ ಶಾಖೆಯ ಎಲ್ಲಕ್ಕೆ ಎಲ್ಲ ಮಕ್ಕಳು ಅತಿ ಕಡಿಮೆ ಸಮಯದಲ್ಲಿ ಹೆಚ್ಚು ವಿವಿಧ ರೀತಿಯ ಲೆಕ್ಕಗಳನ್ನು ಮಾಡುವ ಮೂಲಕ ನೂರಕ್ಕೆ ನೂರರಷ್ಟು ಫಲಿತಾಂಶ ತಂದು ಉತ್ತಮ ಸಾಧನೆಗೈದಿದ್ದಾರೆ. ಚಾಂಪಿಯನ್ ಟ್ರೋಫಿ ಪಡೆದ ಧ್ರುವ ನಾಡಗೌಡ ,ಆರೋಹಿ ಕೊಲ್ಲಾಪುರೆ,ಕೃಷ್ಣ ಬಾಗೋಜಿ, ವೈಷ್ಣವಿ ಬಾಗೋಜಿ, ಸ್ವರಾಲಿ ಮಾಳವಿ ಮತ್ತು ಗೋಲ್ಡ್ ಮೆಡಲ ಪಡೆದ ಮನೋಜ್ ಹೊನಗೆಕರ , ಕ್ರೀಶಾ ಮಠಪತಿ, ಸಾನ್ವಿ ಮಕಾಟಿ,
ಪೂರ್ವಿ ಮಕಾಟಿ, ಶ್ರೇಯಸ ಕಲಾಲ, ದೃಷ್ಟಿ ನಾಗೋಜಿಚೆ ಮತ್ತು ಬೆಳ್ಳಿಯ ಪದಕ ಗೆದ್ದ ಆರಾಧ್ಯ ಚೌಗುಲೆ , ಸಿದ್ದಾರ್ಥ ತಿಗಡಿ ,ಶ್ರೀಸಾಯಿ ಉಪ್ಪಾರ, ಸ್ವರಾ ಸೂರ್ಯ ವಂಶಿ, ಶ್ಲೋಕ್ ಬಾಗೇವಾಡಿ, ಪೃಥ್ವಿರಾಜ ಡವಳಿ, ಪೃಥ್ವಿ ದೇವರಮನಿ, ಸಾನ್ವಿ ದೇವರಮನಿ, ಮಿಥೀ ಲೇಶ ಅಂಬ್ರೊಳೆ, ಇವರ ಸಾಧನೆ ಮತ್ತು ಪಾಲಕರ ಪ್ರೋತ್ಸಾಹಕ್ಕೆ ಬ್ರೈನೋ ಬ್ರೈನ್ ಬ್ರೈಟ್ ಕಿಡ್ಸ್ ವಡಗಾವಿ ಶಾಖೆಯ ತರಬೇತುದಾರರಾದ ಜ್ಯೋತಿ ಬರಮೈನವರ ಅಭಿನಂದನೆ ಸಲ್ಲಿಸಿದ್ದಾರೆ. ಈ ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳಿಗೆ ಮತ್ತು ಪೋಷಕರಿಗೆ ತರಬೇತುದಾರರಾದ ಜ್ಯೋತಿ ಭರಮೈನವರ ಅಭಿನಂದಿಸಿದರು.