Belagavi

ಲಕ್ಷ್ಮೀ ಅಕ್ಕಾ ಅವರು ದಯವಿಟ್ಟು ತಮ್ಮ ಕಿವಿಗಳನ್ನು ತಪಾಸಿಸಿಕೊಳ್ಳಲಿ…

Share

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ ಕೇಳಿದ್ದು ಒಂದು ಅರ್ಥೈಸಿಕೊಂಡಿದ್ದು ಬೇರೆ. ದಯವಿಟ್ಟು ಅವರು ತಮ್ಮ ಕಿವಿಗಳನ್ನು ತಪಾಸಿಸಿಕೊಂಡು ಕರ್ನಾಟಕದಲ್ಲಿ ಬೆಂಕಿ ಹಚ್ಚುವ ಕೆಲಸವನ್ನು ನಿಲ್ಲಿಸಬೇಕೆಂದು ಬಿಜೆಪಿ ಮುಖಂಡ ಧನಂಜಯ ಜಾಧವ ಸಲಹೆ ನೀಡಿದ್ದಾರೆ.

ಬೆಳಗಾವಿ ಸೇರಿದಂತೆ ರಾಜ್ಯ ರಾಜಕಾರಣದಲ್ಲಿ ಪ್ರತಿಭಟನೆ ಆರೋಪ ಪ್ರತ್ಯಾರೋಪಗಳು ಕೇಳಿಬರುತ್ತಿವೆ. ಇದಕ್ಕೆ ಬೆಳಗಾವಿ ಗ್ರಾಮೀಣ ಶಾಸಕಿ ಮತ್ತು ಸಚಿವೆ ಲಕ್ಷ್ಮೀ ಹೆಬ್ಬಾಳಕರ ಕಾರಣವಾಗಿದ್ದಾರೆ. ಬಹುಶಃ ಅವರ ಕಿವಿಗಳಲ್ಲಿ ಏನೋ ತೊಂದರೆ ಇದೆ ಏನಿಸುತ್ತಿದೆ. ನಝೀರ್ ಅಹ್ಮದ್ ಚುನಾವಣೆ ಗೆದ್ದಾಗ ಸಚಿವೆ ಹೆಬ್ಬಾಳ್ಕರ ಅವರ ಮುಂದೆಯೇ ಪಾಕಿಸ್ತಾನ ಜಿಂದಾಬಾದ್ ಘೋಷಣೆಗಳನ್ನು ನೀಡಿದ್ದರು. ಅವುಗಳನ್ನು ಸುಳ್ಳು ಎಂದಿದ್ದರು. ವಿಧಾನಸಭೆ ಚುನಾವಣೆಯ ಫಲಿತಾಂಶದ ವೇಳೆಯೂ ಕೂಡ ಆರ್.ಪಿ.ಡಿ ವೃತ್ತದಲ್ಲಿ ಪಾಕಿಸ್ತಾನ ಪರ ಘೋಷಣೆ ನೀಡಿದಾಗಲೂ ಅದು ಸುಳ್ಳು ಎಂದಿದ್ದರು. ಈಗ ಪರಿಷತ್ತಿನಲ್ಲಿ ಸದಸ್ಯ ಸಿ.ಟಿ. ರವಿ ಫಸ್ಟ್ ರೇಟೆಡ್ ಎಂಬುದನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ.

ಬಹುಶಃ ಲಕ್ಷ್ಮೀ ಹೆಬ್ಬಾಳ್ಕರ ಅವರಿಗೆ ಕಿವಿಯಲ್ಲಿ ತೊಂದರೆ ಇದೆ. ದಯವಿಟ್ಟು ಒಳ್ಳೆಯ ಡಾಕ್ಟರ ಬಳಿ ಚಿಕಿತ್ಸೆ ಪಡೆದುಕೊಳ್ಳಿ. ನಿಮ್ಮ ತಪ್ಪು ಕೇಳುವಿಕೆಯಿಂದ ಸಂಪೂರ್ಣ ಕರ್ನಾಟಕದಲ್ಲಿ ಗೊಂದಲ ನಿರ್ಮಾಣವಾಗಿದೆ. ಸಿ.ಟಿ ರವಿ ಅವರು ಹೇಳಿರುವುದೇ ಬೇರೆ. ಅದನ್ನ ತಪ್ಪಾಗಿ ಖೊಟ್ಟಿ ಕೇಸ್ ದಾಖಲಿಸಲಾಗಿದೆ. ದಯವಿಟ್ಟು ಅಕ್ಕಾ ಅವರು ಕರ್ನಾಟಕದಲ್ಲಿ ಬೆಂಕಿ ಹಚ್ಚುವ ಕೆಲಸವನ್ನು ನಿಲ್ಲಿಸಿ, ಕಿವಿಯ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು ಎಂದಿದ್ದಾರೆ.

Tags:

error: Content is protected !!