Belagavi

ಅಧಿವೇಶನದ ವೇಳೆ ಅಭಿನಂದನಾರ್ಯ ಸೇವೆ…

Share

ಅಧಿವೇಶನದ ವೇಳೆ ಹಾಗೂ ನಗರದ ಸ್ವಚ್ಛತೆಯನ್ನು ಪ್ರತಿದಿನ ಪೌರಕಾರ್ಮಿಕರು ಅಭಿನಂದನಾರ್ಹ ಸೇವೆ ಸಲ್ಲಿಸುತ್ತಾರೆ. ಅವರಲ್ಲಿ ಸರ್ಕಾರಿ ಸೌಲಭ್ಯ ಮತ್ತು ಕಾನೂನಿನ ಜಾಗೃತಿ ಮೂಡಿಸುವುದು ಅವಶ್ಯವಾಗಿದೆ ಎಂದು ಉತ್ತರ ಶಾಸಕ ಆಸೀಫ್ ಸೇಠ್ ಹೇಳಿದರು.

ಬೆಳಗಾವಿ ಕುಮಾರ ಗಂಧರ್ವ ಕಲಾಮಂದಿರದಲ್ಲಿ ಚಳಿಗಾಲದ ಅಧಿವೇಶನ -2024 ಮತ್ತು ನಗರ ಸ್ವಚ್ಚತೆ, ಸೌಂದರ್ಯಿಕರಣ ಇನ್ನುಳಿದ ವೇಳೆ ಹಗಲು ರಾತ್ರಿ ಎನ್ನದೇ ಕಾರ್ಯನಿರ್ವಹಿಸಿದ ಪಾಲಿಕೆಯ ಪೌರಕಾರ್ಮಿಕರಿಗೆ ಅಭಿನಂದನಾ ಸಮಾರಂಭ, ಪೌರಕಾರ್ಮಿಕರೊಂದಿಗೆ ಸಮಾಲೋಚನೆ, ಸರ್ಕಾರದಿಂದ ದೊರೆಯುವ ಸೌಲಭ್ಯಗಳ ಮಾಹಿತಿ ಮತ್ತು ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಮಹಾಪೌರ ಸವೀತಾ ಕಾಂಬಳೆ, ಉತ್ತರ ಶಾಸಕ ಆಸೀಫ್ ಸೇಠ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ನ್ಯಾಯಾಧೀಶರು ಮುರಳಿ ಮೋಹನರೆಡ್ಡಿ, ಮಹಾಪಾಲಿಕೆ ಆಯುಕ್ತರಾದ ಶುಭಾ. ಬಿ. ಇನ್ನುಳಿದ ಗಣ್ಯರು ಉಪಸ್ಥಿತರಿದ್ಧರು. ಕಾರ್ಯಕ್ರಮವನ್ನು ಉದ್ಧೇಶಿಸಿ ಮಾತನಾಡಿದ ನ್ಯಾಯಾಧೀಶರಾದ ಮುರಳಿ ಮೋಹನರೆಡ್ಡಿ, ಚಳಿ ಇರಲಿ, ಮಳೆ ಇರಲಿ ಗಾಳಿ ಇರಲಿ ಪೌರ ಕಾರ್ಮಿಕರು ಮಾತ್ರ ತಮ್ಮ ಸೇವೆಯನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತಾರೆ. ಇದು ಪ್ರಶಂಸನೀಯ. ನಗರ ಸ್ವಚ್ಛತೆಯನ್ನು ಕಾಪಾಡಲು ಪೌರ ಕಾರ್ಮಿಕರು ಶ್ರದ್ಧೆಯಿಂದ ಸೇವೆ ಸಲ್ಲಿಸುತ್ತಾರೆ. ವಿವಿಧ ಸೌಲಭ್ಯಗಳು ಮತ್ತು ಕಾನೂನು ಸೇವೆಗಳು ಪೌರ ಕಾರ್ಮಿಕರಿಗೆ ಸಿಗುವಂತಾಗಬೇಕು. ಇದರ ಜಾಗೃತಿಗಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.

ಉತ್ತರ ಶಾಸಕ ಆಸೀಫ್ ಸೇಠ್ ಅವರು ಬೆಳಗಾವಿ ನಗರವನ್ನು ಸ್ವಚ್ಛವಾಗಿಡಿಸಲು ಪೌರ ಕಾರ್ಮಿಕರು ಪ್ರತಿದಿನ ಶ್ರಮವಹಿಸುತ್ತಾರೆ. ಅಧಿವೇಶನದ ವೇಳೆ ನಗರದಲ್ಲಿ ಅತ್ಯಂತ ಅಭಿನಂದನಾರ್ಹ ಸೇವೆಯನ್ನು ಪೌರ ಕಾರ್ಮಿಕರು ಸಲ್ಲಿಸಿದ್ದಾರೆ. ಅವರಿಗೆ ಬೇಕಾದ ಸೌಲಭ್ಯಗಳು ಸಿಗುವಂತಾಗಬೇಕು. ಈ ಕುರಿತು ಜಾಗೃತಿಯನ್ನು ಮೂಡಿಸಲಾಗುತ್ತಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು.

ಇನ್ನು ಮಹಾಪಾಲಿಕೆ ಆಯುಕ್ತರಾದ ಶುಭಾ .ಬಿ. ಅವರು ಬೆಳಗಾವಿ ಮಹಾನಗರ ಪಾಲಿಕೆಯ ಅಧಿಕಾರಿಗಳು ಪೌರ ಕಾರ್ಮಿಕರಿಗೆ ಬಾಕಿ ಭತ್ಯೆ ನೀಡಲು ಶ್ರಮವಹಿಸಿದ್ದು, ಪ್ರಶಂಸನೀಯವಾಗಿದೆ. ನಿತ್ಯವೂ ನಗರ ಸ್ವಚ್ಛತೆ ಮತ್ತು ಸುಂದರತೆಯನ್ನು ಕಾಪಾಡುವ ಪೌರ ಕಾರ್ಮಿಕರ ಆರೋಗ್ಯವನ್ನು ಬೆಳಗಿನ ಜಾವ ಪೌಷ್ಟಿಕ ಆಹಾರವನ್ನು ನೀಡಲಾಗುವುದು. ಎಲ್ಲರೂ ಪೌಷ್ಠಿಕ ಆಹಾರವನ್ನು ಸೇವಿಸಬೇಕೆಂದು ಕರೆ ನೀಡಿದರು.

ಈ ವೇಳೆ ನಗರಸೇವಕರು, ಪಾಲಿಕೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಇನ್ನುಳಿದವರು ಭಾಗಿಯಾಗಿದ್ಧರು.

Tags:

error: Content is protected !!