Events

ಜಾತ್ರೆಯಲ್ಲಿಯೇ ವಿಶೇಷ ಜಾತ್ರೆ ನಾಗಠಾಣ ಭಂಡಾರದ ಜಾತ್ರೆ: ಕಣ್ತುಂಬಿಕೊಂಡ ಭಕ್ತಸಾಗರ

Share

ಉತ್ತರ ಕರ್ನಾಟಕದಲ್ಲಿ ಜಾತ್ರೆ ಅಂದ್ರೆನೇ ಬಹಳ‌ ವಿಶೇಷವಾಗಿರುತ್ತೆ. ಅದ್ರಲ್ಲೂ ಬಂಡಾರ ಜಾತ್ರೆ ಅಂದ್ರೆ ಇಡೀ ರಾಜ್ಯದಲ್ಲೇ ಅತ್ಯಂತ ವಿಶಿಷ್ಟವಾಗಿರುತ್ತೆ. ನಾಗಠಾಣ ಗ್ರಾಮದಲ್ಲಿ ನಡೆದ ಬಂಡಾರ ಜಾತ್ರೆಯ ಸಂಭ್ರಮ ಹೇಗಿತ್ತು ನೋಡಿ.

ಗುಮ್ಮಟನಗರಿ ವಿಜಯಪುರ ತಾಲೂಕಿನ ನಾಗಠಾಣ ಗ್ರಾಮದಲ್ಲಿ ನಡೆಯುವ ಭೀರದೇವರ ಹಾಗೂ ಪರಮಾನಂದ ದೇವರ ಜಾತ್ರೆ ಅದ್ದೂರಿಯಾಗಿ ನಡೆಯಿತು. ಕರ್ನಾಟಕ, ಮಹಾರಾಷ್ಟ್ರ, ಗೋವಾ ಸೇರಿದಂತೆ ವಿವಿಧೆಡೆಯಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಜಾತ್ರೆಯಲ್ಲಿ ಭಾಗಿಯಾದರು. ಜಾತಿ, ಮತ, ಪಂಥ ಭೇದವಿಲ್ಲದೇ ಎಲ್ಲರೂ ಜಾತ್ರೆಯಲ್ಲಿ ಭಾಗಿಯಾಗಿ ಭಂಡಾರ ಎರಚುವುದು ಜಾತ್ರೆಯ ವಿಶೇಷವಾಗಿದೆ.‌ ಹೀಗಾಗಿಯೇ ಇದನ್ನ ಬಂಡಾರದ ಜಾತ್ರೆ ಎಂದೇ ಕರೆಯುತ್ತಾರೆ. ದೀಪಾವಳಿ ದಿನದಂದು ನಡೆಯುವ ಜಾತ್ರೆಯಲ್ಲಿ ದೇವರ ಮೆರವಣಿಗೆ ನೋಡೋಕೆ ಲಕ್ಷಾಂತರ ಭಕ್ತರು ಕಾಯುತ್ತಾರೆ. ಊರಿನಲ್ಲಿ ಪಲಕ್ಕಿಗಳು ಬರುತ್ತಿದಂತೇಯೆ ಭಕ್ತರು ಬಂಡಾರ ಎರಚಿ ಸಂಭ್ರಮಿಸುತ್ತಾರೆ.

ಬೀರದೇವರ ಶೃಂಗಾರ ಚೌಕಿಯೊಂದಿಗೆ, ಕರಡಿ‌ ಮಜಲು ವಾದ್ಯಗಳೊಂದಿಗೆ ಪಲಕ್ಕಿ ಉರಿಗೆ ಬರುತ್ತವೆ. ಬಳಿಕ ಗ್ರಾಮದಲ್ಲಿರುವ ಗಂಗೆ ಸೀತಾಳದಲ್ಲಿ ಪೂಜೆ ಮುಗಿಸಿ ಊರಿನಲ್ಲಿ ಅದ್ದೂರಿ ಮೆರವಣಿಗೆ ಮಾಡಲಾಗುತ್ತದೆ. ಮೆರವಣಿಗೆ ಬಳಿಕ ದೇವಸ್ಥಾನಕ್ಕೆ ಆಗಮಿಸುವ ಪಲಕ್ಕಿ ಮೇಲೆ ಹಾಗೂ ದೇವಸ್ಥಾನದ ಮೇಲೆ ಬಂಡಾರ, ಖಾರಿಕ್ ಎಸೆದು ನಮಸ್ಕಾರ ಮಾಡುತ್ತಾರೆ‌‌. ಧಾರ್ಮಿಕ ಕಾರ್ಯಕ್ರಮದ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡಾ ನಡೆಯುತ್ತವೆ. ಪ್ರತಿ ವರ್ಷ ಜಾತ್ರೆಗೆ ಬರುವ ಭಕ್ತರ ಸಂಖ್ಯೆ ಹೆಚ್ಚಳವಾಗುತ್ತಿದೆ. ಹರಕೆ ಹೊತ್ತವರು ಇಲ್ಲಿಗೆ ಬಂದು ಹರಕೆ ತಿರಿಸೋದು ವಾಡಿಕೆ ಇದೆ.

ಒಟ್ಟಾರೆ ನಾಗಠಾಣ ಗ್ರಾಮದಲ್ಲಿ ನಡೆಯುವ ಬಂಡಾರ ಜಾತ್ರೆ ರಾಜ್ಯದಲ್ಲೇ ಅತ್ಯಂತ ವಿಶಿಷ್ಟವಾಗಿದ್ದು, ಭಕ್ತರು ಧಾರ್ಮಿಕ ಕಾರ್ಯಗಳ ಮೂಲಕ ವಿಜ್ರಂಭಣೆಯಿಂದಾ ಜಾತ್ರೆ ಮಾಡುತ್ತಾರೆ.

ವಿಜಯಕುಮಾರ ಸಾರವಾಡ
ಇನ್ ನ್ಯೂಜ್
ವಿಜಯಜಾತ್ರೆ:

Tags:

error: Content is protected !!