ಜನ್ಮ ನೀಡಿದ ತಂದೆ-ತಾಯಿಯರು ದೇವರಕ್ಕೆ ಸಮಾನ. ಆದರೇ ಈಗೀನ ಜನರೇಶನ್ ಗ್ಯಾಪ್ ಹಾಗೂ ವಿಭಕ್ತ ಕುಟುಂಬ ವ್ಯವಸ್ಥೆಯಲ್ಲಿ ಸಂಬಂಧಗಳು ಮುರಿದು ಬಿದ್ದಿವೆ. ತಾವೂ ಕಟ್ಟಿದ ಮನೆಯಲ್ಲಿ ಮಕ್ಕಳು ವಾಸಿಸಿದರೇ, ತಂದೆ-ತಾಯಿಗಳು ವೃದ್ಧಾಶ್ರಮಕ್ಕೆ ಸೇರುತ್ತಿದ್ದಾರೆ. ಆದರೇ ಇಲ್ಲೊಬ್ಬ ವ್ಯಕ್ತಿ 12 ಜ್ಯೋರ್ತಿಲಿಂಗಗಳ ಪಾದಯಾತ್ರೆ ಮಾಡಿ, ಇದರ ವಿರುದ್ಧ ಜಾಗೃತಿ ಮೂಡಿಸುತ್ತಿದ್ದಾನೆ. ಈ ಕುರಿತು ಇಲ್ಲಿದೆ ಒಂದು ಇಂಟರೆಸ್ಟಿಂಗ್ ಸ್ಟೋರಿ.
ಹೆಗಲಿಗೆ ಬಾಗ್…ಕಣ್ಣಿಗೆ ಕನ್ನಡಕ. ಸರಳ ಸ್ವಭಾವದ ಈ ವ್ಯಕ್ತಿ 12 ಜ್ಯೋರ್ತಿಲಿಂಗಗಳ ಪಾದಯಾತ್ರೆ ಕೈಗೊಂಡು ಸುಮಾರು 2 ವರ್ಷವಾಯಿತು. ಇದರಲ್ಲೇನು ವಿಶೇಷ ಅಂತೀರಾ? ಹೌದು, ಎಲ್ಲರೂ ದೇವದರ್ಶನ ಮಾಡುವುದು ತಮಗೋಸ್ಕರ ತಮ್ಮ ಕುಟುಂಬಕ್ಕೋಸ್ಕರ. ಆದರೇ ಈತನ ಪಾದಾಯಾತ್ರೆ ಸಂಕಲ್ಪವೇ ಬೇರೆಯಾಗಿದೆ. ದೇಶ ಮತ್ತು ಮಾನವರಲ್ಲಿ ಮುರಿದು ಬೀಳುತ್ತಿರುವ ತಂದೆ-ತಾಯಿಯ ಸಂಬಂಧಗಳನ್ನು ಗಟ್ಟಿಯಾಗಿಡಪ್ಪ ದೇವರೇ ಎಂದು ಈ ಯುವಕ ಪಾದಯಾತ್ರೆ ಕೈಗೊಂಡಿದ್ದಾನೆ.
ಈತನ ಹೆಸರು ದಿನೇಶ ಭರಮಾ ಬೋರಶೆ. ಮಹಾರಾಷ್ಟ್ರದ ಖಾನದೇಶದ ಧೂಳೆ ತಾಲೂಕಿನವನು. ಈತ 2022ರ ಶಿವರಾತ್ರಿಯಂದು ತನ್ನ ಪಾದಯಾತ್ರೆಯನ್ನು ಆರಂಭಿಸಿದ್ದಾನೆ. ಈಗಾಗಲೇ 12 ಜ್ಯೋರ್ತಿಲಿಂಗಗಳ ಪೈಕಿ 10 ಜ್ಯೋರ್ತಿಲಿಂಗಗಳ ದರ್ಶನ ಪಡೆದಿದ್ದಾನೆ. ಇತ್ತಿಚೆಗೆ ಆಧುನಿಕ ಯುಗದಲ್ಲಿ ವಿಭಕ್ತ ಕುಟುಂಬಗಳು ಹೆಚ್ಚಾಗಿವೆ. ಕಷ್ಟಪಟ್ಟಿ ಕಟ್ಟಿದ ಮನೆ ಮಕ್ಕಳಿಗಾದರೇ, ತಂದೆ-ತಾಯಂದಿರು ವೃದ್ಧಾಶ್ರಮಕ್ಕೆ ಸೇರುತ್ತಿದ್ದಾರೆ, ಮನುಕುಲಕ್ಕೆ ಅಂಟಿಕೊಂಡ ಈ ಕೆಟ್ಟ ಸಂಪ್ರದಾಯ ದೂರವಾಗಲಿ. ಸಂಬಂಧಗಳ ಮೌಲ್ಯಗಳು ಎಲ್ಲರಿಗೂ ಅರ್ಥವಾಗುವ ಶಕ್ತಿ ನೀಡಲೆಂದು ದಿನೇಶ ಜ್ಯೋರ್ತಿಲಿಂಗ ಪಾದಯಾತ್ರೆಯನ್ನು ಆರಂಭಿಸಿದ್ದಾನೆ. ಇಂದು ತಮಿಳುನಾಡಿನ ರಾಮೇಶ್ವರಂನಿಂದ ಬೆಳಗಾವಿಗೆ ಆಗಮಿಸಿದ ದಿನೇಶ ಪ್ರತಿದಿನ 20 ರಿಂದ 60 ಕಿ.ಮೀ. ಕ್ರಮಿಸುತ್ತಾನೆ. ಈಗ ಬೆಳಗಾವಿಯಿಂದ ಪುಣೆ ಮತ್ತು ಅಲ್ಲಿಂದ ಭೀಮಾಶಂಕರಕ್ಕೆ ತನ್ನ ಪ್ರಯಾಣವನ್ನು ಬೆಳೆಸಿದ್ದಾನೆ.
ನಿಜಕ್ಕೂ ದಿನೇಶನ ಸಂಕಲ್ಪ ವಿನೂತನವಾಗಿದ್ದು. ಆತನ ಈ ಪಾದಯಾತ್ರೆ ಸಂಪೂರ್ಣವಾಗಲಿ ಎಂದು ಬೆಳಗಾವಿಗರು ಹಾರೈಸುತ್ತಿದ್ದಾರೆ.