ಪ್ರತಿಯೊಬ್ಬ ರೈತ ಕಬ್ಬು ಬೆಳೆಯಲು ಮಾಡುತ್ತಿರುವ ಬೇಸಾಯದಲ್ಲಿ ಹೊಸ, ಹೊಸ ತಂತ್ರಜ್ಞಾನ ಬಳಸಿ ಬೆಳೆಯಬೇಕು, ಭಾರತ ದೇಶದಲ್ಲಿ ಸರಾಸರಿ ಇಳುವರಿ ಒಂದು ಏಕರ್ ಕ್ಷೇತ್ರದಲ್ಲಿ 30 ರಿಂದ 40 ಟನ್ನು ವರಿಗೆ ಕಬ್ಬು ಬೆಳೆಯಬಹುದು, ಆದರೆ ವಿದೇಶದ ಮೊರಸಿಸ್, ಬ್ರಾಜಿಲ್, ಆಸ್ಟ್ರೇಲಿಯಾ ಮುಂತಾದ ಮುಂದೆವರಿದ ದೇಶಗಳಲ್ಲಿ ಒಂದು ಏಕರ್ ಕ್ಷೇತ್ರದಲ್ಲಿ 190 ಟನ್ನ ಕಬ್ಬು ಬೆಳೆಯುತ್ತಾರೆ. ಇಲ್ಲಿಯ ರೈತರು ಅಧಿಕ ಇಳುವರಿ ಪಡೆದುಕೊಳ್ಳಲು ಬೇಸಾಯದಲ್ಲಿ ಬದಲಾವಣೆ ಬಳಸಬೇಕೆಂದು ಸಂಕೇಶ್ವರದ ನಿಜಲಿಂಗಪ್ಪೋ ಕಬ್ಬು ಬೆಳೆ ಸಂಶೋಧನಾ ಕೇಂದ್ರದ ವಿಜ್ಞಾನಿ ಆರ್. ಬಿ. ಖಂಡಾಂಗಳೆ ಹೇಳಿದರು.

ಮಂಗಳವಾರ ಸಂಜೆ ಶೀಡಬಾಳದ ಶಾಂತಿಸಾಗರ್ ಜೈನ್ ಆಶ್ರಮ ದಲ್ಲಿ ಶಿರೋಳದ ಶ್ರೀ ದತ್ತ ಸಕ್ಕರೆ ಕಾರ್ಖಾನೆಯ ವತಿಯಿಂದ ಕಬ್ಬು ಬೆಳೆ ಇಳುವರಿ ಹೆಚ್ಚಿಸಲು ರೈತರ ಸಮಾವೇಶ ಹಮ್ಮಿಕೊಂಡಿದ್ದರು, ಈ ಸಮಾವೇಶದಲ್ಲಿ ಉಪನ್ಯಾಸಕರರಾಗಿ ಆರ್. ಬಿ. ಖಂಡಾಂಗಳೆ ಉಪಸ್ಥಿತರಾಗಿ ಕಬ್ಬಿನ ಅಧಿಕ ಇಳುವರಿ ಬಗ್ಗೆ ವಿವರವಾದ ಮಾಹಿತಿ ನೀಡಿದರು.

ದತ್ತ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಗಣಪತರಾವ್ ಪಾಟೀಲ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಶೀಡಬಾಳ
ಪಟ್ಟಣದ ಹಿರಿಯ ರೈತ ಮುಖಂಡ ಬಾಬಾಸಾಹೇಬ್ ಸೌದತ್ತಿ ಅಧ್ಯಕ್ಷತೆ ವಹಿಸಿದರು.
ಉಪನ್ಯಾಸಕಾರ ಆರ್. ಬಿ. ಖಂಡಾಂಗಳೆ ಮುಂದೆವರೆದು ಮಾತನಾಡುವಾಗ ಕಬ್ಬಿನ ಬೆಳೆ ಅಧಿಕ ಇಳುವರಿ ಪಡೆಯಲು ನಾಟ್ಯ ಮಾಡುವ ಪೂರ್ವದಲ್ಲಿ ಭೂಮಿ ಹದಗೊಳಿಸಬೇಕು, ನಾಟಿ ಮಾಡಿದ ಬಳಿಕ ಕ್ಷೇತ್ರದಲ್ಲಿ ಕಬ್ಬಿನ ಸಂಖ್ಯೆ ಅವುಗಳಿಗೆ ಬೇರುಗಳ ಮುಖಾಂತರ ನೀಡುವ ಗೊಬ್ಬರಗಳು ಮತ್ತು ಅದರ ಎಲೆಗಳಿಗೆ ನೀಡುವ ಪೋಷಕ ಅಂಶಗಳು, ಸಿಂಪರಣೆಗಳು ಬಗ್ಗೆ ಮಾಹಿತಿ ಪಡೆದು ಬೆಳೆ ಬೆಳೆಯಬೇಕು, ಕಬ್ಬಿನಲ್ಲಿ ಸಕ್ಕರೆ ತಯಾರಿಸಬೇಕಾದರೆ ಎಲೆಗಳಲ್ಲಿ ಸೂರ್ಯನ ಬೆಳಕು ಅವಶಕ್ತಿ ಇದೆ. ಸದೃಢವಾಗಿ ಎಲೆಗಳು ಬೆಳೆದರೆ ಕಬ್ಬು ಬೆಳೆ ಆದಾಯ ಹೆಚ್ಚಿಸುತ್ತದೆ,ಎಂದು ಅನೇಕ ಸೂಚನೆಗಳು ರೈತರಿಗೆ ನೀಡಿದರು.
ಬೈಟ್
ಶಿರೋಳದ ದತ್ತ ಸಕ್ಕರೆ ಕಾರ್ಖಾನೆಯ ಕಬ್ಬು ಸಂಶೋಧನಾ ಕೇಂದ್ರದ ತಜ್ಞ ಎಸ್. ಎಸ್. ಹೆಗನ್ನಾ ಮಾಹಿತಿ ನೀಡಿದರು. ಸಕ್ಕರೆ ಕಾರ್ಖಾನೆ ಅಧ್ಯಕ್ಷ ಗಣಪತರಾವ್ ಪಾಟೀಲ್ ರೈತರಿಗೆ ಮಾರ್ಗದರ್ಶನ ನೀಡಿದರು.
ಪ್ರಾರಂಭದಲ್ಲಿ ಸಕ್ಕರೆ ಕಾರ್ಖಾನೆಯ ಸಂಸ್ಥಾಪಕ ದಿವಂಗತ ಅಪ್ಪಾಸಾಹೇಬ್ ಪಾಟೀಲ್ ಇವರ ಪ್ರತಿಮೆಗೆ ಪೂಜೆ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಸಕ್ಕರೆ ಕಾರ್ಖಾನೆ ಉಪಾಧ್ಯಕ್ಷ ಅರುಣ್ ದೇಸಾಯಿ, ನಿರ್ದೇಶಕರಾದ ಇಂದ್ರಜಿತ್ ಪಾಟೀಲ್, ಮಹೇಂದ್ರ ಬಾಗಿ, ಅಮರ ಯಾದವ್, ಜ್ಯೋತಿಕುಮಾರ್ ಪಾಟೀಲ್, ಆಶ್ರಮದ ಅಧ್ಯಕ್ಷ ರಾಜು ನಾಂದ್ರೆ, ಅಜಿತ್
ನರಸಗೌಡರ್, ಬಾಳಗೌಡ ಪಾಟೀಲ್, ಪ್ರಕಾಶ್ ಪಾಟೀಲ್, ಸುರಗೌಡ ಪಾಟೀಲ್, ಸುನಿಲ್ ಮಲಗಾವೆ, ಸೇರಿದಂತೆ ಅನೇಕರು ಇದ್ದರು.
