ರಾಮದುರ್ಗ: ತಾಲ್ಲೂಕಿನ ಹಿರೇಕೊಪ್ಪ ಕೆ.ಎಸ್. ಗ್ರಾಮದ ವಿವಿಧೋದ್ದೇಶ ಗ್ರಾಮೀಣ ಕೃಷಿ ಸಹಕಾರ ಸಂಘದ ಅಧ್ಯಕ್ಷರಾಗಿ ಉಮೇಶ ದುಂಡಪ್ಪ ಕೊಳವಿ ಮತ್ತು ಉಪಾಧ್ಯಕ್ಷರಾಗಿ ತಿಮ್ಮನಗೌಡ ವೆಂಕನಗೌಡ ಪಾಟೀಲ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸದಸ್ಯರಾಗಿ ಕೃಷ್ಣಪ್ಪ ಪಂಚಗಾವಿ, ಪ್ರಕಾಶ ಚವಲಿ, ಬಾಳಾಸಾಹೇಬ ಶಿಂಧೆ, ಈರಪ್ಪ ಹುಬ್ಬಳ್ಳಿ, ಬುಡನಸಾಬ್ ಮಕ್ತುಮನವರ, ಮಹಾದೇವ ಆರೇರ, ಪದ್ದವ್ವ ಚವರಡ್ಡಿ, ಫಾತಿಮಾ ದಬಾಡಿ, ಸುಧಾ ದೊಡಮನಿ, ಲಕ್ಕಪ್ಪ ತಳವಾರ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಘೋಷಿಸಿದರು.
‘ನಾನು ಎಲ್ಲ ಸದಸ್ಯರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಉತ್ತಮವಾಗಿ ಕೆಲಸ ಮಾಡುತ್ತೇನೆ. ರೈತರಿಗೆ ಸಕಾಲಕ್ಕೆ ವಿವಿಧ ಸೌಲಭ್ಯ ತಲುಪಿಸುತ್ತೇನೆ. ಜತೆಗೆ ಸಂಘದ ಪ್ರಗತಿಗೂ ಶ್ರಮಿಸುತ್ತೇನೆ’ ಎಂದು ಉಮೇಶ ಕೊಳವಿ ತಿಳಿಸಿದರು.
